ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ನೇಮಕಾತಿ; ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 30 : ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 15/2/2020 ಕೊನೆಯ ದಿನಾಂಕವಾಗಿದೆ.

ಪ್ರಾಜೆಕ್ಟ್ ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಕೆಲಸ ಮಾಡಬೇಕಿದೆ.

ಚಿತ್ರದುರ್ಗ; 59 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಹಾಕಿ ಚಿತ್ರದುರ್ಗ; 59 ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಹಾಕಿ

ಪ್ರಾಜೆಕ್ಟ್ ಇಂಜಿನಿಯರ್, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ಪ್ರಾಜೆಕ್ಟ್ ಆಫೀಸರ್ (ಎಂಐಎಸ್), ಪಬ್ಲಿಕ್ ರಿಲೇಶನ್ ಆಫೀಸರ್, ಅಸಿಸ್ಟೆಂಟ್ ಹಾರ್ಟಿಕಲ್ಚರ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಪೂರ್ವ ರೈಲ್ವೆಯಲ್ಲಿ ಕೆಲಸ ಖಾಲಿ ಇದೆ; 2792 ಹುದ್ದೆಗಳು ಪೂರ್ವ ರೈಲ್ವೆಯಲ್ಲಿ ಕೆಲಸ ಖಾಲಿ ಇದೆ; 2792 ಹುದ್ದೆಗಳು

Hubballi Dharwad Smart City Recruitment 2020

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿಯು ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ವಾಹಕ ಸಂಸ್ಥೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ. ವಿವಿಧ ಹುದ್ದೆಗಳ ವಿದ್ಯಾರ್ಹತೆ ವಿವರಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಕೆಎಸ್‌ಟಿಡಿಸಿ ನೇಮಕಾತಿ; ದೆಹಲಿ ಕರ್ನಾಟಕ ಭವನದಲ್ಲಿ ಕೆಲಸ ಕೆಎಸ್‌ಟಿಡಿಸಿ ನೇಮಕಾತಿ; ದೆಹಲಿ ಕರ್ನಾಟಕ ಭವನದಲ್ಲಿ ಕೆಲಸ

ಉದ್ದೇಶಿತ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಿಗೆ ಗುತ್ತಿಗೆ ಅಡಿಯಲ್ಲಿ 1 ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಹಾಗೂ ಒಂದು ವರ್ಷದ ಅವಧಿ ಮೀರದಂತೆ ಮುಂದುವರೆಸಲು (ಕಾರ್ಯನಿರ್ವಹಣೆ ಮತ್ತು ಯೋಜನಗೆ ಅವಶ್ಯಕತೆಗೆ ಅನುಗುನವಾಗಿ) ಅರ್ಹ ವ್ಯಕ್ತಿಗಳಿಂದ ಅರ್ಜಿ ಕರೆಯಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲಿಕೇಶನ್ ಫಾರ್ಮ್‌ನೊಂದಿಗೆ ಇ-ಮೇಲ್ ಮಾಡಬಹುದು. ಅರ್ಜಿಗಳು www.hubballidharwadsmartcity.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಅರ್ಜಿಗಳನ್ನು ಸಲ್ಲಿಸಲು ಇ-ಮೇಲ್ ವಿಳಾಸ [email protected]. ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಆಯ್ಕೆ ಸಮಿತಿಯು ಸಂದರ್ಶನ ಜರುಗಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.

ಅರ್ಜಿ ಸಲ್ಲಿಸಿದವರು ಹುದ್ದೆಗೆ ಅನುಗುಣವಾಗಿ ಶಿಕ್ಷಣ, ಅನುಭವ ಮತ್ತು ಇತರೆ ದಾಖಲೆಗಳನ್ನು ಎರಡು ಪ್ರತಿಗಳಲ್ಲಿ ಸ್ವಂತ ದೃಢೀಕರಣದೊಂದಿಗೆ ಕಳಿಸಬೇಕಾಗಿದೆ.

ವಿಳಾಸ

jobs
English summary
Hubballi Dharwad Smart City Limited invited application for the various post. Candidates can apply till 15/2/2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X