ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

141 ಹುದ್ದೆ ಭರ್ತಿಗೆ ಅರ್ಜಿ ಕರೆದ ಇಂಜಿನಿಯರ್ಸ್‌ ಇಂಡಿಯಾ ಲಿ.

By Gururaj
|
Google Oneindia Kannada News

ಬೆಂಗಳೂರು, ಜೂನ್ 04 : ಇಐಎಲ್ 141 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜೂನ್ 20, 2018 ಕೊನೆಯ ದಿನವಾಗಿದೆ.

ಇಂಜಿನಿಯರ್ಸ್‌ ಇಂಡಿಯಾ ಲಿ.(ಇಐಎಲ್‌) ಇಂಜಿನಿಯರ್/ಆಫೀಸರ್, ಡೆಪ್ಯೂಟಿ ಮ್ಯಾನೇಜರ್, ಡಿಜಿಎಂ, ಜ್ಯೂನಿಯರ್ ಅಕೌಂಟೆಂಟ್ ಸೇರಿದಂತೆ 141 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಸಂಶೋಧಕ ಹುದ್ದೆ ಭರ್ತಿಗೆ ಅರ್ಜಿ ಕರೆದ ಭೂ ವಿಜ್ಞಾನ ಸಚಿವಾಲಯಸಂಶೋಧಕ ಹುದ್ದೆ ಭರ್ತಿಗೆ ಅರ್ಜಿ ಕರೆದ ಭೂ ವಿಜ್ಞಾನ ಸಚಿವಾಲಯ

ಇಂಜಿನಿಯರ್/ಆಫೀಸರ್ 59, ಡೆಪ್ಯೂಟಿ ಮ್ಯಾನೇಜರ್ 71, ಡಿಜಿಎಂ 1, ಜ್ಯೂನಿಯರ್ ಅಸಿಸ್ಟೆಂಟ್ 10 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

EIL recruitment 2018 : Apply for 141 various posts

ವಿದ್ಯಾರ್ಹತೆ : ಇಂಜಿನಿಯರ್/ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್/ಬಿಎಸ್‌ಸಿ/ಡಿಪ್ಲೊಮಾವನ್ನು ಶೇ 65ರಷ್ಟು ಅಂಕಗಳಲ್ಲಿ ಅಥವ ಪದವಿಯನ್ನು ಶೇ 55ರಷ್ಟು ಅಂಕಗಳೊಂದಿಗೆ ಪಡೆದಿರಬೇಕು.

ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್/ಬಿಎಸ್‌ಸಿಯನ್ನು ಶೇ 65ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ಡಿಜಿಎಂ ಹುದ್ದೆಗೆ ಅರ್ಜಿ ಸಲ್ಲಿಸುವವರು ವಾಣಿಜ್ಯ ವಿಷಯದಲ್ಲಿ ಪದವಿಯನ್ನು ಶೇ 50ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ವಾಣಿಜ್ಯ ವಿಷಯದಲ್ಲಿ ಪದವಿ, ಸಿಎಸ್‌ಅನ್ನು ಶೇ 55ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

ವಯೋಮಿತಿ :

* ಇಂಜಿನಿಯರ್/ಆಫೀಸರ್ : 28

* ಡೆಪ್ಯೂಟಿ ಮ್ಯಾನೇಜರ್ : 32

* ಡಿಜಿಎಂ : 30

* ಜ್ಯೂನಿಯರ್ ಅಸಿಸ್ಟೆಂಟ್ : 45 ವರ್ಷ ಮೇ 30 2018ಕ್ಕೆ ಅನ್ವಯವಾಗುವಂತೆ.

ವೇತನ ಶ್ರೇಣಿ
* ಇಂಜಿನಿಯರ್/ಆಫೀಸರ್ 60000-180000
* ಡೆಪ್ಯೂಟಿ ಮ್ಯಾನೇಜರ್ 70000-200000
* ಡಿಜಿಎಂ 120000-280000
* ಜ್ಯೂನಿಯರ್ ಅಸಿಸ್ಟೆಂಟ್ 13800-38500

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Engineers India Limited (EIL) issued notification for recruitment of 141 vacancies. The candidate who is looking for Engineer/Officer, Deputy Manager, DGM, Junior Accountant can apply online before 20th June 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X