ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರಕ್ಕೆ ಮತ್ತೆ ಹಿನ್ನಡೆ, ನಿರುದ್ಯೋಗ ಪ್ರಮಾಣ ಏರಿಕೆ

|
Google Oneindia Kannada News

Recommended Video

ಉದ್ಯೋಗ ಒದಗಿಸುವಲ್ಲಿ ವಿಫಲವಾದ ನರೇಂದ್ರ ಮೋದಿ ಸರ್ಕಾರ | Oneindia Kannada

ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾದರೂ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ ಎಂದು ಮತ್ತೊಮ್ಮೆ ವರದಿ ಬಂದಿದೆ.

2019ರ ಏಪ್ರಿಲ್ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 7.6ಕ್ಕೆ ಏರಿಕೆಯಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆಯ ಮುಖ್ಯಸ್ಥ ಮಹೇಶ್ ವ್ಯಾಸ್ ಹೇಳಿದ್ದಾರೆ.

ಅಕ್ಟೋಬರ್ 2016ರಿಂದ ಇಲ್ಲಿ ತನಕ ಏಪ್ರಿಲ್ ತಿಂಗಳ ನಿರುದ್ಯೋಗ ಪ್ರಮಾಣ (7.6%)ವೇ ಅಧಿಕ ಎಂದು ವರದಿ ಹೇಳಿದೆ. ಮಾರ್ಚ್ ತಿಂಗಳಿನಲ್ಲಿ ಶೇ6.71 ರಷ್ಟು ಹಾಗೂ ಫೆಬ್ರವರಿ ತಿಂಗಳಿನಲ್ಲಿ ಶೇ 7.2ರಷ್ಟಿತ್ತು ಎದು ಸಿಎಂಐಇ ವರದಿ ಹೇಳಿದೆ.

2 ಕೋಟಿಯಲ್ಲ 22 ಲಕ್ಷ ಉದ್ಯೋಗದ ಭರವಸೆ ನೀಡುವೆ: ರಾಹುಲ್ 2 ಕೋಟಿಯಲ್ಲ 22 ಲಕ್ಷ ಉದ್ಯೋಗದ ಭರವಸೆ ನೀಡುವೆ: ರಾಹುಲ್

ಉದ್ಯೋಗದಲ್ಲಿರುವವರ ಪ್ರಮಾಣವೂ ಇಳಿಮುಖವಾಗಿದ್ದು ಕಳೆದ ವರ್ಷ ಫೆಬ್ರವರಿಯಲ್ಲಿ 40.6 ಕೋಟಿ ಜನರು ಉದ್ಯೋಗದಲ್ಲಿದ್ದರೆ, ಈ ಪ್ರಮಾಣ 2019ರ ಫೆಬ್ರವರಿ ಹೊತ್ತಿಗೆ 40 ಕೋಟಿಗೆ ಇಳಿಕೆಯಾಗಿದೆ. ಅಂದರೆ 60 ಲಕ್ಷ ಉದ್ಯೋಗಿಗಳೇ ನಿರುದ್ಯೋಗಿಗಳಾಗಿದ್ದಾರೆ.

ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ ಮೋದಿ ಸರ್ಕಾರಕ್ಕೆ ಆಘಾತ! ನಿರುದ್ಯೋಗ ಪ್ರಮಾಣ ಸಕತ್ ಏರಿಕೆ

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಿಂದ ಬಂದಿರುವ ವರದಿಯ ಪ್ರಕಾರ 2016 ರಿಂದ 2018ರ ಅವಧಿಯಲ್ಲಿ ಸುಮಾರು 50 ಲಕ್ಷ ಉದ್ಯೋಗಗಳು ಕಡಿತಗೊಳ್ಳಲಿದೆ ಎಂದು ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಸಾವಿರಾರು ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿರುವ 'ಸಿಎಂಐಇ', ಸರಕಾರದ ಇಲಾಖೆ ನಡೆಸಿರುವ ನಿರೋದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿಗಿಂತ ಇದು ಹೆಚ್ಚು ನಂಬಿಕೆಗೆ ಅರ್ಹವಾದುದು ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳಿಗೆ ಅಸ್ತ್ರವಾದ ನಿರುದ್ಯೋಗ ಅಂಕಿ ಅಂಶ

ವಿಪಕ್ಷಗಳಿಗೆ ಅಸ್ತ್ರವಾದ ನಿರುದ್ಯೋಗ ಅಂಕಿ ಅಂಶ

ಪ್ರತಿ 5 ವರ್ಷಗಳಿಗೊಮ್ಮೆ ಮಾತ್ರ ಅಧಿಕೃತವಾಗಿ ನಿರುದ್ಯೋಗ ಪ್ರಮಾಣ ದಾಖಲೆಯನ್ನು ಸರ್ಕಾರ ಬಿಡುಗಡೆ ಮಾಡುವುದು ಪದ್ಧತಿ. ಆದರೆ, ಸಿಎಂಐಇ ಈಗಾಗಲೇ ಎರಡು ಬಾರಿ ವರದಿ ನೀಡಿದೆ. ವರದಿಯ ಸತ್ಯಾಸತ್ಯತೆ ಬಗ್ಗೆ ಕೂಡಾ ಪರಿಶೀಲನೆ ನಡೆಸಲಾಗಿದೆ. ಲೋಕಸಭೆ ಚುನಾವಣೆ 2019ರ ಸಂದರ್ಭದಲ್ಲಿ ಈ ವರದಿಗಳನ್ನು ಮುಂದಿಟ್ಟುಕೊಂಡು, ಮೋದಿ ವಿರುದ್ಧ ಪ್ರಚಾರಕ್ಕೆ ವಿಪಕ್ಷಗಳು ಮುಂದಾಗಿವೆ.

2018ರಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳು

2018ರಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳು

ಜನವರಿ ಪ್ರಕಟವಾದ ವರದಿಯಂತೆ 2018ರಲ್ಲಿ 11 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರು. 2018ರ ಫೆಬ್ರವರಿಯಲ್ಲಿ ಶೇಕಡಾ 5.9 ಇದ್ದ ನಿರುದ್ಯೋಗ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ಶೇಕಡಾ 22ರಷ್ಟು ಏರಿಕೆಯಾಗಿದ್ದು ಸದ್ಯ ಶೇಕಡಾ 7.2ಕ್ಕೇರಿದೆ. ಇದು 2016ರ ಸೆಪ್ಟೆಂಬರ್ ನಿಂದ ಇಲ್ಲಿ ತನಕ ದಾಖಲಾದ ಅತಿ ಹೆಚ್ಚಿನ ಪ್ರಮಾಣವಾಗಿದೆ.

ಸಣ್ಣ ಉದ್ಯಮಗಳಿಗೆ ಹೊಡೆತ

ಸಣ್ಣ ಉದ್ಯಮಗಳಿಗೆ ಹೊಡೆತ

ಅಪನಗದೀಕರಣ ಜಾರಿಗೊಂಡ ಬಳಿಕ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2018ರಿಂದ ಜಿಎಸ್‌ಟಿ ಅನುಷ್ಠಾನಗೊಂಡ ಬಳಿಕ ದೇಶದಲ್ಲಿ 1.1 ಕೋಟಿ ಉದ್ಯೋಗ ನಷ್ಟವಾಗಿದೆ. ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಎಂದು ವರದಿ ಹೇಳಿದೆ.

English summary
India's unemployment rate in April rose to 7.6 per cent, the highest since October 2016, and up from 6.71 per cent in March, according to data compiled by the Centre for Monitoring Indian Economy (CMIE) released late.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X