ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಆಹ್ವಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2021-22ನೇ ಶೈಕ್ಷಣಿಕ ವರ್ಷಕ್ಕೆ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರನ್ನು ಆಯ್ಕೆಮಾಡಿಕೊಳ್ಳಲಾಗುತ್ತಿದೆ.

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2021-22ನೇ ಶೈಕ್ಷಣಿಕ ಸಾಲಿನ 1,3 ಹಾಗೂ 5ನೇ ಸೆಮಿಸ್ಟರ್‌ ಅವಧಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅವಶ್ಯವಿರುವ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಈ ಹಿಂದೆ ಆಯಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಂದ ಕಾಲೇಜಿನ ಹಂತದಲ್ಲಿ ಅರ್ಜಿಯನ್ನು ಪಡೆದು, ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ವಿಷಯಗಳ ವಿಭಾಗದ ಮುಖ್ಯಸ್ಥರು, ಹಿರಿಯ ಅಧ್ಯಾಪಕರು ಹಾಗೂ ಆಡಳಿತ ವಿಭಾಗದ ಅಧಿಕಾರಿ/ಸಿಬ್ಬಂದಿ ವರ್ಗದವರನ್ನೊಳಗೊಂಡ ಆಯ್ಕೆ ಸಮಿತಿಯು ಪರಿಶೀಲಿಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ.

ಕೊಪ್ಪಳ; ಅತಿಥಿ ಬೋಧಕರ ಹುದ್ದೆಗೆ ನೇರ ಸಂದರ್ಶನ ಕೊಪ್ಪಳ; ಅತಿಥಿ ಬೋಧಕರ ಹುದ್ದೆಗೆ ನೇರ ಸಂದರ್ಶನ

* ಸಾಮಾನ್ಯ ವಿದ್ಯಾರ್ಹತೆ, ಅಭ್ಯರ್ಥಿಯು ಎರಡು ಸ್ನಾತಕೋತ್ತರ ಪದವಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳನ್ನು ಶೇ.25ನ್ನು ಗಣನೆಗೆ ತೆಗೆದುಕೊಳ್ಳುವುದು. ಉದಾಹರಣೆಗೆ-ಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ ಶೇ.60 ಅಂಕ ಪಡೆದಿದ್ದಲ್ಲಿ ಅದರ ಶೇ.25ರಷ್ಟು ಭಾಗವನ್ನು ಅಂದರೆ 15 ಅಂಕಗಳು ಎಂಬುದಾಗಿ ಗಣನೆಗೆ ತೆಗೆದುಕೊಳ್ಳುವುದು.

Guest Lecturer Recruitment For Govt First Grade Colleges In Karnataka

*1)ಪಿಎಚ್‌ಡಿ ವಿದ್ಯಾರ್ಹತೆ ಪಡೆದಿದ್ದಲ್ಲಿ

2)ಎನ್‌ಇಟಿ/ಕೆ-ಸೆಟ್/ಎಸ್‌ಎಲ್‌ಇಟಿ ವಿದ್ಯಾರ್ಹತೆ ಪಡೆದಿದ್ದಲ್ಲಿ

3)ಎಂ.ಫಿಲ್ ವಿದ್ಯಾರ್ಹತೆ ಪಡೆದಿದ್ದಲ್ಲಿ

*ಹಿಂದಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ 3 ಅಂಕಗಳನ್ನು ಗರಿಷ್ಠ 16 ವರ್ಷಗಳಿಗೆ 48 ಅಂಕಗಳನ್ನು ಮಿತಿಗೊಳಿಸುವುದು.

*ವಿಕಲಚೇತನ ಅಭ್ಯರ್ಥಿಗಳಿಗೆ 10 ಅಂಕಗಳನ್ನು ಹೆಚ್ಚುವರಿಯಾಗಿ ನೀಡುವುದು

ಈ ಮಾನದಂಡಗಳನ್ನು ಬಳಸಿ ಕಾರ್ಯಭಾರದ ಅಗತ್ಯಕ್ಕನುಗುಣವಾಗಿ ಹಾಗೂ ಈ ಸುತ್ತೋಲೆ ಲಗತ್ತಿಸಿರುವ ಅನುಬಂಧದಲ್ಲಿ ನಿಗದಿಪಡಿಸಿರುವ ಕಾಲೇಜುವಾರು ಸಂಖ್ಯಾಮಿತಿಗೊಳಪಟ್ಟು ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವಂತೆ ಹಾಗೂ ಆಯ್ಕೆ ಮಾಡಿಕೊಂಡ ತಕ್ಷಣವೇ ಎಲ್ಲಾ ಅತಿಥಿ ಉಪನ್ಯಾಸಕರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಕಡ್ಡಾಯವಾಗಿ EMISನಲ್ಲಿ ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ.

ಈ ಮೊದಲು ಅದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡ ಬಳಿಕವೂ ಬೋಧನಾ ಕಾರ್ಯಭಾರ ಉಳಿಕೆಯಾದಲ್ಲಿ ಮಾತ್ರ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಆಯ್ಕೆಗೆ ನಿಗದಿಪಡಿಸಿರುವ ನಮೂನೆಯಲ್ಲಿಯೇ ಕಾಲೇಜು ಹಂತದಲ್ಲಿ ಅರ್ಜಿಯನ್ನು ಪಡೆದು, ಆಯ್ಕೆಗೆ ನಿಗದಿಪಡಿಸಿರುವ ನಮೂನೆಯಲ್ಲಿಯೇ ಕಾಲೇಜು ಹಂತದಲ್ಲಿ ಅರ್ಜಿಯನ್ನು ಪಡೆದು, ಆಯ್ಕೆ ಸಮಿತಿಯು ಪರಿಶೀಲಿಸಿ ಮಾನದಂಡಗಳನ್ವಯ ಮೆರಿಟ್‌ಲಿಸ್ಟ್‌ ತಯಾರಿಸಿ, ಈಗಿರುವ ಮೆರಿಟ್‌ಲಿಸ್ಟ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನು ಕಾಲೇಜು ಹಂತದಲ್ಲಿಯೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆನ್‌ಲೈನ್ ಅಪ್ಲಿಕೇಷನ್ ಐಡಿ ಲಭ್ಯವಿಲ್ಲದ ಅಭ್ಯರ್ಥಿಗಳ ಐಡಿ ರಚನೆ ಮಾಡಲು ಅಭ್ಯರ್ಥಿವಾರು ಮಾಹಿತಿಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಕಚೇರಿಗೆ ಸಲ್ಲಿಸಬೇಕು.

ಅನುಬಂಧದಲ್ಲಿ ನಿಗದಿಪಡಿಸಿರುವ ಸಂಖ್ಯಾಮಿತಿಯ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡ ಬಳಿಕವೂ ಬೋಧನಾ ಕಾರ್ಯಭಾರ ಉಳಿಕೆಯಾದಲ್ಲಿ ಮಾತ್ರ ಅಗತ್ಯವಿರುವ ಅತಿಥಿ ಉಪನ್ಯಾಸಕರ ಸಂಖ್ಯೆ ಹಾಗೂ ಅಪೇಕ್ಷಿತ ವಿವರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

English summary
Government of Karnataka, Department Of collegiate Education invites application for guest lectures in Government First grade colleges in Karnataka for Academic year 2021-22. Eligeble candidates may apply through online mode only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X