ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ವಲಯಕ್ಕೆ ಸಿಹಿ ಸುದ್ದಿ; ಸೈಬರ್ ಸೆಕ್ಯೂರಿಟಿ ಉದ್ಯೋಗಕ್ಕೆ ಹೆಚ್ಚಿದ ಬೇಡಿಕೆ

|
Google Oneindia Kannada News

ಬೆಂಗಳೂರು, ಮೇ 13 : ಕೊರೊನಾ ಲಾಕ್ ಡೌನ್‌ನಿಂದಾಗಿ ಹಲವಾರು ಉದ್ಯಮಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಐಟಿ ವಯಲವೂ ಇದಕ್ಕೆ ಹೊರತಾಗಿಲ್ಲ. ಇದರಿಂದಾಗಿ ಈ ವರ್ಷ ನೇಮಕಾತಿ ಪ್ರಕ್ರಿಯೆ ವಿಳಂಬವಾಗಲಿದೆ ಎಂಬ ಸುದ್ದಿಗಳು ಹಬ್ಬಿವೆ.

ಐಟಿ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಸೈಬರ್ ಸೆಕ್ಯೂರಿಟಿ ವಿಭಾಗದಲ್ಲಿ ಈ ವರ್ಷ ನೇಮಕಾತಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಬ್ಯಾಂಕ್, ಫೈನಾನ್ಸ್ ಸೇರಿದಂತೆ ಆರ್ಥಿಕ ವಲಯದಲ್ಲಿ ಸೈಬರ್ ಭದ್ರತೆ ವಿಭಾಗಕ್ಕೆ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದೆ.

ಐಟಿ ವಲಯಕ್ಕೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ ಐಟಿ ವಲಯಕ್ಕೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಕಂಪನಿಗಳು ಮುಚ್ಚಿದ್ದು ಮನೆಯಿಂದಲೇ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ, ಸೈಬರ್ ಭದ್ರತೆ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದು, ಅಗತ್ಯ ಸಿಬ್ಬಂದಿಗಳನ್ನು ಈ ವಿಭಾಗಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಕೋವಿಡ್19: ಉಬರ್ ಸಂಸ್ಥೆಯಿಂದ 3,700 ಮಂದಿ ಉದ್ಯೋಗ ಕಡಿತ ಕೋವಿಡ್19: ಉಬರ್ ಸಂಸ್ಥೆಯಿಂದ 3,700 ಮಂದಿ ಉದ್ಯೋಗ ಕಡಿತ

Demand Gone Up To Cybersecurity Professionals

ವಿವಿಧ ಕಂಪನಿಗಳು ಝೂಮ್ ಅಪ್ಲಿಕೇಶನ್ ಮೂಲಕ ಸಭೆಗಳನ್ನು ಮಾಡುತ್ತಿವೆ. ಕಾಗ್ನಿಜೆಂಟ್ ಸೇರಿದಂತೆ ವಿವಿಧ ಕಂಪನಿಗಳು ಸೈಬರ್ ಭದ್ರತೆ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿವೆ. ಈ ವಿಭಾಗದಲ್ಲಿ ಶೇ 15ರಷ್ಟು ಬೇಡಿಕೆ ಹೆಚ್ಚಾಗಿದೆ.

ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು ವಿದೇಶದಲ್ಲಿ ಉದ್ಯೋಗ ಕಳೆದುಕೊಂಡ 56 ಸಾವಿರ ಕೇರಳಿಗರು

ಐಟಿ ಕಂಪನಿಗಳು ಮತ್ತು ಹಣಕಾಸು ಸೇವೆಗಳು ಮತ್ತು ವಿಮಾ (ಬಿಎಫ್‌ಎಸ್‌ಐ) ಕ್ಷೇತ್ರದಲ್ಲಿ ಈಗ ಉದ್ಯೋಗಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಬ್ಯಾಂಕ್‌ಗಳಿಗೆ ಸೇವೆ ನೀಡುವ ದೊಡ್ಡ-ದೊಡ್ಡ ಐಟಿ ಕಂಪನಿಗಳು ಸೈಬರ್ ಸೆಕ್ಯೂರಿಟಿ ನೇಮಕಾತಿಗೆ ಮುಂದಾಗಿವೆ.

"ಲಾಕ್ ಡೌನ್ ಮುಗಿಯುತ್ತಿದ್ದಂತೆ ಸೈಬರ್ ಭದ್ರತಾ ವಿಭಾಗದ ನೇಮಕಾತಿ ಆರಂಭವಾಗಲಿದೆ. ಮನೆಯಿಂದಲೇ ಕೆಲಸ ಮಾಡುವ ನಿಯಮ ಇರುವುದುದರಿಂದ ಈ ವಿಭಾಗಕ್ಕೆ ಸೇರುವವರ ಕೆಲಸದ ರೀತಿಯಲ್ಲಿಯೂ ಬದಲಾವಣೆಯಾಗಲಿದೆ" ಎಂದು ಕ್ಯೂಟೆಕ್ ಸಿಸ್ಟಮ್ಸ್ ಸಿಇಓ ಆನಂದ್ ರಾಮಕೃಷ್ಣನ್ ಹೇಳಿದ್ದಾರೆ.

ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಹ್ಯಾಕರ್‌ಗಳ ಭಯವಿದೆ. ಆದ್ದರಿಂದ ನಿರಂತರವಾಗಿ ಕಣ್ಗಾವಲು ಅಗತ್ಯವಾಗಿದೆ. ಆದ್ದರಿಂದ, ಮಾಹಿತಿ ತಂತ್ರಜ್ಞಾನದ ಭದ್ರತೆಯ ವಿಚಾರದಲ್ಲಿ ಕೆಲವೊಂದು ಬದಲಾವಣೆಗಳು ಆಗಿವೆ.

ಕೆಲವು ಕಂಪನಿಗಳು ಮನೆಯಿಂದಲೇ ಉದ್ಯೋಗಿಗಳು ಕೆಲಸ ಮಾಡುತ್ತಿರುವುದರಿಂದ ಆಂತರಿಕ ಭದ್ರತಾ ವಿಭಾಗವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿವೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮೊದಲು ಸೈಬರ್ ಸೆಕ್ಯೂರಿಟಿ ಹುದ್ದೆಗೆ ನೇಮಕಾತಿ ಆರಂಭವಾಗಲಿದೆ.

'ಇನ್ಫೋಸಿಸ್ ಸಹ ಸೈಬರ್ ಭದ್ರತೆ ವಿಚಾರಕ್ಕೆ ಹೆಚ್ಚು ಗಮನ ನೀಡಿದೆ. ಭದ್ರತೆ ವಿಚಾರಕ್ಕೆ ಹೆಚ್ಚು ಗಮನ ನೀಡಲಾಗುತ್ತದೆ. ಯಾವುದೇ ಲೋಪ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಿಇಓ ಸಲಿಲ್ ಪರೇಖ್ ಹೇಳಿದ್ದಾರೆ.

English summary
After lock down demand for cybersecurity professionals. IT vendors catering to the banking, BFSI sector are hiring more cybersecurity professionals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X