ವಿಧಾನಸೌಧ; ಕಿರಿಯ ಸಹಾಯಕರ ಹುದ್ದೆಗಳು ರದ್ದು?
ಬೆಂಗಳೂರು, ನವೆಂಬರ್ 25 : ವಿಧಾನಸೌಧದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ 542 ಹೆಚ್ಚುವರಿ ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ನಷ್ಟದ ಹಿನ್ನಲೆಯಲ್ಲಿ ಹುದ್ದೆ ರದ್ದು ಮಾಡಿ, ವೆಚ್ಚ ಕಡಿತ ಮಾಡಲಾಗುತ್ತದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಯಾವ ಇಲಾಖೆಗಳಲ್ಲಿ ಹೆಚ್ಚುವರಿ ಸಿಬ್ಭಂದಿಗಳು ಇದ್ದಾರೆಯೋ? ಅವರ ಹುದ್ದೆಗಳನ್ನು ರದ್ದು ಮಾಡುವುದು, ಮಾತೃ ಇಲಾಖೆಗೆ ವಾಪಸ್ ಕಳಿಸಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ವಿವಿಧ ಇಲಾಖೆಗಳ ನೇಮಕಾತಿ; ಅರ್ಜಿ ಹಾಕಿ
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಕಿರಿಯ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ಕನಿಷ್ಠ 2 ಕೋಟಿ ಹೊರೆಯಾಗುತ್ತಿದೆ. ಈಗ ವೆಚ್ಚ ಕಡಿತದ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿದ್ದು, ಹುದ್ದೆಗಳು ರದ್ದಾಗುವ ಸಾಧ್ಯತೆ ಇದೆ.
ಕರ್ನಾಟಕ ಅಂಚೆ ವೃತ್ತ ನೇಮಕಾತಿ; 52 ಹುದ್ದೆಗೆ ಅರ್ಜಿ ಹಾಕಿ
ಹಣಕಾಸು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕಂದಾಯ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಹೆಚ್ಚುವರಿಯಾಗಿ ನಿಯೋಜನೆಗೊಂಡ ಹುದ್ದೆಗಳು ಅನಗತ್ಯವಾಗಿದ್ದು, ಕೆಲವು ಇಲಾಖೆಗಳಲ್ಲಿ 2 ರಿಂದ 3 ಜನರು ಇದ್ದಾರೆ.
ನೇಮಕಾತಿ ಸ್ಥಗಿತ; ಹಲವರ ಕೈ ತಪ್ಪಲಿದೆ ಸರ್ಕಾರಿ ಉದ್ಯೋಗ!
ಸರ್ಕಾರ ಕೆಲವು ಇಲಾಖೆಗಳನ್ನು ವಿಲೀನ ಮಾಡುವ ತೀರ್ಮಾನವನ್ನು ಸಹ ಕೈಗೊಂಡಿದೆ. ಇದರ ಜೊತೆಗೆ ಹೆಚ್ಚುವರಿ ಹುದ್ದೆಗಳನ್ನು ರದ್ದು ಮಾಡಲಾಗುತ್ತದೆ. ಕಿರಿಯ ಸಹಾಯಕರು 25 ರಿಂದ 40 ಸಾವಿರದ ತನಕ ವೇತನ ಪಡೆಯುತ್ತಿದ್ದು, ಈ ಹುದ್ದೆಗಳು ಇಲಾಖೆಗಳಿಗೆ ಅಗತ್ಯವಾಗಿಲ್ಲ.
ಡಿಪಿಎರ್ ಸಲ್ಲಿಕೆ ಮಾಡಿರುವ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಿಂದಾಗಿ ಅನಗತ್ಯ ಹುದ್ದೆಗಳಲ್ಲಿರುವ ಕಿರಿಯ ಸಹಾಯಕರು ಆಡಳಿತ ಶಕ್ತಿಕೇಂದ್ರದಿಂದ ಹೊರಬರಲಿದ್ದಾರೆ. ಸರ್ಕಾರ ಹುದ್ದೆಗಳನ್ನು ರದ್ದುಪಡಿಸಲಿದೆಯೇ? ಕಾದು ನೋಡಬೇಕಿದೆ.