ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿಪೂರ್ವ ಕಾಲೇಜುಗಳಿಗೆ 3708 ಅತಿಥಿ ಉಪನ್ಯಾಸಕರ ನೇಮಕ

|
Google Oneindia Kannada News

ಬೆಂಗಳೂರು, ಜು. 06: ರಾಜ್ಯದ ಪದವಿ ಪೂರ್ವ ಕಾಲೇಜುಗಳಿಗೆ 3708 ಅತಿಥಿ ಉಪನ್ಯಾಸಕರನ್ನು ಗೌರವಧನದ ಆಧಾರದ ಮೇಲೆ ನೇಮಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈವರೆಗೂ ಕೇವಲ 9 ಸಾವಿರ ರೂ. ನೀಡುತ್ತಿದ್ದ ಗೌರವ ಧನವನ್ನು ಮಾಸಿಕ 12 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 3708 ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು, 2016ರ ಸುತ್ತೋಲೆಯ ಷರತ್ತುಗಳಿಗೆ ಒಳಪಟ್ಟು ಮಾಸಿಕ 12 ಸಾವಿರ ರೂ. ಗೌರವ ಧನ ನಿಗದಿ ಮಾಡಲಾಗಿದೆ. 2022-23 ನೇ ಸಾಲಿನಲ್ಲಿ ಎಂಟು ತಿಂಗಳ ಸೇವಾವಧಿಗೆ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.

Govt Issued Order for Recruitment of 3708 Guest Lecturers for PU colleges

ಹುದ್ದೆಗಳ ವಿವರ: 2023 ಏಪ್ರಿಲ್ 1 ಕ್ಕೆ ಖಾಲಿಯಿರುವ 3271 ಹುದ್ದೆ, ಬಡ್ತಿ, ವಯೋ ನಿವೃತ್ತಿ , ನಿಧನ ಕಾರಣದಿಂದ ತೆರವಾದ 100 ಹುದ್ದೆ ಹಾಗೂ ಹೊಸ ಸಂಯೋಜನೆಗಳಿಗೆ ಮಂಜೂರಾದ ವಿಷಯಗಳಿಗೆ ಸಂಬಂಧಿಸಿದಂತೆ 337 ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಲಿಯಿವೆ. ಒಟ್ಟು 3708 ಅಥಿತಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಗೌರವ ಧನ 9 ಸಾವಿರ ರೂ. ಬದಲಿಗೆ 12 ಸಾವಿರ ರೂ. ನೀಡುವುದು. ಜೊತೆಗೆ ಖಾಲಿಯಿರುವ ಬೋಧಕ ಹುದ್ದೆಗಳಿಗೆ ಅರ್ಹ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ.

Govt Issued Order for Recruitment of 3708 Guest Lecturers for PU colleges

ಇತ್ತೀಚೆಗೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನವನ್ನು 15 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸುವಂತೆ ಅತಿಥಿ ಉಪನ್ಯಾಸಕರು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಸಹ ಹೆಚ್ಚಿಸಿದ್ದು, ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಇದರಿಂದ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

Govt Issued Order for Recruitment of 3708 Guest Lecturers for PU colleges

ರಾಜ್ಯದಲ್ಲಿ ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಶೂ ಪಾಲಿಶ್ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಕೊಡುತ್ತಿರುವ ಗೌರವ ಧನದಿಂದ ಅತಿಥಿ ಉಪನ್ಯಾಸಕರು ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದ್ದರು. ಪ್ರಸಕ್ತ ಸಾಲಿನಲ್ಲಿ 9 ಸಾವಿರ ರೂ. ಇದ್ದ ಗೌರವ ಧನವನ್ನು 12 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.

Recommended Video

ಶಾಕ್ ಮೇಲೆ ಶಾಕ್ !!ಗೃಹಬಳಕೆಯ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ರೂ.50 ಏರಿಕೆ | *India | OneIndia Kannada

English summary
Karnataka guest lecturers recruitment for PU Colleges : Karnataka govt issued order for Recruitment of 3708 Guest Lecturers for PU colleges. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X