ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಸಿಕ್ಕಿದೆ ಆದರೆ ಆಫರ್‌ ಲೆಟರ್‌ ಬಂದಿಲ್ಲ: ಐಟಿ ಉದ್ಯೋಗಿಗಳ ಅಳಲು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 14: ಹಲವಾರು ಐಟಿ ಕಂಪನಿಗಳಿಂದ ಉದ್ಯೋಗದ ಆಫರ್‌ಗಳನ್ನು ಪಡೆದಿರುವ ಹೊಸ ಉದ್ಯೋಗಿಗಳು ಮೂರರಿಂದ ಐದು ತಿಂಗಳ ನಂತರವೂ ಕೆಲಸ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರ ಅಥವಾ ಆಫರ್ ಲೆಟರ್ ಅನ್ನು ಸ್ವೀಕರಿಸಿಲ್ಲವಾದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ಹೊರಹಾಕುತ್ತಿದ್ದಾರೆ.

ಮಾರ್ಚ್ 22ರಂದು ಇನ್ಫೋಸಿಸ್ ತನಗೆ ಆಫರ್‌ ಅನ್ನು ಮಾಡಿದೆ. ಆದರೆ ಯಾವ ಸಮಯದಿಂದ ಅವರು ಕಂಪನಿಯಿಂದ ಕೆಲಸ ಎಂದು ಹೇಳಿಲ್ಲ. ನಾನು ಕೆಲ ತಿಂಗಳುಗಳಿಂದ ಕಾಯುತ್ತಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲೂ ಅವರಿಗೆ ಸಂವಹನ ನಡೆಸಿದೆ. ಆದರೆ ಅವರಿಂದ ನನಗೆ ಹಿಂತಿರುಗಿ ಪ್ರತಿಕ್ರಿಯೆ ಬಂದಿಲ್ಲ. ಉದ್ಯೋಗದ ಪ್ರಸ್ತಾಪದ ಪ್ರಗತಿಯ ಬಗ್ಗೆ ಯಾವುದೇ ಸ್ಪಷ್ಟವಾದ ಪ್ರತಿಕ್ರಿಯೆವನ್ನು ನೀಡಿಲ್ಲ ಎಂದು ಎಂಜಿನಿಯರ್ ಒಬ್ಬರು ಹೇಳಿದ್ದಾರೆ.

ಪುಣೆ, ಹೈದರಾಬಾದ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಐಟಿ ಉದ್ಯೋಗಿಗಳುಪುಣೆ, ಹೈದರಾಬಾದ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಐಟಿ ಉದ್ಯೋಗಿಗಳು

ಇನ್ಫೋಸಿಸ್ ಜೊತೆಗೆ ಎಚ್‌ಸಿಎಲ್, ವಿಪ್ರೋದಿಂದ ಆಫರ್‌ಗಳು ಬಂದಿವೆ. ಎಚ್‌ಸಿಎಲ್‌ ಪರವಾಗಿಲ್ಲ, ಆದರೆ ವಿಪ್ರೋ ಆಫರ್‌ನಲ್ಲಿ ಯಾವುದೇ ನವೀಕರಣಗಳನ್ನು ಒದಗಿಸಿಲ್ಲ ಎಂದು ಇನ್ನೊಬ್ಬ ವ್ಯಕ್ತಿ ಹೇಳಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಬುಸಿನೆಸ್‌ ಲೈನ್ ಪ್ರಕಾರ ಇದೇ ಮಾದರಿ ಸಮಸ್ಯೆಗಳನ್ನು ಎದುರಿಸುತ್ತಿರುವ ನಾಲ್ಕು ಅಭ್ಯರ್ಥಿಗಳನ್ನು ಸಂದರ್ಶಿಸಲಾಗಿದೆ. ಇವರನ್ನು ಎರಡು ವಿಭಿನ್ನ ರೀತಿಯಲ್ಲಿ ನೇಮಕ ಮಾಡಿಕೊಳ್ಳಲಾಯಿತು. ಇಬ್ಬರನ್ನು ಕ್ಯಾಂಪಸ್‌ನಲ್ಲಿ ಮತ್ತು ಇಬ್ಬರನ್ನು ಕ್ಯಾಂಪಸ್‌ನ ಹೊರಗೆ ಮಾಡಲಾಯಿತು.

ಎಲ್ಲಾ ಆಫರ್ ಲೆಟರ್‌ಗಳು ಮಾನ್ಯ

ಎಲ್ಲಾ ಆಫರ್ ಲೆಟರ್‌ಗಳು ಮಾನ್ಯ

ಭೋಪಾಲ್‌ನ ಸಾಗರ್ ಇನ್‌ಸ್ಟಿಟ್ಯೂಟ್ ಆಫ್ ರಿಸರ್ಚ್ ಅಂಡ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಮತ್ತೊಬ್ಬ ಪದವೀಧರರು, ನಾನು ಉದ್ಯೋಗದಾತರಿಂದ ಯಾವುದೇ ಅಪ್‌ಡೇಟ್ ಪಡೆದಿಲ್ಲ. ಈ ಬಗ್ಗೆ ನನ್ನ ಕಾಲೇಜು ಉದ್ಯೋಗ ಅಧಿಕಾರಿಯೂ ಏನನ್ನೂ ಕೇಳಿಲ್ಲ ಎಂದು ಹೇಳಿದರು. ಈ ಬಗ್ಗೆ ಅರ್ಹ ಅಭ್ಯರ್ಥಿಗಳಿಗೆ ಕಳುಹಿಸಲಾದ ಎಲ್ಲಾ ಆಫರ್ ಲೆಟರ್‌ಗಳನ್ನು ಗೌರವಿಸುವುದಾಗಿ ವಿಪ್ರೋ ದೃಢೀಕರಿಸಬಹುದು ಎಂದು ವಿಪ್ರೋ ತನ್ನ ಜಾಲತಾಣದಲ್ಲಿ ಉಲ್ಲೇಖಿಸಿದೆ.

ಹುಬ್ಬಳ್ಳಿ ಕ್ಯಾಂಪನ್‌ನಲ್ಲಿ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ ಇನ್ಫೋಸಿಸ್ಹುಬ್ಬಳ್ಳಿ ಕ್ಯಾಂಪನ್‌ನಲ್ಲಿ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ ಇನ್ಫೋಸಿಸ್

ಬ್ಯಾಚ್‌ಗಳ ಮೂಲಕ ತರಬೇತಿ ಕಾರ್ಯಕ್ರಮ

ಬ್ಯಾಚ್‌ಗಳ ಮೂಲಕ ತರಬೇತಿ ಕಾರ್ಯಕ್ರಮ

ಇನ್ಫೋಸಿಸ್‌ನ ಹೇಳಿಕೆಯ ಪ್ರಕಾರ, ಇನ್ಫೋಸಿಸ್‌ನಲ್ಲಿ ನೇಮಕಾತಿ ಯಾವಾಗಲೂ ಗ್ರಾಹಕರ ಅಗತ್ಯತೆಗಳಿಗೆ ವರ್ಷಪೂರ್ತಿ ನಡೆಯುತ್ತದೆ. ಆದ್ದರಿಂದ ಪ್ರಾಜೆಕ್ಟ್ ಡೆಡ್‌ಲೈನ್‌ಗಳಲ್ಲಿನ ಬದಲಾವಣೆಗಳೊಂದಿಗೆ ಹೊಂದಾಣಿಕೆ ಮಾಡಲು ಮತ್ತು ಉದ್ಯೋಗಿಗಳಿಗೆ ಸರಿಯಾದ ಟ್ರೈನಿಂಗ್‌ ಎಂಟ್ರಿಯನ್ನು ಒದಗಿಸಲು ನಾವು ಹಲವು ಬ್ಯಾಚ್‌ಗಳ ಸೇರ್ಪಡೆ ದಿನಾಂಕಗಳನ್ನು ನೀಡುತ್ತೇವೆ ಎಂದು ತಿಳಿಸಿದೆ.

ಏಕಕಾಲದಲ್ಲಿ ಎರಡೇರಡು ಕಂಪೆನಿಗಳಿಗೆ ಕೆಲಸ

ಏಕಕಾಲದಲ್ಲಿ ಎರಡೇರಡು ಕಂಪೆನಿಗಳಿಗೆ ಕೆಲಸ

ಎಚ್‌ಸಿಎಲ್‌ ವಕ್ತಾರರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದು, ಅಧಿಕ ಒತ್ತಡ ಮತ್ತು ಮೂನ್‌ಲೈಟಿಂಗ್ (ಬೆಳಗ್ಗೆ ಒಂದು ಕಡೆ ರಾತ್ರಿ ಮತ್ತೊಂದೆಡೆ ಕೆಲಸ ಮಾಡುವುದು) ಭಾರತದ ಐಟಿ ವಲಯವು ಎದುರಿಸುತ್ತಿರುವ ಎರಡು ಸಮಸ್ಯೆಗಳಾಗಿವೆ. ಆದ್ದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂದು ಹೇಳಿದೆ. ಇತ್ತೀಚೆಗೆ ಇನ್ಫೋಸಿಸ್‌, ವಿಪ್ರೋ, ಎಚ್‌ಸಿಎಲ್‌ ಸೇರಿದಂತೆ ಹಲವು ಕಂಪೆನಿಗಳು ತಮ್ಮ ಕಂಪೆನಿಗೆ ಕೆಲಸ ಮಾಡುತ್ತಿರುವ ಅದೇ ಸಮಯದಲ್ಲಿ ಮತ್ತೊಂದು ಕಂಪೆನಿಗಳಿಗೆ ಕೆಲಸ ಮಾಡಿಕೊಡುತ್ತಿದ್ದ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿವೆ. ಕೆಲವು ಉದ್ಯೋಗಿಗಳು ಬೆಳಗ್ಗೆ ಒಂದು ಕಂಪೆನಿಯಲ್ಲಿ ಕೆಲಸ ಮಾಡಿ ರಾತ್ರಿ ಮತ್ತೊಂದು ಕಂಪೆನಿಗಳಿಗೆ ಕೆಲಸ ಮಾಡಿ ಹಣ ಗಳಿಸುತ್ತಿದ್ದು ಗೊತ್ತಾಗಿತ್ತು.

3 ಲಕ್ಷ ಮಂದಿಗೆ ಹೊಸ ಕೆಲಸ

3 ಲಕ್ಷ ಮಂದಿಗೆ ಹೊಸ ಕೆಲಸ

ಕೋವಿಡ್-19 ಸಾಂಕ್ರಾಮಿಕದ ಬಳಿಕ ಐಟಿ ವಲಯದಲ್ಲಿ ನೇಮಕಾತಿ ಪ್ರಕ್ರಿಯೆ ಮೊದಲ ಸ್ಥಿತಿಯಂತೆ ಆಗಿದ್ದು ಹೊಸ ನೇಮಕಾತಿಗಳು ಹೆಚ್ಚಾಗಿವೆ. ಕೋವಿಡ್‌ ಮುಗಿದ ಬಳಿಕ ಅರ್ಜಿ ಹಾಕಿದವರಲ್ಲಿ 10ರಲ್ಲಿ 8 ಮಂದಿ ನೇಮಕವಾಗಿದ್ದಾರೆ. ಸುಮಾರು 3 ಲಕ್ಷ ಮಂದಿ ಹೊಸ ಕೆಲಸ ಪಡೆದುಕೊಂಡಿದ್ದಾರೆ. ಐಟಿ, ಬ್ಯಾಂಕಿಂಗ್ ಮತ್ತು ಚಿಲ್ಲರೆ ವ್ಯಾಪಾರವು ಉದ್ಯೋಗವನ್ನು ಸೃಷ್ಟಿಸುತ್ತಿರುವ ವಲಯಗಳಾಗಿವೆ ಎಂದು ವರದಿಯಾಗಿದೆ. ನೇಮಕಾತಿಗಳು ಕೇವಲ ಮಹಾನಗರಗಳಲ್ಲಿ ಮಾತ್ರವಲ್ಲದೆ ಶ್ರೇಣಿ 2, 3 ಮತ್ತು 4 ಪಟ್ಟಣಗಳಲ್ಲಿಯೂ ಸಹ ರಾಷ್ಟ್ರವ್ಯಾಪಿ ಪ್ರತಿಭೆಗಳ ಹುಡುಕಾಟದಲ್ಲಿ ನಿರತವಾಗಿದ್ದವು.

English summary
New employees who have received job offers from several IT companies are venting their lament on social media as they have not received any correspondence or offer letter regarding the hiring process even after three to five months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X