• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಹೆಚ್ಚು ಪ್ಲೇಸ್‌ಮೆಂಟ್‌ ಗಳಿಸಿದ ಸಂಸ್ಥೆ ಇದು

|
Google Oneindia Kannada News

ಚೆನ್ನೈ, ಆಗಸ್ಟ್‌ 09: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳ ಸಮಯದಲ್ಲಿ ಅತ್ಯಧಿಕ ಸಂಖ್ಯೆಯ ಉದ್ಯೋಗ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ.

IIT-ಮದ್ರಾಸ್ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ದಾಖಲೆಯ 1,430 ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇದು 2018-19 ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಹಿಂದಿನ ಅತ್ಯಧಿಕ 1,151 ಉದ್ಯೋಗಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಮಧುರೈನಲ್ಲಿ ಮೊದಲ ಟ್ರಾನ್ಸ್‌ಜೆಂಡರ್ ಪ್ರಕಟಣೆ ಮತ್ತು ಚಲನಚಿತ್ರ ಕಂಪನಿ ಪ್ರಾರಂಭಮಧುರೈನಲ್ಲಿ ಮೊದಲ ಟ್ರಾನ್ಸ್‌ಜೆಂಡರ್ ಪ್ರಕಟಣೆ ಮತ್ತು ಚಲನಚಿತ್ರ ಕಂಪನಿ ಪ್ರಾರಂಭ

ಇದು 1959ರಲ್ಲಿ ಪ್ರಾರಂಭವಾದಾಗಿನಿಂದ ಅತ್ಯಧಿಕವಾದ ಪ್ಲೇಸ್‌ಮೆಂಟ್‌ ಆಗಿದೆ. IIT-M ಅಧಿಕಾರಿಗಳ ಪ್ರಕಾರ, ಉದ್ಯೋಗಕ್ಕಾಗಿ ನೋಂದಾಯಿಸಿದ 80% ವಿದ್ಯಾರ್ಥಿಗಳು 14 ಜಾಗತಿಕ ಕಂಪನಿಗಳು ಮತ್ತು 131 ಸ್ಟಾರ್ಟ್‌ಅಪ್‌ಗಳಿಂದ ಉದ್ಯೋಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದರಲ್ಲಿ ವಿದ್ಯಾರ್ಥಿಗಳ ಸರಾಸರಿ ವೇತನವು ವಾರ್ಷಿಕ ₹ 21.48 ಲಕ್ಷಗಳಿಂದ ಅತ್ಯಧಿಕ ವೇತನ 250,000 ಡಾಲರ್‌ವರೆಗೆ ಇದೆ ಎಂದು ಹೇಳಿಕೆ ತಿಳಿಸಿದೆ. 2021-22ನೇ ಶೈಕ್ಷಣಿಕ ವರ್ಷಕ್ಕೆ ಕ್ಯಾಂಪಸ್ ನೇಮಕಾತಿಗಳ ಮೊದಲ ಮತ್ತು ಎರಡನೇ ಹಂತಗಳಲ್ಲಿ 380 ಕಂಪನಿಗಳಿಂದ ಒಟ್ಟು 1,199 ಉದ್ಯೋಗಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಐಐಟಿ ಮದ್ರಾಸ್‌ನ ಪೇಸ್ಲ್‌ಮೆಂಟ್‌ ಸಲಹೆಗಾರ ಸಿ. ಎಸ್. ಶಂಕರ್ ರಾಮ್ ಮಾತನಾಡಿ, "ಈ ಉದ್ಯೋಗಗಳು ಶೈಕ್ಷಣಿಕ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಮಾಣಾತ್ಮಕ ಫಲಿತಾಂಶವನ್ನು ಪ್ರತಿಬಿಂಬಿಸುತ್ತವೆ. ನಮ್ಮ ವಿದ್ಯಾರ್ಥಿಗಳು 2021-22ರ ನೇಮಕಾತಿಗಳಲ್ಲಿ ಅಸಾಧಾರಣವಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. ಇದು ದಾಖಲೆಯ ಉನ್ನತ ಉದ್ಯೋಗದ ಕೊಡುಗೆಗಳಿಗೆ ಸಾಕ್ಷಿಯಾಗಿದೆ. ಐಐಟಿ ಮದ್ರಾಸ್‌ನಲ್ಲಿ ನಮ್ಮ ವಿದ್ಯಾರ್ಥಿಗಳು ಪಡೆದ ಅಸಾಧಾರಣ ಪಠ್ಯಕ್ರಮ, ತರಬೇತಿ ಮತ್ತು ಸಹಪಠ್ಯ ಅವಕಾಶಗಳಿಗೆ ಇದು ಸಾಕ್ಷಿಯಾಗಿದೆ" ಎಂದು ಹೇಳಿದರು.

ಈ ಅಸಾಧಾರಣ ಸಾಧನೆಯಲ್ಲಿ ಐಐಟಿ ಎಂ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕಗಳ ಚೌಕಟ್ಟಿನಲ್ಲಿ (NIRF) ಭಾರತದ ಶ್ರೇಯಾಂಕಗಳು 2022ರಲ್ಲಿ ಅಗ್ರಸ್ಥಾನವನ್ನು ಹೊಂದಿದೆ. ಸತತ ನಾಲ್ಕನೇ ವರ್ಷದಲ್ಲೂ ಒಟ್ಟಾರೆ ವಿಭಾಗದಲ್ಲಿ ಮತ್ತು ಸತತ ಏಳನೇ ವರ್ಷ ಎಂಜಿನಿಯರಿಂಗ್ ವಿಭಾಗದಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.

IIT-Madras receives highest job offers in 2021-22

ವಿಭಾಗ ಮಟ್ಟದಲ್ಲಿ ಸಂಶೋಧನಾ ಸಂಸ್ಥೆಗಳು ಐಐಟಿ ಮದ್ರಾಸ್ ಸತತ ಎರಡನೇ ವರ್ಷವೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಪ್ರಾಥಮಿಕವಾಗಿ ಎಂಜಿನಿಯರಿಂಗ್ ಸಂಸ್ಥೆಯಾಗಿದ್ದರೂ ಐಐಟಿ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ. ಅಂದರೆ 10ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರು.

ಐಐಟಿ ಮದ್ರಾಸ್‌ನಲ್ಲಿ Rakuten Mobile, Honda R&D, Cohesity, Da Vinci Derivatives, Accenture Japan, Hilabs Inc, Quantbox Research, MediaTek, Money Forward, Rubrik, Termgrid ಮತ್ತು Uber ಉದ್ಯೋಗಗಳನ್ನು ನೀಡಿದ ಕೆಲವು ಜಾಗತಿಕ ಕಂಪನಿಗಳಾಗಿವೆ.

English summary
Indian Institute of Technology Madras (IIT Madras) students secured the highest number of job offers during campus placements this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X