ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ತಿಂಗಳಲ್ಲಿ 88 ಲಕ್ಷ ಜನರಿಗೆ ಉದ್ಯೋಗ: ವರದಿ

|
Google Oneindia Kannada News

ಕೋಲ್ಕತ್ತಾ, ಮೇ 16: ದೇಶದಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ಸುಮಾರು 88 ಲಕ್ಷ ಜನರು ವಿವಿದ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಇದು ಕೋವಿಡ್‌ ಸಾಂಕ್ರಾಮಿಕ ನಂತರದ ಕಾರ್ಮಿಕ ಮಾರುಕಟ್ಟೆ ಅಥವಾ ಉದ್ಯೋಗ ಮಾರುಕಟ್ಟೆಯಲ್ಲಿನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE)ತನ್ನ ವರದಿಯಲ್ಲಿ ತಿಳಿಸಿದೆ.

ಆದರೂ ಪ್ರಸ್ತುತ ಅಗತ್ಯವಿರುವ ಉದ್ಯೋಗಗಳ ಬೇಡಿಕೆಗೆ ಹೋಲಿಸಿದರೆ ಇದರ ಪ್ರಮಾಣ ಅಸಮರ್ಪಕವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉದ್ಯೋಗಿಗಳಿಗೆ ಚಿನ್ನದ ರೂಪದಲ್ಲಿ ಸಂಬಳ ಕೊಡಲಿದೆ ಈ ಕಂಪನಿಉದ್ಯೋಗಿಗಳಿಗೆ ಚಿನ್ನದ ರೂಪದಲ್ಲಿ ಸಂಬಳ ಕೊಡಲಿದೆ ಈ ಕಂಪನಿ

ಏಪ್ರಿಲ್‌ನಲ್ಲಿ ಉದ್ಯೋಗಿಗಳ ಸಂಖ್ಯೆ 43.72 ಕೋಟಿ
ಭಾರತದ ಕಾರ್ಮಿಕ ಪಡೆ ಏಪ್ರಿಲ್‌ನಲ್ಲಿ ಹೊಸದಾಗಿ 88 ಲಕ್ಷ ಜನರ ಹೊಸದಾಗಿ ಕೆಲಸಕ್ಕೆ ಸೇರುವುದರೊಂದಿಗೆ ದೇಶದಲ್ಲಿ ಉದ್ಯೋಗ ಹೊಂದಿರುವವರ ಸಂಖ್ಯೆ 43.72 ಕೋಟಿಗೆ ಏರಿಕೆ ಕಂಡಿದೆ. ಇದು ಸಾಂಕ್ರಾಮಿಕದ ನಂತರ ಇಷ್ಟು ಜನರು ಉದ್ಯೋಗ ಪಡೆದಿರುವುದು ಇದೇ ಮೊದಲು. ಮಾರ್ಚ್‌ ತಿಂಗಳಲ್ಲಿ ದೇಶದ ಕಾರ್ಮಿಕ ಮಾರುಕಟ್ಟೆ 42.84 ಕೋಟಿ ಇತ್ತು ಎಂದು ಸಿಎಂಐಇ ಮ್ಯಾನೇಜಿಂಗ್ ಡೈರೆಕ್ಟರ್‌ ಮತ್ತು ಸಿಇಒ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

India adds 88 lakh jobs in April: Report

2021-22 ರ ಅಂಕಿ ಅಂಶಗಳ ಪ್ರಕಾರ ದೇಶದ ಕಾರ್ಮಿಕ ಮಾರುಕಟ್ಟೆಯ ಸರಾಸರಿ ಮಾಸಿಕ ಹೆಚ್ಚಳ 2 ಲಕ್ಷ ಇರುತ್ತಿತ್ತು. ಆದರೆ ಏಪ್ರಿಲ್‌ನಲ್ಲಿ ಅದರ ಸಂಖ್ಯೆ 88 ಲಕ್ಷಕ್ಕೆ ಏರಿಕೆಯಾಗಿದೆ ಎಂದರೆ, ಈ ಹಿಂದೆ ಉದ್ಯೋಗ ಕಳೆದುಕೊಂಡಿದ್ದ ಜನರು ಮತ್ತೆ ಉದ್ಯೋಗಸ್ಥರಾಗಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ಏಕೆಂದರೆ ಪ್ರತಿತಿಂಗಳು ದುಡಿಯುವ ವಯಸ್ಸಿನ ಜನಸಂಖ್ಯೆ 2 ಮಿಲಿಯನ್‌ಗಿಂತ ಹೆಚ್ಚು ಏರಿಕೆ ಕಾಣಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ.

ಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಏಪ್ರಿಲ್‌ನಲ್ಲಿ 88 ಲಕ್ಷ ಹೆಚ್ಚಳಕ್ಕೂ ಮುನ್ನ ಮೂರು ತಿಂಗಳಲ್ಲಿ ಉದ್ಯೋಗ ಕುಸಿತದ ಪ್ರಮಾಣ 1.2 ಕೋಟಿ ಇತ್ತು ಎನ್ನುವುದನ್ನು ಗಮನಿಸಬೇಕು ಎಂದು ವರದಿ ತಿಳಿಸಿದೆ.

India adds 88 lakh jobs in April: Report

ಯಾವ ಕ್ಷೇತ್ರದಲ್ಲಿ ಏರಿಕೆ
ಏಪ್ರಿಲ್‌ನಲ್ಲಿ ಉದ್ಯೋಗದ ಹೆಚ್ಚಳ ಪ್ರಮಾಣ ಕೈಗಾರಿಕ ವಲಯ ಮತ್ತು ಸೇವಾವಲಯಲ್ಲಿ ಪ್ರಗತಿ ಕಂಡಿದೆ. ಕೈಗಾರಿಕ ವಲಯದಲ್ಲಿ 55 ಲಕ್ಷ, ಸೇವಾವಲಯದಲ್ಲಿ 67 ಲಕ್ಷ ಏರಿಕೆ ಕಂಡಿದ್ದರೆ, ಕೃಷಿ ವಲಯದಲ್ಲಿ52 ಲಕ್ಷ ಏರಿಕೆ ಕಂಡಿದೆ ಎಂದು CMIE ವರದಿ ತಿಳಿಸಿದೆ.

English summary
India's labour force increased by 8.8 million to 437.2 million in April, one of the largest monthly increases since the beginning of the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X