ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಡಿಬಿಐ ನೇಮಕಾತಿ 2021: 920 ಎಕ್ಸಿಕ್ಯೂಟಿವ್ ಹುದ್ದೆಗಳಿವೆ

|
Google Oneindia Kannada News

ನವದೆಹಲಿ, ಆಗಸ್ಟ್ 09: ಇಂಡಸ್ಟ್ರಿಯಲ್ ಡೆವಲ್ಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(ಐಡಿಬಿಐ) ಸಂಸ್ಥೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಕ್ಸಿಕ್ಯೂಟಿವ್ ಹುದ್ದೆ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 18ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Industrial Development Bank of India(IDBI)
ಹುದ್ದೆ ಹೆಸರು: ಎಕ್ಸಿಕ್ಯೂಟಿವ್

ಒಟ್ಟು ಹುದ್ದೆ: 920

ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 18, 2021.

ಹುದ್ದೆ ವಿವರ
ಕೆಟಗರಿ- ಒಟ್ಟು ಹುದ್ದೆ
ಮೀಸಲಾತಿ ರಹಿತ-373
ಪರಿಶಿಷ್ಟ ಜಾತಿ( ಎಸ್ ಸಿ)-138
ಪರಿಶಿಷ್ಟ ಪಂಗಡ (ಎಸ್ ಟಿ)- 69
ಹಿಂದುಳಿದ ವರ್ಗ (ಒಬಿಸಿ)-248
ಆರ್ಥಿಕವಾಗಿ ಹಿಂದುಳಿವ ವರ್ಗ(EWS) -92

IDBI Bank recruitment 2021 apply for 920 Executive Vacancies

ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಕನಿಷ್ಠ ಶೇ 55ರಷ್ಟು ಅಂಕಗಳು (ಎಸ್ ಸಿ/ ಎಸ್ಟಿ/ದಿವ್ಯಾಂಗ-ಶೇ 50ರಷ್ಟು) ಬಂದಿರಬೇಕು.

ವಯೋಮಿತಿ: 20 ರಿಂದ 25 ವರ್ಷ (ಜೂನ್ 01, 2021ರಂತೆ), ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ ಅರ್ಜಿದಾರರಿಗೆ : 1000ರು
ಎಸ್ಟಿ/ ಎಸ್ ಸಿ/ ಮಾಜಿ ಯೋಧ/ಇನ್ನಿತರೆ : 200 ರು

ಪಾವತಿಸುವುದು ಹೇಗೆ?:
ಅಭ್ಯರ್ಥಿಗಳು ಡೆಬಿಟ್ ಕಾರ್ಡ್(ರುಪೇ/ವೀಸಾ/ಮಾಸ್ಟರ್ ಕಾರ್ಡ್/ಮಾಸ್ಟ್ರೋ), ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ಸ್/ ಮೊಬೈಲ್ ವ್ಯಾಲೆಟ್) ಮೂಲಕ ಪಾವತಿಸಬಹುದು.

ನೇಮಕಾತಿ: ಆನ್ ಲೈನ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ
ಇದು ಗುತ್ತಿಗೆ ಆಧಾರಿತ ಹುದ್ದೆಯಾಗಿದ್ದು, ಮೊದಲ ಅವಧಿ 1 ವರ್ಷದ್ದಾಗಿರುತ್ತದೆ. ನಂತರ 2 ಹಾಗೂ 3ನೇ ಅವಧಿಗೆ ವಿಸ್ತರಣೆಗೊಳ್ಳಲಿದೆ. ಗುತ್ತಿಗೆ ಆಧಾರಿತ ಅವಧಿ ಮುಕ್ತಾಯವಾದ ಬಳಿಕ ಐಡಿಬಿಐ ಸಹಾಯಕ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಲು ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮೊದಲ ಮೂರು ವರ್ಷಗಳ ಅವಧಿಯಲ್ಲಿ ಭಾರತದೆಲ್ಲೆಡೆ ಇರುವ ಬ್ಯಾಂಕ್ ಬ್ರ್ಯಾಂಚ್ ಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಆನ್ ಲೈನ್ ಪರೀಕ್ಷೆಗೆ ಕರ್ನಾಟಕದ ಕೇಂದ್ರಗಳು:
ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ. ಇದಲ್ಲದೆ, ದೇಶದ ವಿವಿಧ ರಾಜ್ಯಗಳ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಸಂಬಳ ನಿರೀಕ್ಷೆ:
ಮೊದಲ ವರ್ಷ: 29,000 ಪ್ರತಿ ತಿಂಗಳು
ಎರಡನೇ ವರ್ಷ: 31,000 ಪ್ರತಿ ತಿಂಗಳು
ಮೂರನೇ ವರ್ಷ: 34,000 ಪ್ರತಿ ತಿಂಗಳು

ಪ್ರಮುಖ ದಿನಾಂಕಗಳು:

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 04-08-2021
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 18-08-2021
ಆನ್ ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿ ಬದಲಾಯಿಸಲು ಕೊನೆ ದಿನಾಂಕ: 18-08-2021
ಅರ್ಜಿಯನ್ನು ಪ್ರಿಂಟ್ ಮಾಡಿಕೊಳ್ಳಲು ದಿನಾಂಕ: 02-09-2021
ಆನ್ ಲೈನ್ ಪರೀಕ್ಷೆ ಸಂಭಾವ್ಯ ದಿನಾಂಕ: 05-09-2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಐಡಿಬಿಐ ಅಧಿಕೃತ ತಾಣಕ್ಕೆ(https://www.idbibank.in/idbi-bank-careers-current-openings.aspx) ಭೇಟಿ ಕೊಡಿ.

English summary
IDBI Bank recruitment 2021 notification has been released on official website for the recruitment of 920 vacancies at Industrial Development Bank of India. The candidate who is looking for Executive can apply online application on or before 18-08-2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X