ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಸ್‌ಐಸಿ ಕರ್ನಾಟಕ; ಸೆಪ್ಟೆಂಬರ್ 21ರಂದು ನೇರ ಸಂದರ್ಶನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17; ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ಇಎಸ್ಐಸಿ) 14 ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಆಸಕ್ತರು ಸೆಪ್ಟೆಂಬರ್ 21ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

Medical Referee ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಬೊಮ್ಮಸಂದ್ರ, ಬೆಳಗಾವಿ, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ದಾಂಡೇಲಿ, ಕಲಬುರಗಿ, ಹುಬ್ಬಳ್ಳಿ, ಕಾರವಾರ, ಕೆಜಿಎಫ್, ಮಂಗಳೂರು, ಮೈಸೂರು & ನಂಜನಗೂಡು, ಶಹಾಬಾದ್, ತೋರಣಗಲ್ಲು, ತುಮಕೂರಿನಲ್ಲಿ ಕೆಲಸ ಮಾಡಬೇಕಿದೆ.

ಬೀದರ್; ವಿವಿಧ ಹುದ್ದೆಗಳ ನೇಮಕಾತಿ, ಅ.9ರ ತನಕ ಅರ್ಜಿ ಹಾಕಿ ಬೀದರ್; ವಿವಿಧ ಹುದ್ದೆಗಳ ನೇಮಕಾತಿ, ಅ.9ರ ತನಕ ಅರ್ಜಿ ಹಾಕಿ

ಪಾರ್ಟ್‌ ಟೈಂ Medical Referee ಹುದ್ದೆ ಇದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 20,000 ರೂ. ವೇತನ ನಿಗದಿ ಮಾಡಲಾಗಿದೆ. ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿದೆ.

ಕರ್ನಾಟಕ; ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರ ಮಾಹಿತಿ ಕರ್ನಾಟಕ; ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರ ಮಾಹಿತಿ

ESIC Karnataka Walk In Interview For Medical Referee Post On September 21

ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ನಿಯಮದ ಅನ್ವಯ ಅಭ್ಯರ್ಥಿ ಮಾನ್ಯತೆ ಪಡೆದ ಬೋರ್ಡ್‌, ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿಯನ್ನು ಪಡೆದಿರಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 69 ವರ್ಷಗಳು 21/9/2021ಕ್ಕೆ ಅನ್ವಯವಾಗುವಂತೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ

ಸೆಪ್ಟೆಂಬರ್ 21ರಂದು ಬೆಳಗ್ಗೆ 10 ಗಂಟೆಗೆ ನೋಂದಣಿ ಆರಂಭವಾಗಲಿದೆ. 11 ಗಂಟೆಯಿಂದ ನೇರ ಸಂದರ್ಶನ ನಡೆಯಲಿದೆ. ನೇಮಕಾತಿ ಸಂಪೂರ್ಣ ತಾತ್ಕಾಲಿಕವಾಗಿದೆ. ಒಂದು ವರ್ಷದ ಬಳಿಕ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ esic.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.

ಲೆಕ್ಕಿಗ, ಜವಾನ ಹುದ್ದೆಗೆ ಅರ್ಜಿ ಹಾಕಿ; ಕಾರ್ಮಿಕ ಇಲಾಖೆಯ ಶಿವಮೊಗ್ಗ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಲೆಕ್ಕಿಗ ಹಾಗೂ ಜವಾನ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27ರ ತನಕ ಅರ್ಜಿಗಳನ್ನು ಸಲ್ಲಿಸಬಹುದು.

ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ., ಪದವೀಧರರಾಗಿದ್ದು, 5ವರ್ಷಗಳ ಸೇವಾ ಅನುಭವ ಹೊಂದಿದವರಾಗಿರಬೇಕು.

ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯುವ ಮತ್ತು ಮಾತನಾಡುವ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಅಪೇಕ್ಷಣೀಯ. ವಿಶೇಷವಾಗಿ ಟ್ಯಾಲಿ ಸಾಫ್ಟ್‌ವೇರ್ ಬಳಸುವ ಜ್ಞಾನ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 13,310 ರೂ.ಗಳ ಗೌರವಧನ ನೀಡಲಾಗುತ್ತದೆ.

ಕಚೇರಿ ಜವಾನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಸ್. ಎಸ್. ಎಲ್. ಸಿ. ಉತ್ತೀರ್ಣರಾಗಿದ್ದು, ಕಚೇರಿಯಲ್ಲಿ ಹಾಗೂ ಇತರೆ ಶುಚಿತ್ವ ಕಾಪಾಡುವ ಕೆಲಸ ನಿರ್ವಹಿಸಿದ ಅನುಭವ ಹೊಂದಿರಬೇಕು.

ಕನ್ನಡ ಓದಲು, ಬರೆಯುವ ಜ್ಞಾನ ಹೊಂದಿರಬೇಕು. ಹಾಗೂ ಕಚೇರಿಯ ಅಗತ್ಯಗಳಿಗಾಗಿ ಅಂಚೆ ಕಚೇರಿ, ಬ್ಯಾಂಕ್ ಇತರೆ ಇಲಾಖೆಗಳಿಗೆ ಹೋಗಿ ಬರಲು ತಯಾರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 10,648 ರೂ. ಗೌರವಧನ ನೀಡಲಾಗುತ್ತದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸೊಸೈಟಿ, ಶಿವಮೊಗ್ಗ ಇವರ ಹೆಸರಿಗೆ ಅರ್ಜಿ ಬರೆದು, ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟಂಬರ್ 27ರೊಳಗಾಗಿ ಸಲ್ಲಿಸಬೇಕು.

ಅರ್ಜಿಗಳನ್ನು ಕಾರ್ಮಿಕ ಅಧಿಕಾರಿ/ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿ, 2ನೇ ಮಹಡಿ, ವಾಣಿಜ್ಯ ಸಂಕೀರ್ಣ, ಸಿ.ಐ.ಟಿ.ಬಿ. (ಸೂಡಾ) ಕಾಂಪ್ಲೆಕ್ಸ್, ಪೊಲೀಸ್ ಚೌಕಿ, ವಿನೋಬ ನಗರ, ಶಿವಮೊಗ್ಗ ವಿಳಾಸಕ್ಕೆ ಸಲ್ಲಿಸಬೇಕು.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ; ಶಿಶು ಅಭಿವೃದ್ಧಿ ಯೋಜನೆ ಭದ್ರಾವತಿ ತಾಲ್ಲೂಕಿನ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ 12 ಜನ ಕಾರ್ಯಕರ್ತೆಯರ ಹಾಗೂ 31 ಜನ ಸಹಾಯಕಿಯರ ಸ್ಥಾನಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದೆ.

ಭದ್ರಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಯಲ್ಲಿ ಪಟ್ಟಿ ಪ್ರಕಟಿಸಲಾಗಿದ್ದು, ಈ ಆಯ್ಕೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ 21/9/2021ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಭದ್ರಾವತಿ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Recommended Video

ಚುಟುಕು ಕ್ರಿಕೆಟ್ ನಲ್ಲಿ ವಿರಾಟ್ ಮಾಡಿದ ದಾಖಲೆ ಸರಿಗಟ್ಟೋರು ಯಾರು? | Oneindia Kannada

English summary
Employees State Insurance Corporation Karnataka organized walk in interview on September 21, 2021 for the post of part time medical referee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X