ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರ ನೇಮಕಾತಿ; ಸಿಹಿಸುದ್ದಿ ಕೊಟ್ಟ ಸರ್ಕಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11; ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮುಟ್ಟ ಕಾಯ್ದುಕೊಳ್ಳಲು ಆಯಾ ಶಾಲೆಯಲ್ಲಿ ಮಂಜೂರಾಗಿ ಖಾಲಿ ಇರುವ ವಿಷಯ ಬೋಧನೆ ಮಾಡುವ ಶಿಕ್ಷಕರ ಹುದ್ದೆಗಳ ಎದುರಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

2021-22ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 3253 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ನೇಮಕಾತಿಗೊಳ್ಳುವ ಅತಿಥಿ ಶಿಕ್ಷಕರಿಗೆ ಗೌರವ ಧನ ಪಾವತಿ ಮಾಡಲು ಜಿಲ್ಲಾವಾರು ಮತ್ತು ತಾಲೂಕುವಾರು ಶಿಕ್ಷಕರ ಹಾಗೂ ಅನುದಾನದ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.

ನಬಾರ್ಡ್ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ, ತಕ್ಷಣ ಅರ್ಜಿ ಹಾಕಿನಬಾರ್ಡ್ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ, ತಕ್ಷಣ ಅರ್ಜಿ ಹಾಕಿ

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಡೆದ ಮಾಹಿತಿಯಂತೆ ಒಟ್ಟು 5078 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ 3253 ಅತಿಥಿ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಒಟ್ಟು ಬೇಡಿಕೆ ಶೇ 64 ರಷ್ಟು ಅತಿಥಿ ಶಿಕ್ಷಕರು ಮಂಜೂರಾಗಿರುತ್ತಾರೆ. ವಿವರಗಳು ಚಿತ್ರಗಳಲ್ಲಿವೆ....

ಗದಗದಲ್ಲಿ ಕೆಲಸ ಖಾಲಿ ಇದೆ; ಅಕ್ಟೋಬರ್ 17ರ ತನಕ ಅರ್ಜಿ ಹಾಕಿ ಗದಗದಲ್ಲಿ ಕೆಲಸ ಖಾಲಿ ಇದೆ; ಅಕ್ಟೋಬರ್ 17ರ ತನಕ ಅರ್ಜಿ ಹಾಕಿ

ತಾಲೂಕುವಾರು ನೇಮಕಾತಿಗೆ ಒಪ್ಪಿಗೆ

ತಾಲೂಕುವಾರು ನೇಮಕಾತಿಗೆ ಒಪ್ಪಿಗೆ

ತಾಲೂಕುಗಳಿಗೆ ಹಂಚಿಕೆ ಮಾಡಿರುವ ಮಿತಿಯೊಳಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಅತಿಥಿ ಶಿಕ್ಷಕರ ಅವಶ್ಯವಿರುವ ಹೆಚ್ಚುವರಿ 1825 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಅನುಮೋದನೆ ದೊರೆತ ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ಕೊಡಲಾಗುತ್ತದೆ. ಯಾವುದೇ ಶಾಲೆಯಲ್ಲಿ ಅಗತ್ಯತೆಗೆ ಹೊರತಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಪ್ರಕರಣಗಳು ಗಮನಿಸಿದಲ್ಲಿ ಉಪ ನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ.

ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಿಗೆ ವೃಂದಬಲ ನಿಗದಿಗೊಳಿಸಿರುವ ಸಿಬ್ಬಂದಿ ಸ್ಥರ ವಿನ್ಯಾಸದಂತೆ ಎಲ್ಲಿ ಅಗತ್ಯ ಹುದ್ದೆಗಳು ಖಾಲಿ ಇವೆಯೋ ಅಂತಹ ಖಾಲಿ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಪ್ರಸ್ತುತ ಜಿಲ್ಲೆಗಳಿಂದ ಪಡೆದಿರುವ ಖಾಲಿ ಹುದ್ದೆಗಳ ಮಾಹಿತಿಯನ್ನಾಧರಿಸಿ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ.

8 ಸಾವಿರ ರೂ. ಗೌರವ ಧನ

8 ಸಾವಿರ ರೂ. ಗೌರವ ಧನ

ಈ ಕೆಳಕಂಡ ಷರತ್ತಿಗೊಳಪಟ್ಟು ಅತಿಥಿ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ಕೊಡಲಾಗಿದೆ.

* ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರೇ ವಹಿಸುವುದು.

* ಪ್ರೌಢ ಶಾಲಾ ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ನೇಮಿಸುವುದು.

* ವರ್ಗಾವಣೆ/ ನೇಮಕಾತಿಗೆ ಅಧಿಸೂಚಿಸಿರುವ ಪ್ರೌಢ ಶಾಲಾ ಶಿಕ್ಷಕರು ನೇಮಕಗೊಂಡು/ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಶಿಕ್ಷಕರ ಹುದ್ದೆ ತಂತಾನೆ ರದ್ದಾಗುತ್ತದೆ.

* ಅಗತ್ಯಕ್ಕೆ ತಕ್ಕಂತೆ ಖಾಲಿ ಹುದ್ದೆಗಳಿಗೆ ಎದುರಾಗಿ ವಿಷಯ ಶಿಕ್ಷಕರನ್ನು (ದೈಹಿಕ ಶಿಕ್ಷಕ, ವೃತ್ತ ಶಿಕ್ಷಕರನ್ನು ಹೊರತುಪಡಿಸಿ) ಮಾತ್ರ ನೇಮಿಸುವುದು.

* ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಮಾಸಿಕ ಗೌರವ ಸಂಭಾವನೆ ರೂ. 8000 ಇರುತ್ತದೆ.

* ಈ ಆದೇಶ ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ನೇಮಕಕ್ಕೆ ಮಾತ್ರ ಅನ್ವಯ. 2021-22ನೇ ಸಾಲಿಗೆ 21/10/2021ರಿಂದ ಏಪ್ರಿಲ್ 22ರ ವರೆಗೆ ಅಥವ ಶೈಕ್ಷಣಿಕ ಸಾಲಿನ ಅಂತ್ಯದ ವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯ ವರೆಗೆ ಅತಿಥಿ ಶಿಕ್ಷಕರ ಸೇವೆಯನ್ನು ಮುಂದುವರೆಸುವುದು.

ನೇಮಕದ ಬಗ್ಗೆ ಮಾಹಿತಿ ನೀಡುವುದು

ನೇಮಕದ ಬಗ್ಗೆ ಮಾಹಿತಿ ನೀಡುವುದು

ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ತಾಲೂಕುವಾರು ಹುದ್ದೆಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪಿಡಿಎಫ್ ಪ್ರತಿಯನ್ನು ಸ್ಕ್ಯಾನ್ ಮಾಡಿ ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ ಇ-ಮೇಲ್ ವಿಳಾಸದ ಮೂಲಕ 14/10/2021ರೊಳಗೆ ಕಚೇರಿಗೆ ಕಡ್ಡಾಯವಾಗಿ ಕಳಿಸಬೇಕು. ವಿಳಂಬವಾಗಿ ಕಳುಹಿಸಿದರೆ ಕ್ರಮ ಕೈಗೊಳ್ಳಲು ಸೂಚಿಸಿದೆ.

ನಮೂನೆ; ಜಿಲ್ಲೆಗೆ ಹಂಚಿಕೆ ಮಾಡಿರುವ ಒಟ್ಟು ಅತಿಥಿ ಶಿಕ್ಷಕರ ಸಂಖ್ಯೆ, ಕ್ರಮ ಸಂಖ್ಯೆ, ತಾಲೂಕುನ ಹೆಸರು, ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಸಂಖ್ಯೆ, ನೇಮಕಗೊಂಡ ಅತಿಥಿ ಶಿಕ್ಷಕರ ಸಂಖ್ಯೆ. ನೇಮಕಗೊಂಡ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಸಲು ಅನುದಾನ ಬೇಡಿಕೆ ವಿವರ ಅಕ್ಟೋಬರ್ 21ರಿಂದ ಏಪ್ರಿಲ್ 22ರ ತನಕ (ಪ್ರತಿ ಶಿಕ್ಷಕರಿಗೆ ಒಂದು ತಿಂಗಳಿಗೆ ರೂ. 8000 ರೂ. ನಂತೆ)

ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 8/10/2021ರಂದು ಹೊರಡಿಸಿದ ಆದೇಶದ ಅನ್ವಯ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಿಗೆ ವೃಂದಬಲ ನಿಗದಿಗೊಳಿಸಿರುವ ಸಿಬ್ಬಂದಿ ಸ್ಥರ ವಿನ್ಯಾಸದಂತೆ ಎಲ್ಲಿ ಅಗತ್ಯ ಹುದ್ದೆಗಳು ಖಾಲಿ ಇವೆಯೋ ಅಂತಹ ಖಾಲಿ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಪ್ರಸ್ತುತ ಜಿಲ್ಲೆಗಳಿಂದ ಪಡೆದಿರುವ ಖಾಲಿ ಹುದ್ದೆಗಳ ಮಾಹಿತಿಯನ್ನಾಧರಿಸಿ ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ.

English summary
Department of finance approved to appoint 3253 guest teacher's in Karnataka high school. Guest teacher's will get 8000 Rs monthly salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X