ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಉದ್ಯೋಗ ಸೃಷ್ಟಿಯಲ್ಲಿ ಹೈದರಾಬಾದ್ ಮೊದಲು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?

|
Google Oneindia Kannada News

ಹೈದರಾಬಾದ್, ಆಗಸ್ಟ್ 5: ಭಾರತದಲ್ಲಿ ಮೂರು ಹೊಸ ಐಟಿ ಉದ್ಯೋಗಗಳಲ್ಲಿ ಒಂದನ್ನು ತೆಲಂಗಾಣ ಹೊಂದಿದೆ ಎಂದು ವರದಿಯಾಗಿದೆ. 2021-2022ರ ಆರ್ಥಿಕ ವರ್ಷದ ಅವಧಿಯಲ್ಲಿ, ತಂತ್ರಜ್ಞಾನ ವಲಯವು ರಾಷ್ಟ್ರವ್ಯಾಪಿ ಸುಮಾರು 450,000 ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಅವುಗಳಲ್ಲಿ 1,53,000 ಹೊಸ ಉದ್ಯೋಗಗಳು ಹೈದರಾಬಾದ್‌ನಲ್ಲಿ ಸೃಷ್ಟಿಯಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ಭಾರತಲ್ಲಿ ಹೈದರಾಬಾದ್‌ ಐಟಿ ಕಂಪನಿಗಳ ಉನ್ನತ ಆಯ್ಕೆಯಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಆರ್ಥಿಕ ವರ್ಷ 2022 ರ ಅವಧಿಯಲ್ಲಿ 148,500 ಹೊಸ ಉದ್ಯೋಗಗಳೊಂದಿಗೆ ರಾಷ್ಟ್ರದ ಅತಿದೊಡ್ಡ ಐಟಿ ವಲಯ ಎನಿಸಿಕೊಂಡಿರುವ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

ಕೈಗಾರಿಕೆ ಅಭಿವೃದ್ಧಿ: ಆರ್‌ ಆಂಡ್‌ ಡಿ ನೀತಿಗೆ ಸರ್ಕಾರ ಅನುಮೋದನೆ-ಸಿಎಂಕೈಗಾರಿಕೆ ಅಭಿವೃದ್ಧಿ: ಆರ್‌ ಆಂಡ್‌ ಡಿ ನೀತಿಗೆ ಸರ್ಕಾರ ಅನುಮೋದನೆ-ಸಿಎಂ

ಐಟಿ ಉದ್ಯಮದಲ್ಲಿ ರಾಜ್ಯದ ಅತ್ಯುತ್ತಮ ಸಾಧನೆಗಳನ್ನು ಹಲವಾರು ಜನರು ಗಮನಿಸಿದ್ದಾರೆ. ಐಟಿ ಉದ್ಯಮದ ಬೆಳವಣಿಗೆಯಲ್ಲಿ ತೆಲಂಗಾಣದ ಪ್ರಬಲ ಕಾರ್ಯಕ್ಷಮತೆಯನ್ನು ಇಂಡಿಯಾ ಟೆಕ್ ಮತ್ತು ಇನ್‌ಫ್ರಾ ಶ್ಲಾಘಿಸಿದೆ, ಇದು ಉದ್ಯಮದ ಬೆಳವಣಿಗೆಗಳ ಕುರಿತು ಮಾಹಿತಿ ನೀಡುವ ಟ್ವಿಟರ್ ಖಾತೆಯಾಗಿದೆ.

 ಯಾವ ನಗರಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ?

ಯಾವ ನಗರಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ?

ಇಂಡಿಯಾ ಟೆಕ್ ಮತ್ತು ಇನ್‌ಫ್ರಾ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ, ಹೈದರಾಬಾದ್‌ ಮೊದಲನೇ ಸ್ಥಾನದಲ್ಲಿದೆ, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. 54,000 ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಮುಂಬೈ ಮೂರನೇ ಸ್ಥಾನದಲ್ಲಿದ್ದರೆ, ಪುಣೆ 40,500 ಉದ್ಯೋಗಳನ್ನು ಸೃಷ್ಟಿ ಮಾಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದರೆ, ಚೆನ್ನೈ 22,500 ನೊಂದಿಗೆ ಐದನೇ ಸ್ಥಾನದಲ್ಲಿದೆ.

ಕ್ವೆಸ್ ಐಟಿ ಸಿಬ್ಬಂದಿ ಅಧ್ಯಯನವನ್ನು ಉಲ್ಲೇಖಿಸಿ ಟೈರ್ 2 ನಗರಗಳು ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ 31,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳಿಕೊಂಡಿದೆ.

 ಐಟಿ ವಲಯದಲ್ಲಿ ತೆಲಂಗಾಣದ ಸಾಧನೆ

ಐಟಿ ವಲಯದಲ್ಲಿ ತೆಲಂಗಾಣದ ಸಾಧನೆ

ತೆಲಂಗಾಣ ಐಟಿ ಮತ್ತು ಸಂವಹನ ಇಲಾಖೆಯ ಪ್ರಕಾರ ರಾಜ್ಯದ ಐಟಿ/ಐಟಿಇಎಸ್ ವಲಯದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ ಪ್ರಸ್ತುತ 7.8 ಲಕ್ಷದ ಸಮೀಪದಲ್ಲಿದೆ. 2020-21 ರಲ್ಲಿ ಉದ್ಯೋಗಿಗಳ ಸಂಖ್ಯೆ 628,615 ರಷ್ಟಿತ್ತು. ರಾಜ್ಯದ ಐಟಿ ವಲಯದಲ್ಲಿ ಉದ್ಯೋಗ ಸೃಷ್ಟಿಯ ಬೆಳವಣಿಗೆಯ ದರವು ಸುಮಾರು ಶೇಕಡ 24ರಷ್ಟು ಎಂದು ಮಾಹಿತಿ ನೀಡಿದೆ.

2013-14 ರಿಂದ, 2021-22ರ ಅವಧಿಯಲ್ಲಿ ತೆಲಂಗಾಣದ ಐಟಿ/ಐಟಿಇಎಸ್ ವಲಯದಲ್ಲಿ ಉದ್ಯೋಗ ಪ್ರಮಾಣ ಶೇಕಡ 140ರಷ್ಟು ಹೆಚ್ಚಾಗಿದೆ. ತೆಲಂಗಾಣ ರಾಜ್ಯ ರಚನೆಯಾದ ನಂತರ ಒಂದೇ ವರ್ಷದ ಅವಧಿಯಲ್ಲಿ 1.53 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಈ ಹಿಂದೆ ಹೇಳಿಕೆ ನೀಡಿದ್ದರು. ಕೊರೊನಾ ಸಾಂಕ್ರಾಮಿಕ ಸಂಕಷ್ಟದ ನಡುವೆಯೂ, ತೆಲಂಗಾಣ ಸತತ ಎರಡನೇ ವರ್ಷವೂ ಉತ್ತಮ ಸಾಧನೆ ತೋರಿಸಿದೆ.

 ಐಟಿ ರಫ್ತಿನಲ್ಲೂ ಪ್ರಗತಿ ಸಾಧಿಸಿರುವ ತೆಲಂಗಾಣ

ಐಟಿ ರಫ್ತಿನಲ್ಲೂ ಪ್ರಗತಿ ಸಾಧಿಸಿರುವ ತೆಲಂಗಾಣ

ತೆಲಂಗಾಣದ ಐಟಿ/ಐಟಿಇಎಸ್ ರಫ್ತುಗಳು 2021-22ರ ಹಣಕಾಸು ವರ್ಷದಲ್ಲಿ ರೂ 1,83,569 ಕೋಟಿಗೆ ಹೆಚ್ಚಳವಾಗಿದೆ. ಕಳೆದ ವರ್ಷಧ ಹಣಕಾಸು ವರ್ಷಕ್ಕಿಂತ ಶೇಕಡ 26.1 ರಷ್ಟು ಹೆಚ್ಚಳವಾಗಿದೆ. 2020-21ರ ಹಣಕಾಸು ವರ್ಷದಲ್ಲಿ ರಫ್ತು ಪ್ರಮಾಣ 1,45,522 ಕೋಟಿ ರುಪಾಯಿಗಳಾಗಿತ್ತು.

2013-14 ರಿಂದ, ಐಟಿ/ಐಟಿಇಎಸ್ ರಫ್ತು ಮೌಲ್ಯವು 220 ಪ್ರತಿಶತದಷ್ಟು ಹೆಚ್ಚಾಗಿದೆ. 2021-22ರಲ್ಲಿ (ಹಿಂದಿನ ವರ್ಷಕ್ಕಿಂತ) ರಫ್ತು ಆದಾಯದಲ್ಲಿ 38,046 ಕೋಟಿ ರೂ.ಗಳ ಹೆಚ್ಚಳವಾಗಿದೆ. ಈ ಹಿಂದೆ ತೆಲಂಗಾಣಕ್ಕೆ ಐಟಿಐಆರ್ ನೀಡಲಾಗಿತ್ತು, ಆದರೆ ಅದನ್ನು ರದ್ದುಗೊಳಿಸಲಾಗಿತ್ತು. ಐಟಿಐಆರ್ ಅನುಮೋದಿಸಿದ್ದರೆ, ಬೆಳವಣಿಗೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದು ಹೇಳಲಾಗಿದೆ.
2 ನೇ ಐಸಿಟಿ ನೀತಿ 2021-26 ರಲ್ಲಿ ನಿಗದಿಪಡಿಸಲಾದ 3 ಲಕ್ಷ ಕೋಟಿ ರುಪಾಯಿ ರಫ್ತು ಮತ್ತು 10 ಲಕ್ಷ ಉದ್ಯೋಗಗಳ ಗುರಿಯನ್ನು ತಲುಪುವ ಮಹತ್ವಾಕಾಂಕ್ಷೆಯನ್ನು ತೆಲಂಗಾಣ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

 ಬೆಂಗಳೂರಿಗೆ ಪೈಪೋಟಿ ಕೊಡುತ್ತಿರುವ ಹೈದರಾಬಾದ್

ಬೆಂಗಳೂರಿಗೆ ಪೈಪೋಟಿ ಕೊಡುತ್ತಿರುವ ಹೈದರಾಬಾದ್

ಇಡೀ ದೇಶದಲ್ಲೇ ಮೊಟ್ಟ ಮೊದಲನೆಯದಾಗಿ ಐಟಿ ವಲಯದಲ್ಲಿ ಅದ್ಭುತ ಪ್ರಗತಿ ಸಾಧಿಸಿದ್ದು ಬೆಂಗಳೂರು. ಐಟಿ ವಲಯದಲ್ಲಿ ಪಾರಮ್ಯ ಮೆರೆದಿದ್ದ ಬೆಂಗಳೂರು ಈಗ ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೈದರಾಬಾದ್ ಐಟಿ ಉದ್ಯಮದ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ, ಹಾಗಾದರೆ ಬೆಂಗಳೂರಿನಲ್ಲಿ ಐಟಿ ಉದ್ಯಮ ಬೆಳವಣಿಗೆ ಕುಂಠಿತವಾಗಲು ಕಾರಣವೇನು? ಐಟಿ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡುವಂತೆ ಆಕರ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆಯಾ ಎನ್ನುವ ಪ್ರಶ್ನೆಗಳು ಮೂಡಿವೆ.
ಇತ್ತೀಚಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ವಿವಾದಗಳು ಕರ್ನಾಟಕದಲ್ಲಿ ಐಟಿ ಉದ್ಯಮದ ಮೇಲೂ ಪರಿಣಾಮ ಬೀರಿದೆ ಎನ್ನುತ್ತವೆ ಮೂಲಗಳು. ಅದರಲ್ಲೂ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಕೊರತೆ, ಸಮರ್ಪಕ ಸಾರಿಗೆ ವ್ಯವಸ್ಥೆ, ಹಾಳಾದ ರಸ್ತೆಗಳ ಬಗ್ಗೆ ಮೋಹನ್ ದಾಸ್‌ ಪೈ ಅವರಂತಹ ಉದ್ಯಮಿಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಂಗಳೂರಿಗೆ ಹೋಲಿಕೆ ಮಾಡಿದಾಗ ಹೈದರಾಬಾದ್‌ನಲ್ಲಿ ಜೀವನ ನಿರ್ವಹಣೆ ವೆಚ್ಚ ಕಡಿಮೆಯಿದೆ, ಇದು ಕೂಡ ಒಂದು ಕಾರಣ ಎಂದು ಹೇಳಲಾಗಿದೆ.

English summary
Telangana accounts for one-third of all IT jobs created in India. During the financial year 2021-22. Telangana's strong performance in the industry has been praised by India Tech & Infra, a Twitter account that tweets about industry developments. Around 1,53,000 jobs were created in Hyderabad alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X