ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕ ರಾಜ್ಯ ವಿಮಾ ನಿಗಮ ನೇಮಕಾತಿ; ಮಾ.7ರ ತನಕ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 07; ಕಾರ್ಮಿಕ ರಾಜ್ಯ ವಿಮಾ ನಿಗಮ ಕೇರಳ ಮತ್ತು ಕರ್ನಾಟಕದ ಇಎಸ್‌ಐಸಿ ನಿಗಮದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಹಾಕಲು 7/3/2022 ಕೊನೆಯ ದಿನವಾಗಿದೆ.

ಕಾರ್ಮಿಕರ ರಾಜ್ಯ ವಿಮಾ ನಿಗಮವು (1948 ರ ಇಎಸ್‌ಐ ಕಾಯ್ದೆ) ಸಂಸತ್ತಿನ ಕಾಯ್ದೆಯಡಿ, ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದಡಿ ಆಡಳಿತ ನಿರ್ವಹಣೆ ಮಾಡುತ್ತದೆ.

ಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿ

ಕಾರ್ಮಿಕರ ರಾಜ್ಯ ವಿಮಾ ನಿಗಮವು ಸ್ಪೆಷಲಿಸ್ಟ್‌ ಗ್ರೇಡ್-2 (ಹಿರಿಯ ವೇತನ ಶ್ರೇಣಿ) ಮತ್ತು ನೇರ ನೇಮಕಾತಿಗಳ ಆಧಾರದ ಮೇಲೆ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಮಂಡ್ಯದಲ್ಲಿ ಕೆಲಸ ಖಾಲಿ ಇದೆ; ಫೆಬ್ರವರಿ 17ರ ತನಕ ಅರ್ಜಿ ಹಾಕಿ ಮಂಡ್ಯದಲ್ಲಿ ಕೆಲಸ ಖಾಲಿ ಇದೆ; ಫೆಬ್ರವರಿ 17ರ ತನಕ ಅರ್ಜಿ ಹಾಕಿ

ESIC Recruitment 2022 Apply For Various Post Till March 7

ಹುದ್ದೆಗಳ ವಿವರ; ಕಾರ್ಡಿಯಾಲಜಿ ಓಬಿಸಿ 1, ಯುಆರ್ 1. ಎಂಡೋಕ್ರೈನಾಲಜಿ ಪ.ಜಾ 1, ಯುಆರ್ 1. ಗ್ಯಾಸ್ಟೋಎಂಟರಾಲಜಿ ಯುಆರ್ 1. ನೆಫ್ರೋಲಜಿ ಓಬಿಸಿ 1, ಯುಆರ್ 1. ನ್ಯುರೋಲಜಿ ಓಬಿಸಿ 1, ಯುಆರ್ 1. ಯುರಾಲಜಿ ಪ. ಪಂ 1. ಪಿಡಿಯಾಟ್ರಿಕ್ ಸರ್ಜರಿ ಓಬಿಸಿ 1, ಇಡಬ್ಲ್ಯುಎಸ್ 1. ಪ್ಲಾಸ್ಟಿಕ್ ಸರ್ಜರಿ/ ಬರ್ನ್ಸ್‌ ಯುಆರ್ 1 ಒಟ್ಟು ಹುದ್ದೆಗಳು 15.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ; 1492 ಹುದ್ದೆಗಳುಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ; 1492 ಹುದ್ದೆಗಳು

15 ಖಾಲಿ ಹುದ್ದೆಗಳಲ್ಲಿ ಒಂದು ಖಾಲಿ ಹುದ್ದೆಯನ್ನು ಬೆಂಚ್ ಮಾರ್ಕ್ ಅಂಗವೈಕಲ್ಯದವರಿಗೆ ಮೀಸಲಿಡಲಾಗಿದೆ.

ಸ್ಪೆಷಲಿಸ್ಟ್ ಗ್ರೇಡ್-2 (ಹಿರಿಯ ವೇತ ಶ್ರೇಣಿ) ವೇತನ ಮಟ್ಟ 12ರ 7ನೇ ಸಿಪಿಸಿ ಅನುಸಾರದಂತೆ 78,800 ವೇತನದೊಂದಿಗೆ ಕಾಲಕ್ಕೆ ತಕ್ಕಂತೆ ನಿಯಮಗಳನುಸಾರ ವೇತನದೊಂದಿದೆ. ಡಿಎ, ಎನ್‌ಪಿಎ, ಹೆಚ್‌ಆರ್‌ಎ ಮತ್ತು ಪ್ರಯಾಣ ಭತ್ಯೆ ಒಳಗೊಂಡಂತೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 7/3/2022ರಂತೆ 45 ವರ್ಷ ಮೀರರಬಾರದು. ಕಾರ್ಮಿಕರ ರಾಜ್ಯ ವಿಮಾ ನಿಗಮ ಮತ್ತು ಸರ್ಕಾರದ ಸೇವೆ ಸಲ್ಲಿಸುತ್ತಿರುವವರಿಗೆ 5 ವರ್ಷಗಳ ತನಕ ಸಡಿಲಿಕೆ ಉಂಟು. ಭಾರತ ಸರ್ಕಾರದ ಆದೇಶದಂತೆ ಪ.ಜಾ/ ಪ.ಪಂ/ ಓಬಿಸಿ/ ಪಿಡಬ್ಲ್ಯುಡಿ/ ಮಾಜಿ ಸೈನಿಕರಿಗೆ ಗರಿಷ್ಠ ವಯೋಮಿತಿ ಸಡಿಲಿಕೆ ಉಂಟು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಎಸ್‌ಐಸಿ ವೆಬ್‌ಸೈಟ್‌ www.esic.nic.in ನಲ್ಲಿ ಲಭ್ಯವಿರುವ ಜಾಹೀರಾತು ನೋಡಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ 7/3/2022 ಕೊನೆಯ ದಿನವಾಗಿದೆ.

ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ವಿಜೋರಾಂ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಲಡಾಖ್, ಲಹೌಲ್ ಮತ್ತು ಸ್ಪಿತಿ ಜಿಲ್ಲೆಗಳು ಹಾಗೂ ಹಿಮಾಚಲ ಪ್ರದೇಶದ ಪಂಗಿ ಉಪವಿಭಾಗ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪಗಳ ನಿವಾಸಿಗಳಿಗೆ ಕೊನೆಯ ದಿನಾಂಕ 14/3/2022.

ವಿವಿಧ ಹುದ್ದೆಗೆ ಅರ್ಜಿ ಆಹ್ವಾನ; ಕೊಡಗು ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರು ಮತ್ತು ಪೋಷಣ್ ಅಭಿಯಾನ ಯೋಜನೆಯಡಿ ತಾಲ್ಲೂಕು ಯೋಜನಾ ಸಹಾಯಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಬಿ.ಎ., ಬಿ.ಕಾಂ, ಸಮಾಜ ಕಾರ್ಯ, ರೂರಲ್ ಮ್ಯಾನೇಜ್‍ಮೆಂಟ್ ಇವುಗಳಲ್ಲಿ ಯಾವುದಾದರೊಂದು ಪದವಿ ಪಡೆದಿರಬೇಕು. ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರಬೇಕು. ಡಾಟಾ ಎಂಟ್ರಿ, ಎಂ.ಎಸ್.ಆಫೀಸ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಸಿಕ ವೇತನ 20 ಸಾವಿರ ರೂ.ಗಳು.

ತಾಲ್ಲೂಕು ಯೋಜನಾ ಸಹಾಯಕರ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಸ್ಥಳೀಯ ಸಂಸ್ಥೆಗಳೊಂದಿಗೆ ಕನಿಷ್ಠ 1 ವರ್ಷ ಕೆಲಸ ನಿರ್ವಹಿಸಿದ ಅನುಭವ, ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ, ಕ್ಷೇತ್ರ ಕಾರ್ಯ ನಿರ್ವಹಣೆ ಮತ್ತು ಸ್ಥಳೀಯ ಅಭ್ಯರ್ಥಿ ಕಡ್ಡಾಯ. ಮಾಸಿಕ ವೇತನ 15 ಸಾವಿರ ರೂ.ಗಳು.

ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ನವೀಕರಿಸಲಾಗುವುದು. ಅರ್ಹ ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಫೆಬ್ರವರಿ 15ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ಸಲ್ಲಿಸಲು ವಿಳಾಸ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ. ದೂರವಾಣಿ ಸಂಖ್ಯೆ 08272-298379.

Recommended Video

ಲತಾ ಮಂಗೇಶ್ಕರ್ ಪಾರ್ಥಿವ ಶರೀರದ ಮುಂದೆ ಶಾರೂಖ್ ನಡೆದುಕೊಂಡಿದ್ದು ಸರಿನಾ? | Oneindia Kannada

English summary
Employees state insurance corporation recruitment 2022. Apply for various post online till March 7
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X