• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೃಹರಕ್ಷಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

|

ಕೋಲಾರ, ನವೆಂಬರ್ 22 : ಕೋಲಾರ ಜಿಲ್ಲೆಯಲ್ಲಿ ಖಾಲಿ ಇರುವ 330 ಸ್ವಯಂ ಸೇವಾ ಗೃಹರಕ್ಷಕ ಮತ್ತು ಗೃಹರಕ್ಷಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಪಡೆದು ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 5.

ನೇಮಕಾತಿ ಸಂದರ್ಭದಲ್ಲಿ ಕಂಪ್ಯೂಟರ್ ಹಾಗೂ ಡ್ರೈವಿಂಗ್ ಪರವಾನಗಿ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಗೃಹರಕ್ಷಕದಳದ ಸಂಸ್ಥೆಯು ಒಂದು ಸ್ವಯಂ ಸೇವಾ ಸಂಸ್ಥೆಯಾಗಿರುತ್ತದೆ.

ಬೀದರ್; ಆಶಾ ಮೆಂಟರ್ ಹುದ್ದೆಗಾಗಿ ಅರ್ಜಿ ಹಾಕಿ

ಈ ಸಂಸ್ಥೆಯಲ್ಲಿ 3 ವರ್ಷಗಳ ಅವಧಿಗೆ ಮಾತ್ರ ಸೇವೆ ಸಲ್ಲಿಸಬಹುದಾಗಿದ್ದು, ಇದು ಖಾಯಂ ನೌಕರಿಯಾಗಿರುವುದಿಲ್ಲ. ಅಭ್ಯರ್ಥಿಗಳು ಅರ್ಜಿಗಳನ್ನು ಪೊಲೀಸ್ ಇಲಾಖೆಯ ವೆಬ್ ಸೈಟ್ www.kolarpolice.com ನಲ್ಲಿ ಮತ್ತು ಜಿಲ್ಲಾ ಗೃಹರಕ್ಷಕದಳದ ಕಛೇರಿ, ಕೋಲಾರ ಇಲ್ಲಿ ಪಡೆಯಬಹುದು.

ಯಾವುದೇ ರೀತಿಯ ಮಾಸಿಕ ಸಂಬಳ/ ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ. ಪ್ರತಿ ತಿಂಗಳು 4 ಕವಾಯತುಗಳನ್ನು ವಾರದಲ್ಲಿ ಒಂದು ದಿನದಂತೆ 3 ಗಂಟೆ ಅವಧಿ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು. 19 ವರ್ಷ ಪೂರ್ಣಗೊಂಡಿರಬೇಕು ಹಾಗೂ 50 ವರ್ಷ ಮೀರಿರಬಾರದು.

SSC CHSL ನೇಮಕಾತಿ 2020: 6000 ವಿವಿಧ ಹುದ್ದೆಗಳಿವೆ

ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ 10ನೇ ತರಗತಿ (ಅಂಕಪಟ್ಟಿ / ಟಿ.ಸಿ.), ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರ (ಟಿ.ಸಿ.), ಬ್ಯಾಂಕ್ ಪಾಸ್ ಪುಸ್ತಕ (ಖಾತೆ ಚಾಲ್ತಿಯಲ್ಲಿರಬೇಕು), ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ (ವೋಟರ್ ಐ.ಡಿ.), ಪಾನ್ ಕಾರ್ಡ್, ಪಡಿತರ ಚೀಟಿ ಕಾರ್ಡ್ (ರೇಷನ್ ಕಾರ್ಡ್) ಮುಂತಾದ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.

ಮೈಸೂರು; ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಾಹನ ಚಾಲನ ಪರವಾನಗಿ (ಡಿ.ಎಲ್.), ವೈದ್ಯಕೀಯ ಪ್ರಮಾಣ ಪತ್ರ (ರಕ್ತದ ಗುಂಪು, ತೂಕ, ಎತ್ತರ ಒಳಗೊಂಡಂತೆ), ಮೊಬೈಲ್ ಸಂಖ್ಯೆ, ಈ-ಮೇಲ್ ಐ.ಡಿ., ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ -2, ಅಭ್ಯರ್ಥಿಯ ಪೂರ್ಣ ವಿಳಾಸದೊಂದಿಗೆ ಪೋಸ್ಟ್ ಕಾರ್ಡ್ -1, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗೃಹರಕ್ಷಕದಳ ಸಮಾದೇಷ್ಟರಾದ ಕಿರಣ್‍ಕುಮಾರ್. ಕೆ. ಆರ್, ಸಹಾಯಕ ಬೋಧಕರಾದ ರವಿಕುಮಾರ್. ಬಿ, ದೂರವಾಣಿ ಸಂಖ್ಯೆ 7090440037, 9482233837 ಸಂಪರ್ಕಿಸಬಹುದಾಗಿದೆ.

English summary
Apply for home guard post in Kolar district. Candidates can apply till December 5, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X