
ಐಡಿಬಿಐ ನೇಮಕಾತಿ 2022: 226 ಸ್ಪೆಷಲ್ ಕೇಡರ್ ಅಧಿಕಾರಿ ಹುದ್ದೆಗಳಿವೆ
ನವದೆಹಲಿ, ಜೂನ್ 29: ಇಂಡಸ್ಟ್ರಿಯಲ್ ಡೆವಲ್ಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(ಐಡಿಬಿಐ) ಸಂಸ್ಥೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲ್ ಕೇಡರ್ ಆಫೀಸರ್ ಹುದ್ದೆ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 10ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Industrial Development Bank of India(IDBI)
ಹುದ್ದೆ ಹೆಸರು: IDBI Bank Specialist Cadre Officer Online Form 2022
ಒಟ್ಟು ಹುದ್ದೆ: 226
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 18, 2021.
ಹುದ್ದೆ ವಿವರ
ಕೆಟಗರಿ- ಒಟ್ಟು ಹುದ್ದೆ
ಎಜಿಎಂ (ಗ್ರೇಡ್ ಸಿ)- 10
ಮ್ಯಾನೇಜರ್ (ಗ್ರೇಡ್ ಬಿ)- 82
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಗ್ರೇಡ್ ಡಿ: 8
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ: 95
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- ಗ್ರೇಡ್ ಡಿ: 25
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ: 6
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ.
ಎಜಿಎಂ (ಗ್ರೇಡ್ ಸಿ)- ಬಿ. ಟೆಕ್/ ಬಿಇ (ಸಿವಿಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್)
ಮ್ಯಾನೇಜರ್ (ಗ್ರೇಡ್ ಬಿ)- ಯಾವುದೇ ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಗ್ರೇಡ್ ಡಿ: ಯಾವುದೇ ಪದವಿ/ ಪಿಜಿ
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ:ಯಾವುದೇ ಪದವಿ/ ಪಿಜಿ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- ಗ್ರೇಡ್ ಡಿ: ಯಾವುದೇ ಪದವಿ
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ: ಐಟಿಐ/ಪದವಿ/ಪಿಜಿ
ವಯೋಮಿತಿ: 20 ರಿಂದ 25 ವರ್ಷ (ಜೂನ್ 01, 2021ರಂತೆ), ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಎಜಿಎಂ (ಗ್ರೇಡ್ ಸಿ)- 28 ರಿಂದ 40 ವರ್ಷ
ಮ್ಯಾನೇಜರ್ (ಗ್ರೇಡ್ ಬಿ)- 25 ರಿಂದ 35 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಗ್ರೇಡ್ ಡಿ: 35 ರಿಂದ 45 ವರ್ಷ
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ: 28 ರಿಂದ 40 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ)- ಗ್ರೇಡ್ ಡಿ: 35 ರಿಂದ 45 ವರ್ಷ
ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಗ್ರೇಡ್ ಸಿ: 28 ರಿಂದ 40 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ ಅರ್ಜಿದಾರರಿಗೆ : 1000ರು
ಎಸ್ಟಿ/ ಎಸ್ ಸಿ/ ಮಾಜಿ ಯೋಧ/ಇನ್ನಿತರೆ : 200 ರು
ಪಾವತಿಸುವುದು ಹೇಗೆ?:
ಅಭ್ಯರ್ಥಿಗಳು ಡೆಬಿಟ್ ಕಾರ್ಡ್(ರುಪೇ/ವೀಸಾ/ಮಾಸ್ಟರ್ ಕಾರ್ಡ್/ಮಾಸ್ಟ್ರೋ), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ಸ್/ ಮೊಬೈಲ್ ವ್ಯಾಲೆಟ್) ಮೂಲಕ ಪಾವತಿಸಬಹುದು.
ನೇಮಕಾತಿ: ಆನ್ ಲೈನ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ
ಇದು ಗುತ್ತಿಗೆ ಆಧಾರಿತ ಹುದ್ದೆಯಾಗಿದ್ದು, ಮೊದಲ ಅವಧಿ 1 ವರ್ಷದ್ದಾಗಿರುತ್ತದೆ. ನಂತರ 2 ಹಾಗೂ 3ನೇ ಅವಧಿಗೆ ವಿಸ್ತರಣೆಗೊಳ್ಳಲಿದೆ. ಗುತ್ತಿಗೆ ಆಧಾರಿತ ಅವಧಿ ಮುಕ್ತಾಯವಾದ ಬಳಿಕ ಐಡಿಬಿಐ ಸಹಾಯಕ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಲು ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮೊದಲ ಮೂರು ವರ್ಷಗಳ ಅವಧಿಯಲ್ಲಿ ಭಾರತದೆಲ್ಲೆಡೆ ಇರುವ ಬ್ಯಾಂಕ್ ಬ್ರ್ಯಾಂಚ್ ಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಆನ್ ಲೈನ್ ಪರೀಕ್ಷೆಗೆ ಕರ್ನಾಟಕದ ಕೇಂದ್ರಗಳು:
ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ. ಇದಲ್ಲದೆ, ದೇಶದ ವಿವಿಧ ರಾಜ್ಯಗಳ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಸಂಬಳ ನಿರೀಕ್ಷೆ:
ಮೊದಲ ವರ್ಷ: 29,000 ಪ್ರತಿ ತಿಂಗಳು
ಎರಡನೇ ವರ್ಷ: 31,000 ಪ್ರತಿ ತಿಂಗಳು
ಮೂರನೇ ವರ್ಷ: 34,000 ಪ್ರತಿ ತಿಂಗಳು
ಪ್ರಮುಖ ದಿನಾಂಕಗಳು:
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 25-06-2022
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-07-2022
ಭರ್ತಿಯಾದ ಅರ್ಜಿಯನ್ನು ಸಲ್ಲಿಸಿದ ಬಳಕ್ ಆನ್ ಲೈನ್ ಪರೀಕ್ಷೆ ಸಂಭಾವ್ಯ ದಿನಾಂಕ ಬಗ್ಗೆ ತಿಳಿಯಲು ಅಥವಾ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಐಡಿಬಿಐ ಅಧಿಕೃತ ತಾಣಕ್ಕೆ ಭೇಟಿ ಕೊಡಿ.