ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IBPS ನೇಮಕಾತಿ 2021: 1828 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ನವೆಂಬರ್ 04: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) 2021ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ವಿಶೇಷ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತಂತೆ ವೆಬ್ ತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಐಟಿ ಅಧಿಕಾರಿ, ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಹರಾದ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 23ರೊಳಗೆ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗಿದೆ.

ಸಂಸ್ಥೆ ಹೆಸರು: Institute of Banking Personnel Selection (IBPS)
ಹುದ್ದೆ ಹೆಸರು: IT Officers, Law Officer
ಒಟ್ಟು ಹುದ್ದೆ: 1828
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 23, 2021
ಸಂಬಳ ನಿರೀಕ್ಷೆ: ಐಬಿಪಿಎಸ್ ನಿಯಮಾವಳಿಯಂತೆ

ಹುದ್ದೆ ಹೆಸರು- ಒಟ್ಟು ಹುದ್ದೆಗಳ ಸಂಖ್ಯೆ
ಐಟಿ ಅಧಿಕಾರಿ: 220
ಕೃಷಿ ಫೀಲ್ಡ್ ಆಫೀಸರ್: 884
ರಾಜ್ ಭಾಷಾ ಅಧಿಕಾರಿ: 84
ಕಾನೂನು ಅಧಿಕಾರಿ:44
ಎಚ್ ಆರ್/ ಪರ್ಸನಲ್ ಆಫೀಸರ್: 61
ಮಾರ್ಕೆಟಿಂಗ್ ಅಧಿಕಾರಿ: 535
ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ನೇಮಕಾತಿ ಪ್ರಕ್ರಿಯೆ ಇನ್ನಿತರ ವಿವರಗಳಿಗೆ ಮುಂದೆ ಓದಿ....

ವಿದ್ಯಾರ್ಹತೆ

ವಿದ್ಯಾರ್ಹತೆ

ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಐಟಿ ಅಧಿಕಾರಿ (ಸ್ಕೇಲ್ -1): ಬಿ.ಇ ಅಥವಾ ಬಿ.ಟೆಕ್, ಟೆಲಿಕಮ್ಯೂನಿಕೇಷನ್/ ಎಲೆಕ್ಟ್ರಾನಿಕ್ಸ್ ಅಂಡ್ ಇನ್ ಸ್ಟ್ರೂಮೆಂಟೇಷನ್, ಸ್ನಾತಕೋತ್ತರ ಪದವಿ ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯೂನಿಕೇಷನ್,ಕಂಪ್ಯೂಟರ್ ಸೈನ್ಸ್/ಇನ್ಫಾರ್ಮೇಷನ್ ಟೆಕ್ನಾಲಜಿ, DOEACC ಬಿ ಶ್ರೇಣಿಯ ಪದವಿ.

ಕೃಷಿ ಫೀಲ್ಡ್ ಆಫೀಸರ್: ಕೃಷಿ/ತೋಟಗಾರಿಕೆ/ಪಶು ಸಂಗೋಪಣೆ/ಪಶುವೈದ್ಯ/ಹೈನುಗಾರಿಕೆ/ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ, ಮಾರ್ಕೆಟಿಂಗ್ ಕೋ ಆಪರೇಷನ್, ಬ್ಯಾಂಕಿಂಗ್ ಅರಣ್ಯ, ಕೃಷಿ ಬಯೋಟೆಕ್ನಾಲಜಿ/ ಆಹಾರ ವಿಜ್ಞಾನ/ ಕೃಷಿ ವ್ಯವಹಾರ ನಿರ್ವಹಣೆ/ಹೈನುಗಾರಿಕೆ ತಂತ್ರಗಾರಿಕೆ. ಕೃಷಿ ಇಂಜಿನಿಯರಿಂಗ್/ರೇಷ್ಮೆ.

ರಾಜಭಾಷಾ ಅಧಿಕಾರಿ: ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಸಂಸ್ಕೃತ, ಇಂಗ್ಲೀಷ್ ವ್ಯಾಸಂಗ ಮಾಡಿರಬೇಕು.

ಕಾನೂನು ಅಧಿಕಾರಿ: ಕಾನೂನು ವಿಷಯದಲ್ಲಿ ಪದವಿ, ಬಾರ್ ಕೌನ್ಸಿಲ್ ನಲ್ಲಿ ನೋಂದಾಯಿತ ವಕೀಲರಾಗಿರಬೇಕು.
ಎಚ್ ಆರ್/ ಪರ್ಸನಲ್ ಅಧಿಕಾರಿ: ಪದವಿ, ಸ್ನಾತಕೋತ್ತರಪದವಿ, ಡಿಪ್ಲೋಮಾ ಇನ್ ಪರ್ಸನಲ್ ಮ್ಯಾನೇಜ್ಮೆಂಟ್/ ಇಂಡಸ್ಟ್ರೀಯಲ್ ರಿಲೇಷನ್ಸ್/ ಎಚ್ ಆರ್/ ಎಚ್ ಆರ್ ಡಿ/ಸೋಷಿಯಲ್ ವರ್ಕ್.

ಮಾರ್ಕೆಟಿಂಗ್ ಅಧಿಕಾರಿ: ಎಂಬಿಎ ಮಾರ್ಕೆಟಿಂಗ್ ಎರಡು ವರ್ಷಗಳ ಅವಧಿ ಕೋರ್ಸ್, ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ ನಾಲ್ಕು ವರ್ಷಗಳ ಕೋರ್ಸ್.

ವಯೋಮಿತಿ

ವಯೋಮಿತಿ

ವಯೋಮಿತಿ: ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ(ನವೆಂಬರ್ 23, 2021 ಅನ್ವಯವಾಗುವಂತೆ). ಅಭ್ಯರ್ಥಿಗಳು 02/11/1991 ರೊಳಗೆ ಹಾಗೂ 01/11/2001 ರ ರೊಳಗೆ ಜನಿಸಿರತಕ್ಕದ್ದು.

ವಯೋಮಿತಿ ವಿನಾಯಿತಿ:
ಒಬಿಸಿ (ಎನ್ ಸಿಎಲ್), 2ಎ, 2ಬಿ, 3ಎ ಹಾಗೂ 3ಬಿ: 3 ವರ್ಷ
ಎಸ್ ಸಿ, ಎಸ್ಟಿ ಅಭ್ಯರ್ಥಿ: 5 ವರ್ಷ
ಅಂಗವಿಕಲ ಅಭ್ಯರ್ಥಿ: 10 ವರ್ಷ.

ಅರ್ಜಿ ಶುಲ್ಕ

ಅರ್ಜಿ ಶುಲ್ಕ

ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಅಭ್ಯರ್ಥಿ: 850 ರು
ಎಸ್ ಸಿ, ಎಸ್ಟಿ ಅಭ್ಯರ್ಥಿ: 175 ರು
ಶುಲ್ಕ ಪಾವತಿ ವಿಧಾನ: ಆನ್ ಲೈನ್ ಮೂಲಕ
ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.

ನೇಮಕಾತಿ ಪ್ರಕ್ರಿಯೆ

ನೇಮಕಾತಿ ಪ್ರಕ್ರಿಯೆ

ನೇಮಕಾತಿ ಪ್ರಕ್ರಿಯೆ
ನೇಮಕಾತಿ ಪ್ರಕ್ರಿಯೆ: ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/11/2021
ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23/11/2021
ಪ್ರಾಥಮಿಕ ಹಂತದ ಪರೀಕ್ಷೆ ಸಂಭಾವ್ಯ ದಿನಾಂಕ: 26/12/2021.
ಮುಖ್ಯ ಪರೀಕ್ಷೆ ಸಂಭಾವ್ಯ ದಿನಾಂಕ: 30/01/2022.
ಫೆಬ್ರವರಿ/ಮಾರ್ಚ್ 2022ರಲ್ಲಿ ಸಂದರ್ಶನ ನಡೆಯುವ ಸಾಧ್ಯತೆಯಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ವಿಧಾನ:
* ಐಬಿಪಿಎಸ್ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ಐಟಿ ಅಧಿಕಾ ಹಾಗೂ ಇನ್ನಿರತ ಆಹ್ವಾನಿತ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ. ಅರ್ಜಿ ಸಲ್ಲಿಸುವ ದಿನಾಂಕ, ಮುಂತಾದ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

English summary
IBPS PO Recruitment 2021: Apply For 1828 IT Officers, Law Officer and other Posts, Check Eligibility, How To Apply In Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X