ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ನಂತರ ಪ್ರಮುಖ ಕಂಪನಿಗಳಲ್ಲಿ 3 ಲಕ್ಷ ಉದ್ಯೋಗಿಗಳ ನೇಮಕ

|
Google Oneindia Kannada News

2021-22ರ ಅವಧಿಯಲ್ಲಿ ಕೋವಿಡ್-19 ಪರಿಣಾಮ ಕಡಿಮೆಯಾದಂತೆ, ಭಾರತದಲ್ಲಿ ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಅಗ್ರ 10 ಖಾಸಗಿ ಕಂಪೆನಿಗಳಲ್ಲಿ ಎಂಟು ಕಂಪನಿಗಳು ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ ಎಂದು ವರದಿಯೊಂದು ತಿಳಿಸಿದೆ.

2020-21 ರಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರ ಕಂಪೆನಿಗಳು ಚಟುವಟಿಕೆಯನ್ನು ಹೆಚ್ಚಿಸಿದ್ದರಿಂದ ಚಿಲ್ಲರೆ, ಐಟಿ ಸೇವೆಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ನೇಮಕಾತಿ ನಡೆಯುತ್ತಿದೆ. ಶ್ರೇಣಿ -2, ಶ್ರೇಣಿ -3 ಮತ್ತು ಶ್ರೇಣಿ -4 ನಗರಗಳಲ್ಲಿ ಉದ್ಯೋಗ ನೇಮಕಾತಿ ಪ್ರಮಾಣ ಹೆಚ್ಚಾಗಿದೆ.

ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್

2020-21ರ ಅವಧಿಯಲ್ಲಿ ಕೇವಲ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿತ್ತು. ನೇಮಕಾತಿ ಪ್ರಮಾಣ ತುಂಬಾ ಕಡಿಮೆಯಾಗಿತ್ತು ಮತ್ತೆ ಕೆಲವು ಕಂಪನಿಗಳು ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಿದ್ದರು ಎಂದು ಟಾಪ್ ಲಿಸ್ಟೆಡ್ ಸಂಸ್ಥೆಗಳ ವಾರ್ಷಿಕ ವರದಿಗಳ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವಿಶ್ಲೇಷಣೆಯು ತೋರಿಸಿದೆ.

ಲಾಕ್‌ಡೌನ್ ಮುಗಿದ ನಂತರ ಆರ್ಥಿಕತೆ ಸುಧಾರಣೆ ಕಂಡ ನಂತರ, ಉದ್ಯೋಗ ನೇಮಕಾತಿ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

 1.07 ಲಕ್ಷ ಮಂದಿಗೆ ಕೆಲಸ ಕೊಟ್ಟ ರಿಲಯನ್ಸ್

1.07 ಲಕ್ಷ ಮಂದಿಗೆ ಕೆಲಸ ಕೊಟ್ಟ ರಿಲಯನ್ಸ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 2021-22ರಲ್ಲಿ 1.07 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 40,716 ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿತ್ತು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಉದ್ಯೋಗ ನೇಮಕಾತಿಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಟೆಲಿಕಾಂ ಮತ್ತು ಟೆಕ್ ವರ್ಟಿಕಲ್ ಜಿಯೋ ನಂತರ ರಿಲಯನ್ಸ್ ತನ್ನ ರಿಟೇಲ್ ವಿಭಾಗಕ್ಕೆ ಅತಿ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಚಿಲ್ಲರೆ ವಿಭಾಗವು ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

SSC ನೇಮಕಾತಿ 2020: 4300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನSSC ನೇಮಕಾತಿ 2020: 4300 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ

"ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಯುವ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಕೋವಿಡ್ ಲಾಕ್‌ಡೌನ್ ನಂತರ ಆರ್ಥಿಕತೆಯ ಪುನರಾರಂಭದೊಂದಿಗೆ, ಯುವ ಉದ್ಯೋಗಿಗಳಿಗೆ ಅನೇಕ ಅವಕಾಶಗಳು ತೆರೆದುಕೊಂಡಿವೆ, ಹೊಸ ವಲಯಗಳು ಮತ್ತು ಉದ್ಯೋಗಿಗಳ ಮಾದರಿಗಳನ್ನು ಅನ್ವೇಷಿಸಲು ಇದು ಅನುವು ಮಾಡಿಕೊಡುತ್ತದೆ "ಎಂದು ಕಂಪನಿಯು ತನ್ನ 2021-22 ರ ವಾರ್ಷಿಕ ವರದಿಯಲ್ಲಿ ಹೇಳಿದೆ.

ರಿಲಯನ್ಸ್ ರಿಟೇಲ್‌ನ ನೇಮಕಾತಿಯು ಚಿಲ್ಲರೆ ವ್ಯಾಪಾರದಲ್ಲಿ ಅದರ ಪ್ರತಿಸ್ಪರ್ಧಿ ಅವೆನ್ಯೂ ಸೂಪರ್‌ಮಾರ್ಟ್ಸ್‌ಗಿಂತ ಹೆಚ್ಚಾಗಿದೆ. ಇದು 2021-22 ರಲ್ಲಿ 5,045 ಜನರನ್ನು ನೇಮಿಸಿಕೊಂಡಿದೆ, ಇದು ವರ್ಷದ ಹಿಂದಿನ ಅವಧಿಯಲ್ಲಿ 1,364 ರಷ್ಟು ನಿವ್ವಳ ಕಡಿತಕ್ಕೆ ಹೋಲಿಸಿದರೆ.

 ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿ

ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿ

ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಸೇವಾ ಕಂಪನಿಗಳ ವಿಷಯದಲ್ಲಿ, ಈ ಅವಧಿಯಲ್ಲಿ ನೇಮಕಾತಿಯಲ್ಲಿ ಹೆಚ್ಚಳ ಕಂಡುಬಂದಿದೆ. ಟಿಸಿಎಸ್‌, ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ, 2021-22 ರಲ್ಲಿ 1.04 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು ಕಳೆದ ವರ್ಷ 40,185 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು.

ಇನ್ನು ಇನ್ಫೋಸಿಸ್ ಕೂಡ ಮಾರ್ಚ್ 31, 2022 ರ ವರ್ಷದಲ್ಲಿ 54,396 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ಕೋವಿಡ್ ಕಾರಣ 17,248 ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಂಡಿತ್ತು.

 ವಿಮಾನಯಾನ ವಲಯದಲ್ಲಿ ನೇಮಕಾತಿ ಹೆಚ್ಚಳ

ವಿಮಾನಯಾನ ವಲಯದಲ್ಲಿ ನೇಮಕಾತಿ ಹೆಚ್ಚಳ

ಕೋವಿಡ್ ಸಮಯದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕಡಿಮೆ ಮಾಡಿದ್ದ ಬ್ಯಾಂಕ್ ಮತ್ತು ಏರ್‌ಲೈನ್‌ಗಳು ಈಗ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ.

ಟೀಮ್‌ಲೀಸ್‌ನ ಉದ್ಯೋಗದ ಔಟ್‌ಲುಕ್ ವರದಿಯ ಪ್ರಕಾರ, ಕಂಪನಿಗಳು ತಮ್ಮ ನೇಮಕಾತಿ ಡ್ರೈವ್‌ಗಳನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 34 ಪ್ರತಿಶತದಿಂದ ನೇಮಕಾತಿ ನಡೆಯುತ್ತಿದ್ದು, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನೇಮಕ ಮಾಡುವ ಪ್ರಮಾಣ ಶೇಕಡ 61 ಪ್ರತಿಶತಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

Recommended Video

ನಾನು ಬೆಂಕಿ ಅಂತಾ Ishan Kishan BCCI ಗೆ ಬಿಸಿ‌ ಮುಟ್ಟಿಸಿದ್ದು ಯಾಕೆ? |*Cricket | OneIndia Kannada

English summary
Eight out of top 10 private companies by market capitalisation in India added a net number of over three lakh employees during the period, as per a report. Among the companies, Reliance Industries Ltd saw the most net addition of employees with 1.07 lakh in 2021-22, compared with 40,716 in the previous financial year, said the Indian Express report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X