
ಐಬಿಪಿಎಸ್ ನೇಮಕಾತಿ 2022; ಕರ್ನಾಟಕದಲ್ಲಿ ಎಷ್ಟು ಹುದ್ದೆಗಳಿಗೆ ಭರ್ತಿ
ಬೆಂಗಳೂರು, ಜುಲೈ 03; ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) 6035 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 01ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 21ರ ತನಕ ಅರ್ಜಿ ಸಲ್ಲಿಸಬಹುದು.
ದೇಶಾದ್ಯಾಂತ ಖಾಲಿ ಇರುವ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. "ಪಾರ್ಟಿಸಿಪೇಟಿಂಗ್ ಬ್ಯಾಂಕ್ಗಳಲ್ಲಿ ಕ್ಲೆರಿಕಲ್ ಕೇಡರ್ ಹುದ್ದೆಗಳಿಗೆ ಸಿಬ್ಬಂದಿಯ ಆಯ್ಕೆಗಾಗಿ ಮುಂದಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಾಗಿ ಆನ್ಲೈನ್ ಪರೀಕ್ಷೆ (ಪೂರ್ವಭಾವಿ ಮತ್ತು ಮುಖ್ಯ) ಸೆಪ್ಟೆಂಬರ್ 2022 ಮತ್ತು ಅಕ್ಟೋಬರ್ 2022 ರಲ್ಲಿ ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.
ಐಬಿಪಿಎಸ್ ಕ್ಲರ್ಕ್ ಹುದ್ದೆಗಳ ವಿವರ:
ರಾಜ್ಯ -ಒಟ್ಟು ಹುದ್ದೆ
ಅಂಡಮಾನ್ ಅಂಡ್ ನಿಕೋಬರ್ : 4
ಅರುಣಾಚಲ ಪ್ರದೇಶ: 14
ಅಸ್ಸಾಂ: 157
ಬಿಹಾರ: 281
ಚಂದೀಗಢ: 12
ಛತ್ತೀಸ್ ಗಢ: 104
ದಾದ್ರಾ ಅಂಡ್ ನಗರ್ ಹವೇಲಿ, ದಮನ್ ಅಂಡ್ ದಿಯು : 1
ದೆಹಲಿ: 295
ಗೋವಾ: 71
ಗುಜರಾತ್: 304
ಹರ್ಯಾಣ: 138
ಹಿಮಾಚಲ ಪ್ರದೇಶ: 91
ಜಮ್ಮು ಮತ್ತು ಕಾಶ್ಮೀರ: 35
ಜಾರ್ಖಂಡ್ : 69
ಕರ್ನಾಟಕ: 358
ಕೇರಳ: 70
ಲಕ್ಷದೀಪ್: 5
ಮಧ್ಯಪ್ರದೇಶ: 309
ಮಹಾರಾಷ್ಟ್ರ: 775
ಮಣಿಪುರ: 4
ಮೇಘಾಲಯ: 6
ಮಿಜೋರಾಂ: 4
ನಾಗಾಲ್ಯಾಂಡ್: 4
ಒಡಿಶಾ: 126
ಪುದುಚೇರಿ: 2
ಪಂಜಾಬ್: 407
ರಾಜಸ್ಥಾನ್ : 129
ಸಿಕ್ಕಿಂ: 11
ತಮಿಳುನಾಡು: 288
ತೆಲಂಗಾಣ: 99
ತ್ರಿಪುರಾ: 17
ಉತ್ತರಪ್ರದೇಶ: 1089
ಉತ್ತರಾಖಂಡ್: 19
ಪಶ್ಚಿಮ ಬಂಗಾಳ: 528
ಒಟ್ಟು: 6028
ವಿದ್ಯಾರ್ಹತೆಯ ವಿವರ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆ. ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ಪಡೆದುಕೊಳ್ಳಬಹುದು. (https://ibpsonline.ibps.in/crpcl12jun22/)
ಐಪಿಬಿಎಸ್ ಕ್ಲರ್ಕ್ ನೇಮಕಾತಿ 2022 ಬ್ಯಾಂಕ್ ವಿವರ:
ಬ್ಯಾಂಕ್ ಆಫ್ ಬರೋಡಾ
ಕೆನರಾ ಬ್ಯಾಂಕ್
ಇಂಡಿಯನ್ ಓವರ್ ಸೀಸ್ ಬ್ಯಾಂಕ್
ಯುಕೋಬ್ಯಾಂಕ್
ಬ್ಯಾಂಕ್ ಆಫ್ ಇಂಡಿಯಾ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಪಂಜಾಬ್ ನ್ಯಾಷನಲ್ ಬ್ಯಾಂಕ್
ಯೂನಿಯನ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಮಹಾರಾಷ್ಟ್ರ
ಇಂಡಿಯನ್ ಬ್ಯಾಂಕ್
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
ವಯೋಮಿತಿ ವಿವರಗಳು; ಆಫೀಸ್ ಅಸಿಸ್ಟೆಂಟ್ ಮಲ್ಟಿ ಪರ್ಪಸ್ 20 ರಿಂದ 28. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅರ್ಜಿ ಶುಲ್ಕ:
ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು 175 ರೂ. (ಜಿಎಸ್ಟಿ ಸೇರಿಸಿ) ಶುಲ್ಕವನ್ನು ಪಾವತಿ ಮಾಡಬೇಕು. ಉಳಿದ ಅಭ್ಯರ್ಥಿಗಳು 850 ರೂ. ಶುಲ್ಕ ಪಾವತಿಸಬೇಕು. ಆನ್ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ವಿಧಾನ:
ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ನಿಗದಿತ ವೆಬ್ ಸೈಟ್ನಲ್ಲಿ ಸರಿಯಾದ ಇ-ಮೇಲ್ ಐಡಿ, ಮೊಬೈಲ್ ನಂಬರ್ ನಮೂದು ಮಾಡಬೇಕು. ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ https://www.ibps.in/crp-rrb-xi/
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ibps.in ವೆಬ್ ಸೈಟ್ಗೆ ಭೇಟಿ ನೀಡಬಹುದಾಗಿದೆ.