India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಜೂನ್ 24ರಂದು ನೇರ ನೇಮಕಾತಿಗೆ ಸಂದರ್ಶನ

|
Google Oneindia Kannada News

ಚಿತ್ರದುರ್ಗ, ಜೂನ್ 21: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಜೂನ್ 24ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಮುತ್ತೂಟ್ ಫೈನಾನ್ಸ್, ವಿಶಾಲ್ ಮಾರ್ಟ್, ಸ್ಪಂದನ ಸ್ಪೂರ್ತಿ ಫೈನಾನ್ಶಿಯಲ್ ಲಿಮಿಟೆಡ್, ಸಾಂಕೇತ್ ಆಟೋ ಮೊಬೈಲ್ಸ್ ಮುಂತಾದ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿವೆ.

ಯಾರೆಲ್ಲ ಭಾಗವಹಿಸಬಹುದು?:
ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಐಟಿಐ, ಡಿಪ್ಲೋಮಾ, ಬಿ.ಎ. ಬಿ.ಕಾಂ, ಬಿಎಸ್‍ಸಿ, ಬಿ.ಬಿ.ಎಂ ವಿದ್ಯಾರ್ಹತೆ ಪಡೆದವರು ಭಾಗವಹಿಸಬಹುದು.

ವಯೋಮಿತಿ: 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಅಗತ್ಯ ದಾಖಲಾತಿಗಳು: 6 ಪ್ರತಿ ಬಯೋಡಾಟಾ, ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಫೋಟೋಸ್, ಆಧಾರ್ ಕಾರ್ಡ್ ಜೊತೆಯಲ್ಲಿ ತಂದಿರತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ ಹಾಗೂ ದೂರವಾಣಿ ಸಂಖ್ಯೆ 9945587060, 7022459064, 8105619020ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

****

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ
ಹೊಸದುರ್ಗ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

http://anganwadirecruit.kar.nic.in ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಿದ್ದು, ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ: ಗಡಿಯಪ್ಪನಹಟ್ಟಿ (ಮಿನಿ), ಮಸಣಿಹಳ್ಳಿ ಗೊಲ್ಲರಹಟ್ಟಿ (ಮಿನಿ), ಕೈನಡು, ಕೆಂಕೆರೆ, ನಗರಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಸಹಾಯಕಿ ಹುದ್ದೆ: ಶ್ರೀರಂಗಾಪುರ, ಆಲಘಟ್ಟ -1, ನರಸೀಪುರ, ಗೂಳಿಹಟ್ಟಿ -1, ಆರ್.ಡಿ.ತಾಂಡ, ಚಿತ್ತಯ್ಯನಹಟ್ಟಿ, ಗೊಲ್ಲರಹಳ್ಳಿ, ಮೆಣಸಿನೋಡು, ಜೋಗಮ್ಮನಹಳ್ಳಿ, ಮೆಟ್ಟಿನಹೊಳೆ, ಮಾದಿಹಳ್ಳಿ, ಶೆಟ್ಟಿಹಳ್ಳಿ, ಗರಗ-1, ಕೆರೆಹೊಸಹಳ್ಳಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೊಸದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

ಹೊಳಲ್ಕೆರೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. http://anganwadirecruit.kar.nic.in ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಿದ್ದು, ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು ಮೀಸಲಾತಿ : ಬಿ.ದುರ್ಗ.ಬಿ- ಇತರೆ, ಟಿ.ಹೆಮ್ಮಿಗನೂರು.ಎ-ಇತರೆ, ಹಾಲೇನಹಳ್ಳಿ - ಪ.ಜಾತಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಸಹಾಯಕಿ ಹುದ್ದೆ ಮತ್ತು ಮೀಸಲಾತಿ: ಅಂದನೂರು.ಎ-ಇತರೆ, ಅರಸನಗಟ್ಟ - ಪ.ಜಾತಿ, ತಾಳಕಟ್ಟ .ಬಿ- ಪ.ಜಾತಿ, ಗುಂಜಿಗನೂರು.ಎ-ಇತರೆ, ದಾಸಯ್ಯನಹಟ್ಟಿ - ಪ.ಜಾತಿ, ರಾಮಗಿರಿ.ಬಿ - ಪ.ಜಾತಿ, ತಿರುಮಲಾಪುರ - ಇತರೆ, ತಾಳೀಕಟ್ಟೆ.ಎ - ಇತರೆ, ಸಿಂಗೇನಹಳ್ಳಿ- ಇತರೆ, ಗೊಲ್ಲರಹಳ್ಳಿ - ಇತರೆ, ಗೊಲ್ಲರಹಳ್ಳಿ ಎ.ಕೆ.ಹಟ್ಟಿ- ಪ.ಜಾತಿ, ಗೂಳಿಹೊಸಹಳ್ಳಿ.ಬಿ-ಇತರೆ ಹಾಲೇನಹಳ್ಳಿ - ಪ.ಜಾತಿ, ಪುರಸಭೆ ಹೊಳಲ್ಕೆರೆ ವ್ಯಾಪ್ತಿಯ ವಾರ್ಡ್ ನಂ.12&13 ಸಿದ್ದರಾಮಪ್ಪ ಬಡಾವಣೆ - ಇತರೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೊಳಲ್ಕೆರೆ ತಾಲ್ಲೂಕಿನ ಮುಖ್ಯರಸ್ತೆ, ಹರಿಕೃಪ ಬಿಲ್ಡಿಂಗ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

English summary
Chitradurga: Anganawadi job opening in Holelkere and Hosadurga taluk and Direct recruitment from District employment exchange office is organised on June 24
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X