ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ನೇಮಕಾತಿಯ ನಕಲಿ ಪತ್ರ, ಅಭ್ಯರ್ಥಿಗಳಿಗೆ ಎಚ್ಚರಿಸಿದ ರೈಲ್ವೆ

|
Google Oneindia Kannada News

ನವದೆಹಲಿ, ಏಪ್ರಿಲ್ 24; ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ವೈರಲ್ ಆಗಿದೆ. ಈ ಪತ್ರ ನಕಲಿಯಾಗಿದ್ದು, ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.

ನೈಋತ್ಯ ರೈಲ್ವೆ ಈ ಕುರಿತು ಟ್ವೀಟ್ ಮೂಲಕ ಮನವಿ ಮಾಡಿದೆ. 30/3/2022ರಲ್ಲಿ ಹೊರಡಿಸಲಾದ ನೇಮಕಾತಿ ಆದೇಶದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿ ಕುರಿತು ನಕಲಿ ಪತ್ರ ವೈರಲ್ ಆಗಿದೆ.

ರೈಲ್ವೆ ಕ್ರಾಂತಿ ಆಗಿದ್ದೆಷ್ಟು? ಸಿಎಜಿ ವರದಿ ತೆರೆದಿಟ್ಟಿದೆ ವಾಸ್ತವ ರೈಲ್ವೆ ಕ್ರಾಂತಿ ಆಗಿದ್ದೆಷ್ಟು? ಸಿಎಜಿ ವರದಿ ತೆರೆದಿಟ್ಟಿದೆ ವಾಸ್ತವ

ರೈಲ್ವೆ ನೇಮಕಾತಿ ಕುರಿತು ನಕಲಿ ಪತ್ರವನ್ನು ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೇಮಕಾತಿಗಳ ಕುರಿತ ಮಾಹಿತಿಗಾಗಿ https://www.rrbbnc.gov.in/ ವೆಬ್ ಸೈಟ್ ನೋಡಬೇಕು ಎಂದು ಟ್ವೀಟ್‌ನಲ್ಲಿ ಮನವಿ ಮಾಡಲಾಗಿದೆ.

ಮನೆ ಬಾಗಿಲಿಗೆ ಪಾರ್ಸೆಲ್ ತಲುಪಿಸಲಿದೆ ಭಾರತೀಯ ರೈಲ್ವೆ ಮನೆ ಬಾಗಿಲಿಗೆ ಪಾರ್ಸೆಲ್ ತಲುಪಿಸಲಿದೆ ಭಾರತೀಯ ರೈಲ್ವೆ

Fake Recruitment Letter South Western Railway Alert

ನೈಋತ್ಯ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರವನ್ನು ಸಹ ಟ್ವೀಟ್ ಮಾಡಿದೆ. ರೈಲ್ವೆ ನೇಮಕಾತಿಯ ನಿರೀಕ್ಷೆಯಲ್ಲಿರುವವರು, ಈಗಾಗಲೇ ಪರೀಕ್ಷೆ ಬರೆದಿರುವವರು ನಕಲಿ ಪತ್ರದ ಬಗ್ಗೆ ಗಮನ ಹರಿಸದಂತೆ ಇಲಾಖೆ ಮನವಿ ಮಾಡಿದೆ.

ಈ ನಕಲಿ ಪತ್ರದಲ್ಲಿ ನೇಮಕಾತಿ ಆಗಿರುವ ಅಭ್ಯರ್ಥಿಗಳು/ ವರದಿ ಮಾಡಿಕೊಂಡಂತ ಅಭ್ಯರ್ಥಿಗಳು ಸಿಪಿಓ ಆದೇಶವನ್ನು ಪಾಲನೆ ಮಾಡದಿದ್ದರೆ ಅವರ ನೇಮಕಾತಿಯನ್ನು ರದ್ದು ಮಾಡಲಾಗುತ್ತದೆ ಎಂದು ಸಹ ಎಚ್ಚರಿಕೆ ನೀಡಲಾಗಿದೆ.

English summary
In a tweet south western railway said that a fake letter of recruitment is being circulated by miscreants. Candidates can refer RRB website for recruitment related information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X