ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಣ್ಯ ಇಲಾಖೆ ನೇಮಕಾತಿ; 339 ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಮಾರ್ಚ್ 06 : ಕರ್ನಾಟಕದ ಅರಣ್ಯ ಇಲಾಖೆ ಅರಣ್ಯ ರಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 16/3/2020 ರಿಂದ 15/4/2020ರ ತನಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರಣ್ಯ ಇಲಾಖೆ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ ಅನ್ವಯ 327 ಮತ್ತು 12 ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.

ಹಾಸನ; 34 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಹಾಕಿಹಾಸನ; 34 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಹಾಕಿ

ವೃತ್ತವಾರು ಅಧಿಸೂಚಿಸಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವ ತತ್ಸಮಾನ ವಿದ್ಯಾರ್ಹತೆಯಲ್ಲಿ ಪಡೆದ ಮೆರಿಟ್ ಹಾಗೂ ಪ್ರವರ್ಗವಾರು ಮೀಸಲಾತಿ ಆಧಾರದ ಮೇಲೆ ವೃತ್ತವಾರು ಪ್ರತ್ಯೇಕವಾಗಿ ಪಟ್ಟಿಯನ್ನು ಸಿದ್ಧಪಡಿಸಿ ಪ್ರವೇಶ ಪತ್ರ ನೀಡಲಾಗುತ್ತದೆ.

ಕೆಪಿಎಸ್‌ಸಿ ನೇಮಕಾತಿ: 1279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ ಕೆಪಿಎಸ್‌ಸಿ ನೇಮಕಾತಿ: 1279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೈಹಿಕ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆಗೆ ಪರಿಗಣಿಸಿ, ಪರೀಕ್ಷೆ ನಡೆಯುವ ಸ್ಥಳ ಮತ್ತು ವೇಳೆಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷೆ ಪ್ರವೇಶ ಪತ್ರವನ್ನು ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬೇಕು. ಅಂಚೆ ಮೂಲಕ ಕಳುಹಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ವಿವಿಧ ಇಲಾಖೆಗಳಲ್ಲಿ ಹುದ್ದೆ ಕಡಿತ ಮಾಡಲಿದೆ ಸರ್ಕಾರ ವಿವಿಧ ಇಲಾಖೆಗಳಲ್ಲಿ ಹುದ್ದೆ ಕಡಿತ ಮಾಡಲಿದೆ ಸರ್ಕಾರ

ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆಗಳ ವೃತ್ತವಾರು ವಿವರ

ಹುದ್ದೆಗಳ ವೃತ್ತವಾರು ವಿವರ

ಬೆಳಗಾವಿ ವೃತ್ತ 21, ಬೆಂಗಳೂರು ವೃತ್ತ 45, ಬಳ್ಳಾರಿ ವೃತ್ತ 15, ಚಾಮರಾಜನಗರ ವೃತ್ತ 35, ಚಿಕ್ಕಮಗಳೂರು ವೃತ್ತ 10, ಧಾರವಾಡ ವೃತ್ತ 13, ಹಾಸನ ವೃತ್ತ 20, ಕೆನರಾ ವೃತ್ತ 82, ಮಂಗಳೂರು ವೃತ್ತ 15, ಮೈಸೂರು ವೃತ್ತ 19, ಶಿವಮೊಗ್ಗ ವೃತ್ತದಲ್ಲಿ 52 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಿದ್ಯಾರ್ಹತೆ ವಿವರ

ವಿದ್ಯಾರ್ಹತೆ ವಿವರ

ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವವರು 2ನೇ ಪಿಯುಸಿ/12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 2ನೇ ಪಿಯುಸಿ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ ವಿವರ

ವಯೋಮಿತಿ ವಿವರ

ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳಿಗೆ 32, ಪವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 30, ಸಾಮಾನ್ಯ ವರ್ಗದವರಿಗೆ 27 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.

ಪರೀಕ್ಷೆಯ ವಿವರಗಳು

ಪರೀಕ್ಷೆಯ ವಿವರಗಳು

ಅರಣ್ಯ ರಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ಅಧಿಸೂಚಿಸಿರುವ ವೃತ್ತವಾರು ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

English summary
Karnataka forest department invited applications for the post of forest guard. Candidates can apply for 339 post through online till 15/4/2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X