ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 03; ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಶೀಘ್ರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಪದವೀಧರ ಪ್ರಾಥಮಿಕ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲೆಗಳಿಗೆ ಪತ್ರ ಬರೆದಿದೆ.

ಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿ

ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕರು ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಒಟ್ಟು 5000 ಹುದ್ದೆಗಳನ್ನು ಹಾಗೂ ಉಳಿದ 28 ಜಿಲ್ಲೆಗಳಲ್ಲಿನ ಒಟ್ಟು 10000 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಂಗಳೂರು; ಅತಿಥಿ ಉಪನ್ಯಾಸಕರ ನೇಮಕಾತಿಗೆ ನೇರ ಸಂದರ್ಶನ ಮಂಗಳೂರು; ಅತಿಥಿ ಉಪನ್ಯಾಸಕರ ನೇಮಕಾತಿಗೆ ನೇರ ಸಂದರ್ಶನ

Class 6 To 8 Teacher Recruitment Soon At Karnataka

ಒಟ್ಟು 15,000 ಹುದ್ದೆಗಳ ಭರ್ತಿಗೆ ಸರ್ಕಾರದ ಆದೇಶವನ್ನು ಕಾಯ್ದಿರಿಸಿ ಜಿಲ್ಲಾ ಉಪ ನಿರ್ದೇಶಕರುಗಳ ಹಂತದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಅಗತ್ಯವಿರುವ ಪೂರ್ವ ಸಿದ್ಧತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ; 1492 ಹುದ್ದೆಗಳುಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ; 1492 ಹುದ್ದೆಗಳು

ಜಿಲ್ಲಾವಾರು ಖಾಲಿ ಹುದ್ದೆಗಳ ಹಂಚಿಕೆಯಂತೆ 6/7 ಮತ್ತು 6/8ನೇ ತರಗತಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಆರ್‌. ಟಿ. ಇ ನಿಯಮಗಳಂತೆ ಅವಶ್ಯವಿರುವ ವಿಷಯವಾರು ಹುದ್ದೆಯನ್ನು/ ಶಾಲಾವಾರು ತಾಲೂಕುವಾರು ಹುದ್ದೆಗಳನ್ನು ಗುರುತಿಸಿಕೊಂಡು/ ನಿಗದಿಪಡಿಸಿಕೊಂಡು ವಿಷಯವಾರು ವರ್ಗೀಕರಿಸಿಕೊಳ್ಳಬೇಕು.

* ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) (ಭಾಷೆಗಳು) (ಆಂಗ್ಲ)
* ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) (ಗಣಿತ-ವಿಜ್ಞಾನ)
* ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) (ಸಮಾಜ ಪಾಠಗಳು)
* ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) (ಜೀವ ವಿಜ್ಞಾನ)

ಸರ್ಕಾರದ ಆದೇಶ ಸಂಖ್ಯೆ 7/9/2020ರ ಪ್ರಕಾರ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) ವೃಂದ ಹುದ್ದೆಗಳಲ್ಲಿ (ವಿಜ್ಞಾನ-ಗಣಿತ) ವೃಂದಕ್ಕೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆಯ ಮಿತಿಯೊಳಗೆ ಅವಶ್ಯಕತೆಗನುಗುಣವಾಗಿ ಯಾವ ಸರ್ಕಾರಿ ಪ್ರಾಥಮಿಕ ಶಾಲೆಗೆ ಗಣಿತ-ವಿಜ್ಞಾನ ವೃಂದದ 2ನೇ ಹುದ್ದೆಯನ್ನು ಮಂಜೂರು ಮಾಡಲು ಅವಕಾಶವಿದೆಯೊ ಅಂತಹ ಎರಡನೇ ಹುದ್ದೆಯನ್ನು ಮರು ಪದನಾಮೀಕರಣಗೊಳಿಸಿ.

ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) ಜೀವ-ವಿಜ್ಞಾನ ಶಾಸ್ತ್ರ ಎಂಬ ನಾಮಾಂಕನ ಹುದ್ದೆಯನ್ನು ಪದನಾಮೀಕರಿಸಲಾಗಿದೆ. ಸದರಿ ಹುದ್ದೆಯನ್ನು ಪಿಟಿಆರ್ ಅನುಸಾರ ಪರಿಗಣಿಸಬಹುದು.

ಪ್ರಸ್ತುತ ನೇಮಕಾತಿಗೆ ಅಧಿಸೂಚಿಸಲು ಇರುವ ಹುದ್ದೆಗಳ ಮ್ಯಾಟ್ರಿಕ್ಸ್ ಘೋಷ್ವಾರ ವಿಷಯವಾರು/ ಹುದ್ದೆವಾರು ರೋಸ್ಟರ್ ಬಿಂದು ಸಹಿತ ಸೀಟ್ ಮ್ಯಾಟ್ರಿಕ್ಸ್ ತಾತ್ಕಾಲಿಕವಾಗಿ ಸಿದ್ಧಪಡಿಸಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

ಜಿಲ್ಲಾವಾರು ಹಂಚಿಕೆ; ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 7ನೇ ತರಗತಿ) ನೇಮಕಾತಿಗೆ ಜಿಲ್ಲಾವಾರು ಹಂಚಿಕೆ ಹೀಗಿದೆ.

ಬೆಂಗಳೂರು ಉತ್ತರ 146 + 13* (ಬಿಬಿಎಂಪಿ ವ್ಯಾಪ್ತಿಯ ಶೇಕಡಾ 8 ಸ್ಥಳೀಯ ವೃಂದದ ಹುದ್ದೆಗಳು. ಬೆಂಗಳೂರು ದಕ್ಷಿಣ 157 + 14* ಹುದ್ದೆಗಳು.

ಬೆಂಗಳೂರು ಗ್ರಾಮಾಂತರ 173, ಕೋಲಾರ 186, ಚಿಕ್ಕಬಳ್ಳಾಪುರ 250, ತುಮಕೂರು 308, ಮಧುಗಿರಿ 209, ಚಿತ್ರದುರ್ಗ 346, ದಾವಣಗೆರೆ 114, ಶಿವಮೊಗ್ಗ 506, ರಾಮನಗರ 196.

ಮೈಸೂರು 504, ಚಾಮರಾಜನಗರ 255, ಮಂಡ್ಯ 507, ಹಾಸನ 224, ಚಿಕ್ಕಮಗಳೂರು 139, ಕೊಡಗು 116, ದಕ್ಷಿಣ ಕನ್ನಡ 567, ಉಡುಪಿ 230, ಬೆಳಗಾವಿ 732 ಹುದ್ದೆಗಳು.

ಚಿಕ್ಕೋಡಿ 994, ಉತ್ತರ ಕನ್ನಡ 155, ಶಿರಸಿ 450, ಗದಗ 247, ಧಾರವಾಡ 289, ವಿಜಯಪುರ 860, ಬಾಗಲಕೋಟೆ 733, ಹಾವೇರಿ 380.

ಕಲ್ಯಾಣ ಕರ್ನಾಟಕ; ಕಲಬುರಗಿ 1022, ಯಾದಗಿರಿ 954, ಬಳ್ಳಾರಿ 1035, ರಾಯಚುರು 1078, ಕೊಪ್ಪಳ 575, ಬೀದರ್ 336.

English summary
Karnataka government approved for 15,000 teacher recruitment class 6 to 8. Notification may announced soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X