IBPS PO ನೇಮಕಾತಿ 2021: 4135 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಹತೆ, ಮಾನದಂಡಗಳೇನು?
ನವದೆಹಲಿ, ಅಕ್ಟೋಬರ್ 20: ಐಬಿಪಿಎಸ್ ಪಿಒ ನೇಮಕಾತಿ 2021ರ ಅಧಿಸೂಚನೆಯನ್ನು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ಬಿಡುಗಡೆ ಮಾಡಿದೆ. ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗಳಿಗೆ ಒಟ್ಟು 4,135 ಹುದ್ದೆಗಳು ಖಾಲಿ ಇದ್ದು, ಮತ್ತು ಅಕ್ಟೋಬರ್ 20ರಿಂದ ನೋಂದಣಿ ಪ್ರಾರಂಭವಾಗುತ್ತದೆ. ನವೆಂಬರ್ 10, 2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ IBPS ಸೈಟ್ - ibps.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಮಂಗಳೂರಿನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಹತಾ
ಮಾನದಂಡಗಳೇನು?
ಬ್ಯಾಂಕುಗಳಲ್ಲಿನ
ಪ್ರೊಬೇಷನರಿ
ಆಫೀಸರ್
ಮತ್ತು
ಮ್ಯಾನೇಜ್ಮೆಂಟ್
ಟ್ರೈನೀ
ಹುದ್ದೆಗಳಿಗೆ
ಅರ್ಜಿ
ಸಲ್ಲಿಸುವ
ಅಭ್ಯರ್ಥಿಯು
ಮಾನ್ಯತೆ
ಪಡೆದ
ವಿಶ್ವವಿದ್ಯಾಲಯದಿಂದ
ಯಾವುದೇ
ವಿಷಯದಲ್ಲಿ
ಪದವಿ
ಪದವಿ
ಹೊಂದಿರಬೇಕು.
ಅಭ್ಯರ್ಥಿಯು 20ರಿಂದ 30 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಯು ಅಕ್ಟೋಬರ್ 2, 1991ಕ್ಕಿಂತ ಮುಂಚೆ ಜನಿಸಿರಬಾರದು ಮತ್ತು ಅಕ್ಟೋಬರ್ 1, 2001ರ ನಂತರ ಜನಿಸಿರಬಾರದು (ಎರಡೂ ದಿನಾಂಕಗಳನ್ನು ಒಳಗೊಂಡಂತೆ).
ಅರ್ಜಿ
ಶುಲ್ಕ
ಎಷ್ಟು?
ಐಬಿಪಿಎಸ್
ಪಿಒ
ನೇಮಕಾತಿ
2021ರ
ಪ್ರೊಬೇಷನರಿ
ಆಫೀಸರ್
ಮತ್ತು
ಮ್ಯಾನೇಜ್ಮೆಂಟ್
ಟ್ರೈನೀ
ಹುದ್ದೆಗಳಿಗೆ
ಅರ್ಜಿಸಲ್ಲಿಸುವ
ಎಲ್ಲಾ
ಇತರೆ
ವರ್ಗಕ್ಕೆ
ಸೇರಿದ
ಅಭ್ಯರ್ಥಿಗಳು
ಅರ್ಜಿ
ಶುಲ್ಕವಾಗಿ
850
ರೂ.
ಪಾವತಿಸಬೇಕಾಗುತ್ತದೆ.
ಎಸ್ಸಿ/
ಎಸ್ಟಿ
ಹಾಗೂ
ಹಿಂದುಳಿದ
ವರ್ಗಕ್ಕೆ
ಸೇರಿದವರು
ಅರ್ಜಿ
ಶುಲ್ಕವಾಗಿ
175
ರೂ.
ಪಾವತಿಸಬೇಕಾಗುತ್ತದೆ.
ಆನ್ಲೈನ್
ಮೂಲಕ
ಶುಲ್ಕ
ಪಾವತಿ
ಮಾಡಬೇಕು.
ಐಬಿಪಿಎಸ್
ನೇಮಕಾತಿ
2021:
ಅರ್ಜಿ
ಸಲ್ಲಿಸುವುದು
ಹೇಗೆ?
IBPS
ನ
ಅಧಿಕೃತ
ವೆಬ್ಸೈಟ್ಗೆ
ಭೇಟಿ
ನೀಡಿ
ಆನ್ಲೈನ್ ಉದ್ಯೋಗ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅಗತ್ಯ ವಿವರಗಳನ್ನು ಭರ್ತಿ ಮಾಡಿ, ನಿಮ್ಮನ್ನು ನೋಂದಾಯಿಸಿಕೊಳ್ಳಿ
ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ
ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ. ಹೆಚ್ಚಿನ ಬಳಕೆಗಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.