ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಜೆಟೆಡ್ ಪ್ರೊಬೇಷನರ್ ಹುದ್ದೆ; ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 09 : 106 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ದಿನಾಂಕವನ್ನು ಕೆಪಿಎಸ್‌ಸಿ ವಿಸ್ತರಣೆ ಮಾಡಿದೆ. 16/3/2020ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ ಒಟ್ಟು 11 ಇಲಾಖೆಗಳಲ್ಲಿ ಹೈದರಾಬಾದ್-ಕರ್ನಾಟಕ ಮತ್ತು ಇತರ ಕರ್ನಾಟಕ ವೃಂದದ ಗ್ರೂಪ್-ಎ, ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು.

ಕೆಪಿಎಸ್‌ಸಿ ನೇಮಕಾತಿ; 925 ಹುದ್ದೆಗಳ ಭರ್ತಿಕೆಪಿಎಸ್‌ಸಿ ನೇಮಕಾತಿ; 925 ಹುದ್ದೆಗಳ ಭರ್ತಿ

ಜನವರಿ ತಿಂಗಳಿನಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ ಮಾರ್ಚ್ 6ರ ತನಕ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ, ಕರ್ನಾಟಕ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸುವ ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಅರಣ್ಯ ಇಲಾಖೆ ನೇಮಕಾತಿ; 339 ಹುದ್ದೆಗಳಿಗೆ ಅರ್ಜಿ ಹಾಕಿಅರಣ್ಯ ಇಲಾಖೆ ನೇಮಕಾತಿ; 339 ಹುದ್ದೆಗಳಿಗೆ ಅರ್ಜಿ ಹಾಕಿ

kpsc

ಸರ್ಕಾರದ ಆದೇಶದ ಪ್ರಕಾರ ಆಸಕ್ತ ಅಭ್ಯರ್ಥಿಗಳು 9/3/2020 ರಿಂದ 16/3/2020ರ ರಾತ್ರಿ 11.45ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. 17/3/2020ರ ತನಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಹಾಸನ; 34 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಹಾಕಿಹಾಸನ; 34 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಹಾಕಿ

ಕರ್ನಾಟಕ ಸರ್ಕಾರ 3/3/2020 ಮತ್ತು 5/3/2020ರಲ್ಲಿ ಹೊರಡಿಸಿರುವ ಆದೇಶದಂತೆ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಆಯೋಗವು 2017-18ನೇ ಸಾಲಿನ ಹುದ್ದೆಗಳಿಗೆ ಪರೀಕ್ಷೆ ಬರೆಯಲು ವಯೋಮಿತಿ ನಿರ್ಬಂಧವಿಲ್ಲದೆ ಒಂದು ವಿಶೇಷ ಅವಕಾಶವನ್ನು ನೀಡಿರುತ್ತದೆ.

ಈ ಹಿನ್ನಲೆಯಲ್ಲಿ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಸೀಮಿತಗೊಂಡಂತೆ ಮಾತ್ರ ಅರ್ಜಿಗಳನ್ನು ಸಲ್ಲಿಸಲು 7 ಹೆಚ್ಚುವರಿ ದಿನಗಳ ಅವಧಿಯನ್ನು ನೀಡಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು www.kpsc.kar.nic.inಗೆ ಭೇಟಿ ನೀಡಬಹುದು.

English summary
KPSC extended the date to submit application for the 106 gazetted probationers officer till 16/3/2020 and 17/3/2020 for pay application fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X