ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ಕ್ಕೆ ಭಾರತದಲ್ಲಿ ಸುಮಾರು 9,000 ಹೊಸ ನೇಮಕಾತಿ ಮಾಡಲಿರುವ ಇವೈ

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಬ್ರಿಟನ್ ಮೂಲದ ಜಾಗತಿಕ ವೃತ್ತಿಪರ ಸೇವಾ ಸಂಸ್ಥೆ EY ಮುಂದಿನ ವರ್ಷ ಅಂದರೆ 2021ರಲ್ಲಿ ಭಾರತದಲ್ಲಿ ಸುಮಾರು 9,000 ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿ ಗುರುವಾರ ಪ್ರಕಟಿಸಿದೆ.

ಈ ಹೊಸ ನೇಮಕಾತಿಗಳು ಎಸ್‌ಟಿಇಎಂ ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ, ಸೈಬರ್‌ ಸೆಕ್ಯುರಿಟಿ, ವಿಶ್ಲೇಷಣೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತವೆ ಎಂದು ಅದು ಹೇಳಿದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿವೆ ಬ್ಯಾಂಕ್ ಆಫ್ ಬರೋಡಾದಲ್ಲಿ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿವೆ

''ಇಂದು ನಮ್ಮ ಗ್ರಾಹಕರು(ಕಂಪನಿಗಳು) ತಮ್ಮ ವ್ಯವಹಾರಗಳಲ್ಲಿ ತಂತ್ರಜ್ಞಾನ ನೇತೃತ್ವದ ರೂಪಾಂತರವನ್ನು ಕೈಗೊಳ್ಳುತ್ತಿದ್ದಾರೆ ಮತ್ತು ನಾವು ಈ ಹಾದಿಯಲ್ಲಿ ಅವರನ್ನು ಬೆಂಬಲಿಸುತ್ತಿದ್ದೇವೆ. ಡಿಜಿಟಲ್ ಅಳವಡಿಕೆಯ ವೇಗವು ತುಂಬಾ ವೇಗವಾಗಿ ಸಾಗುತ್ತಿದೆ. ನಾವು ಉದಯೋನ್ಮುಖ ತಂತ್ರಜ್ಞಾನದ ಪಾತ್ರಗಳಲ್ಲಿ ಸಾಮರ್ಥ್ಯಗಳನ್ನು ಬಲಪಡಿಸುತ್ತಿದ್ದೇವೆ ಮತ್ತು ಮುಂಬರುವ ವರ್ಷದಲ್ಲಿ ನೇಮಕಾತಿಗಳನ್ನು ಗಮನಾರ್ಹವಾಗಿ ತೀವ್ರಗೊಳಿಸುತ್ತಿದ್ದೇವೆ'' ಎಂದು ಇವೈ ಇಂಡಿಯಾದ ಕನ್ಸಲ್ಟಿಂಗ್ ಪ್ರಾಕ್ಟೀಸ್ ಲೀಡರ್ ರೋಹನ್ ಸಚ್‌ದೇವ್ ಹೇಳಿದ್ದಾರೆ.

50,000 ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಣೆ

50,000 ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಣೆ

ಇವೈ ಜಾಗತಿಕ ವಿತರಣಾ ಕೇಂದ್ರಗಳು ಸೇರಿದಂತೆ ಭಾರತದಲ್ಲಿ ಎಲ್ಲಾ ಸದಸ್ಯ ಸಂಸ್ಥೆಗಳಲ್ಲಿ 50,000 ಕ್ಕೂ ಹೆಚ್ಚು ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ, ಎಲ್ಲಾ ಇವೈ ಇಂಡಿಯಾ ಉದ್ಯೋಗಿಗಳಲ್ಲಿ ಶೇಕಡಾ 36ರಷ್ಟು ಎಸ್‌ಟಿಇಎಂ ಹಿನ್ನೆಲೆಯಿಂದ ಬಂದವರು.

2021ರಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶಗಳು ತೆರೆಯಲಿವೆ.

2021ರಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶಗಳು ತೆರೆಯಲಿವೆ.

2021ರ ಜೂನ್ ಹೊತ್ತಿಗೆ ಫ್ರೆಶರ್‌ಗಳ ನೇಮಕದಲ್ಲಿ ಕೋವಿಡ್ ಪೂರ್ವ ಬೇಡಿಕೆ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಟೀಮ್‌ಲೀಸ್ ಕಂಪನಿಯಾದ ಫ್ರೆಶರ್ಸ್‌ವರ್ಲ್ಡ್.ಕಾಮ್ ಹೇಳಿದೆ. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಹಾನಿಯು ಸದ್ಯಕ್ಕೆ ತುಂಬಲು ಸಾಧ್ಯವಾಗದಿದ್ರೂ, ಕೋವಿಡ್ ಪೂರ್ವ ಬೇಡಿಕೆ ಹಂತವನ್ನು ತಲುಪುವ ಸಾಧ್ಯತೆ ಇದೆ.

ಖಾಲಿ ಇರುವ 990 ಇಂಜಿನಿಯರ್ ಹೊರಗುತ್ತಿಗೆ ಹುದ್ದೆಗಳಿಗೆ ನೇಮಕಾತಿಖಾಲಿ ಇರುವ 990 ಇಂಜಿನಿಯರ್ ಹೊರಗುತ್ತಿಗೆ ಹುದ್ದೆಗಳಿಗೆ ನೇಮಕಾತಿ

ಶೇಕಡಾ 300ರಷ್ಟು ಫ್ರೆಶರ್‌ಗಳಿಗೆ ಬೇಡಿಕೆ

ಶೇಕಡಾ 300ರಷ್ಟು ಫ್ರೆಶರ್‌ಗಳಿಗೆ ಬೇಡಿಕೆ

ಇನ್ನು ಫ್ರೆಶರ್‌ಗಳ ನೇಮಕಾತಿ ದೃಷ್ಟಿಕೋನದಲ್ಲಿ ನೋಡುವುದಾದರೆ ಕಳೆದ ಮೂರು ತಿಂಗಳಿನಲ್ಲಿ ಶೇಕಡಾ 300ರಷ್ಟು ಏರಿಕೆ ಕಂಡುಬಂದಿದೆ. ಜೊತೆಗೆ ಹೊಸಬರಿಗೆ ಅವಕಾಶಗಳು ಸೆಪ್ಟೆಂಬರ್‌ನಿಂದ ಶೇಕಡಾ 55ರಷ್ಟು ಹೆಚ್ಚಾಗಿದೆ.

2021ರ ಮೊದಲ ತ್ರೈಮಾಸಿಕದಲ್ಲಿ ನೇಮಕಾತಿ ವೇಗ ಪಡೆದುಕೊಳ್ಳಲಿದೆ!

2021ರ ಮೊದಲ ತ್ರೈಮಾಸಿಕದಲ್ಲಿ ನೇಮಕಾತಿ ವೇಗ ಪಡೆದುಕೊಳ್ಳಲಿದೆ!

ಇಂಟರ್ವ್ಯೂಬಿಟ್‌ನ ಅಪ್‌ಸ್ಕಿಲ್ಲಿಂಗ್ ಪ್ಲಾಟ್‌ಫಾರ್ಮ್ ಸ್ಕೇಲರ್ ಪ್ರಕಾರ, 2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೇಮಕಾತಿ ಪ್ರಕ್ರಿಯೆಯು ವೇಗ ಪಡೆದುಕೊಂಡಿದೆ. ಸ್ಟಾರ್ಟ್‌ಅಪ್‌ಗಳ ಉದಯೋನ್ಮುಕ ಬೆಳವಣಿಗೆ ಮತ್ತು ಹೆಚ್ಚಿನ ಕೌಶಲ್ಯ ಆಧಾರಿತ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಹೇಳಿದೆ.

English summary
EY, a global professional services organisation, on Thursday, said it would induct 9,000 new hires in India in various technology roles in calendar 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X