ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿಪಿಎಸ್ ನೇಮಕಾತಿ; ಕರ್ನಾಟಕದಲ್ಲಿಯೂ ಕೆಲಸ ಖಾಲಿ ಇದೆ

|
Google Oneindia Kannada News

ಬೆಂಗಳೂರು, ಜೂನ್ 13; ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 8106 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 27ರೊಳಗೆ ಅರ್ಜಿ ಸಲ್ಲಿಸಬಹುದು.

ದೇಶಾದ್ಯಾಂತ ಖಾಲಿ ಇರುವ ಆಫೀಸರ್, ಆಫೀಸರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 486, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ 346 ಹುದ್ದೆಗಳಿವೆ.

ECIL ನೇಮಕಾತಿ 2022: ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ ECIL ನೇಮಕಾತಿ 2022: ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಫಿಸ್ ಅಸಿಸ್ಟೆಂಟ್ (ಮಲ್ಟಿ ಪಪರ್ಸ್‌) 4483, ಆಫೀಸರ್ ಸ್ಕೇಲ್ 2676, ಆಫೀಸರ್ ಸ್ಕೇಲ್ 2 (ಅಗ್ರಿಕಲ್ಚರ್) 12, ಆಫೀಸರ್ ಸ್ಕೇಲ್ 2 (ಮಾರ್ಕೆಟಿಂಗ್) 6, ಆಫೀಸರ್ ಸ್ಕೇಲ್ 2 (ಖಜಾನೆ ಮ್ಯಾನೇಜರ್) 10, ಆಫೀಸರ್ ಸ್ಕೇಲ್ 2 (ಕಾನೂನು) 18, ಆಫೀಸರ್ ಸ್ಕೇಲ್ 2 (ಸಿಎ) 19, ಆಫೀಸರ್ ಸ್ಕೇಲ್ 2 (ಐಟಿ) 57, ಆಫೀಸರ್ ಸ್ಕೇಲ್ 2 (ಜನರಲ್ ಬ್ಯಾಂಕ್ ಆಫೀಸರ್) 745, ಆಫೀಸರ್ ಸ್ಕೇಲ್ 3 80 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

IBPS Recruitment

ವಿದ್ಯಾರ್ಹತೆಯ ವಿವರ; ಆಫೀಸ್ ಅಸಿಸ್ಟೆಂಟ್ ಮಲ್ಟಿ ಪರ್ಪಸ್, ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್) ಮತ್ತು ಆಫೀಸರ್ ಸ್ಕೇಲ್ 2 (ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್) ಹುದ್ದೆಗೆ ಯಾವುದೇ ಪದವಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ (ಮ್ಯಾನೇಜರ್) ಯಾವುದೇ ಪದವಿ, ಸಿಎ, ಎಂಬಿಎ ವಿದ್ಯಾರ್ಹತೆ. ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) ಯಾವುದೇ ಪದವಿ, ಡಿಪ್ಲೊಮಾ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಳ್ಳಾರಿ; ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ ವಿವರಗಳು; ಆಫೀಸ್ ಅಸಿಸ್ಟೆಂಟ್ ಮಲ್ಟಿ ಪರ್ಪಸ್ 18 ರಿಂದ 28, ಆಫೀಸರ್ ಸ್ಕೇಲ್ 1 (ಅಸಿಸ್ಟೆಂಟ್ ಮ್ಯಾನೇಜರ್) 18 ರಿಂದ 30ರೊಳಗೆ, ಆಫೀಸರ್ ಸ್ಕೇಲ್ 2 (ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್) ಮತ್ತು ಆಫೀಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಆಫೀಸರ್ (ಮ್ಯಾನೇಜರ್) ಹುದ್ದೆಗೆ 21 ರಿಂದ 32ಕ್ಕಿಂತ ಕಡಿಮೆ, ಆಫೀಸರ್ ಸ್ಕೇಲ್ 3 (ಸೀನಿಯರ್ ಮ್ಯಾನೇಜರ್) ಹುದ್ದೆಗೆ 21 ರಿಂದ 40ಕ್ಕಿಂತ ಕಡಿಮೆ ವಯೋಮಿತಿ ನಿಗದಿ ಮಾಡಲಾಗಿದೆ.

jobs

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು 175 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಉಳಿದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ನಿಗದಿತ ವೆಬ್‌ ಸೈಟ್‌ನಲ್ಲಿ ಸರಿಯಾದ ಇ-ಮೇಲ್ ಐಡಿ, ಮೊಬೈಲ್ ನಂಬರ್ ನಮೂದು ಮಾಡಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ https://www.ibps.in/crp-rrb-xi/

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ibps.in ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಅಂತಿಮ ಆಯ್ಕೆ ಪಟ್ಟಿ ಪ್ರಕಟ; ಕೊಪ್ಪಳ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 2019ರ ಸಾಲಿನಲ್ಲಿ ಅಧಿಸೂಚಿಲಾದ 22 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ಪೈಕಿ ಬಾಕಿ ಉಳಿದ 5 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲಾತಿ ಸಲ್ಲಿಸಲು ಸೂಚಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಕಂದಾಯ ಇಲಾಖೆಯ 5 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ಭರ್ತಿ ಮಾಡಲು 2019ನೇ ಸಾಲಿನಲ್ಲಿನ ಅಧಿಸೂಚನೆಯಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ದಾಖಲಾತಿ ಪರಿಶೀಲನೆಗೆ ಸೂಚಿಸಲಾಗಿದ್ದು ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ವೆಬ್‌ಸೈಟ್ www.koppal.nic.in ನಲ್ಲಿ ಪ್ರಚುರ ಪಡಿಸಲಾಗಿರುತ್ತದೆ.

Recommended Video

ಪುಟಿನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಬ್ರಿಟನ್ ! | *Defence | OneIndia Kannada

ಈ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜೂನ್ 22 ರೊಳಗಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಗೆ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

English summary
Institute of Banking Personnel Selection (IBPS) invited applications for officer, office assistant posts. Candidates can apply online till June 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X