ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ವೃತ್ತಿ ಯೋಜನೆಯಡಿ HCLನಲ್ಲಿ ಸಾವಿರಾರು ಫ್ರೆಶರ್ಸ್ ನೇಮಕ

|
Google Oneindia Kannada News

ಬೆಂಗಳೂರು, ನವೆಂಬರ್ 5: ಪ್ರಮುಖ ಐಟಿ ಸಂಸ್ಥೆ ಎಚ್‌ಸಿಎಲ್ ಮೊದಲ ವೃತ್ತಿ ಯೋಜನೆಯಡಿ ಸಾವಿರಾರು ಫ್ರೆಶರ್ಸ್ ನೇಮಕ ಮಾಡಿಕೊಳ್ಳುತ್ತಿದೆ. ಪದವೀಧರರನ್ನು ನೇಮಿಸುವುದಾಗಿ ಈ ಅಭಿಯಾನ ಆರಂಭಿಸಲಾಗಿದ್ದು, ಫ್ರೆಶರ್ಸ್ ನೇಮಕ ಹಾಗೂ ನಂತರ ಮೂರು ತಿಂಗಳ ಕೋರ್ಸ್ ಕೂಡಾ ಇದರಲ್ಲಿ ಸೇರಿದೆ.

ಕೊವಿಡ್ 19 ಸಂದರ್ಭದಲ್ಲಿ ಬಹುತೇಕ ಈ ಬಾರಿ ವರ್ಚುಯಲ್ ಕ್ಲಾಸ್ ರೂಮ್ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಎಚ್‌ಸಿಎಲ್ ಜಾಗತಿಕ ಮಟ್ಟದ ಲೈವ್ ಪ್ರಾಜೆಕ್ಟ್ ಗಳಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.

ಈ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ತರಬೇತಿ ಪಡೆದುಕೊಳ್ಳಬಹುದಾಗಿದ್ದು, ವೃತ್ತಿ ಆರಂಭದಲ್ಲಿ ಇದು ಐಟಿ ಸಂಸ್ಥೆ ನೀಡುತ್ತಿರುವ ಉತ್ತಮ ಅವಕಾಶ ಎನ್ನಬಹುದು.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ 6 ತಿಂಗಳ ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ ನಂತರ ಉದ್ಯೋಗ ಖಾತ್ರಿಯಾಗಲಿದೆ. ವರ್ಚ್ಯುಯಲ್ ಕ್ಲಾಸ್ ರೂಮ್, ಮೂರು ತಿಂಗಳ ವೃತ್ತಿ ತರಬೇತಿ ನಂತರ ನೇರವಾಗಿ ಸಂಸ್ಥೆಯ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಗಲಿದೆ.

HCL announces ‘First Career Programme’ for engineering freshers to bag their first jobs

ಸಂಬಳ ನಿರೀಕ್ಷೆ: ಫ್ರೆಶರ್ಸ್ ಇಂಜಿನಿಯರಿಂಗ್ ತರಬೇತಿ ಪಡೆದ ಬಳಿಕ ಎಚ್ ಸಿ ಎಲ್ ಟೆಕ್ನಾಲಕೀಸ್ ನಿಂದ ವಾರ್ಷಿಕ 2,75,000 ರು ಸಂಬಳ ನಿರೀಕ್ಷಿಸಬಹುದು.

ಐಟಿ ಫ್ರೆಶರ್ಸ್ ಗಮನಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗ ಅವಕಾಶಐಟಿ ಫ್ರೆಶರ್ಸ್ ಗಮನಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗ ಅವಕಾಶ

ಆದರೆ, ಈ ತರಬೇತಿಯ ಶುಲ್ಕವೂ ಅಧಿಕವಾಗಿದ್ದು, 1,00,000 ರು ಪ್ಲಸ್ ತೆರಿಗೆ ನೀಡಬೇಕಾಗುತ್ತದೆ. ಇಂಜಿನಿಯರಿಂಗ್ ವಿಶೇಷ ತರಬೇತಿಗೆ 1,50,000 ರು ಪ್ಲಸ್ ತೆರಿಗೆ ಇದೆ.

ಅರ್ಹತೆ:
ಸಂಬಂಧಪಟ್ಟ ವಿಷಯದಲ್ಲಿ ಪದವಿ, 12ನೇ ತರಗತಿಯಲ್ಲಿ ಶೇ 50 ರಷ್ಟು ಸರಾಸರಿ ಅಂಕಗಳೊಂದಿಗೆ ಪಾಸಾಗಿರಬೇಕು.

ಫ್ರೆಶರ್ಸ್ ಇಂಜಿನಿಯರಿಂಗ್ ಪ್ರೋಗ್ರಾಂ:
ಬಿ. ಇ/ ಬಿ.ಟೆಕ್, ಎಂಸಿಎ, ಎಂ.ಟೆಕ್, ಎಂಎಸ್ಸಿ ಪದವಿ ಜೊತೆಗೆ 0-2 ವರ್ಷ ವೃತ್ತಿ ಅನುಭವ ಹೊಂದಿರಬೇಕು.

ಬಿಎಸ್ಸಿ(ಐಟಿ/ಕಂಪ್ಯೂಟರ್ ಸೈನ್ಸ್), ಬ್ಯಾಚುಲರ್ ಆಫ್ ವೋಕೇಷನಲ್ ತರಬೇತಿ (ಐಟಿ/ಕಂಪ್ಯೂಟರ್ ಸೈನ್ಸ್), ಬಿಸಿಎ ಪದವಿ ಜೊತೆಗೆ 0-2 ವರ್ಷ ವೃತ್ತಿ ಅನುಭವ ಹೊಂದಿರಬೇಕು. 12ನೇ ತರಗತಿಯಲ್ಲಿ ಶೇ 65ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು. 2018, 2019 ಹಾಗೂ 2021ರಲ್ಲಿ ಪಾಸಾಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳು ಆನ್ ಲೈನ್ ಕೌನ್ಸಲಿಂಗ್, ಎಚ್ ಆರ್ ಸಂದರ್ಶನ, ವಾಯ್ಸ್ ಪರೀಕ್ಷೆ, ಆನ್ ಲೈನ್ ಸಂದರ್ಶನಕ್ಕೆ ಒಳಪಡಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಎಚ್ ಸಿ ಎಲ್ ಟೆಕ್ನಾಲಜೀಸ್ ಸಂಸ್ಥೆ ವೆಬ್ ತಾಣವನ್ನು ವೀಕ್ಷಿಸಬಹುದು.
ಕೋವಿಡ್ 19 ಸಾಂಕ್ರಾಮಿಕದ ಎರಡೂ ಅಲೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಎಚ್ ಸಿ ಎಲ್ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿತ್ತು. ಹೊಸ ನೇಮಕಾತಿಗೆ ತಗುಲುವ ವೆಚ್ಚ ಶೇ 20% ಅಧಿಕವಾಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಚ್ ಸಿ ಎಲ್ ಜನಪ್ರಿಯ ಯೋಜನೆ ಘೋಷಿಸಿತ್ತು, ಉದ್ಯೋಗಿಗಳಿಗೆ ಬೋನಸ್, ಬೆಂಜ್ ಕಾರು ಉಡುಗೊರೆಯಾಗಿ ನೀಡಿತ್ತು.


ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕೋವಿಡ್ ಕಾಲದಲ್ಲೂ ಬೋನಸ್ ನೀಡಲಾಗುತ್ತಿದೆ. ಶೇ 11.8ರಷ್ಟು ಆಟ್ರಿಷನ್ ದರ ಉಳಿಸಿಕೊಂಡಿದೆ. ಎಚ್‌ಸಿಎಲ್ ಒಟ್ಟಾರೆ 1,68, 977 ಉದ್ಯೋಗಿಗಳನ್ನು ಹೊಂದಿದ್ದು, ಆಟ್ರಿಷನ್ ದರ ಶೇ 16 ರಿಂದ ಶೇ 11.8ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.

ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ. ಆರಂಭದ ಹಂತದಲ್ಲಿ ಇನ್ಫೋಸಿಸ್ ಹಾಗೂ ಎಚ್‌ಸಿಎಲ್ ಟೆಕ್ ಕ್ರಮವಾಗಿ 26,000 ಹಾಗೂ 12,000 ಹೊಸ ನೇಮಕಾತಿ ಘೋಷಿಸಿವೆ.

English summary
HCL, has rolled out ‘First Career Programme’ for engineering freshers to prepare them for entry-level jobs at the company (HCL Technologies) itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X