ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ

|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 15 : ಚಾಮರಾಜನಗರ ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 20/10/2020 ಕೊನೆಯ ದಿನವಾಗಿದೆ.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆ ಭರ್ತಿ ಮಾಡಲಾಗುತ್ತಿದೆ.

 ಮೈಸೂರು ಮಹಾನಗರ ಪಾಲಿಕೆಯಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ಮೈಸೂರು ಮಹಾನಗರ ಪಾಲಿಕೆಯಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ನರೇಗಾ ಲೆಕ್ಕ ವ್ಯವಸ್ಥಾಪಕ ಹುದ್ದೆಗೆ ಎ. ಕಾಂ/ ಎಂಬಿಎ/ ಫೈನಾನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬೇಕು. ವಯೋಮಿತಿ ಕನಿಷ್ಟ 21, ಗರಿಷ್ಠ 35 ವರ್ಷ. ಕನಿಷ್ಟ 2 ವರ್ಷಗಳ ಅನುಭವ ಹೊಂದಿರಬೇಕು. ಮಾಸಿಕ ಸಂಭಾವನೆ 30,000 ಮತ್ತು ಪ್ರಯಾಣ ಭತ್ಯ ಇದೆ.

ಹಾಸನದಲ್ಲಿ ಕೆಲಸ ಖಾಲಿ ಇದೆ; ನ.10ರೊಳಗೆ ಅರ್ಜಿ ಹಾಕಿ ಹಾಸನದಲ್ಲಿ ಕೆಲಸ ಖಾಲಿ ಇದೆ; ನ.10ರೊಳಗೆ ಅರ್ಜಿ ಹಾಕಿ

Chamarajanagar Zilla Panchayat Recruitment Apply For Various Post

ತಾಲೂಕು ಎಂ. ಐ. ಎಸ್ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಇ/ ಬಿ. ಎಸ್‌. ಸಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿರಬೇಕು. ವಯೋಮಿತಿ ಕನಿಷ್ಠ 21, ಗರಿಷ್ಠ 35 ವರ್ಷ. 2 ವರ್ಷಗಳ ಅನುಭವ ಹೊಂದಿರಬೇಕು. ಮಾಸಿಕ ಸಂಭಾವನೆ 18,000 ರೂ.ಗಳು.

ಎಚ್‌ಎಎಲ್ ಅಪ್ರೆಂಟಿಶಿಪ್ ತರಬೇತಿ; ಆಸಕ್ತರು ಅರ್ಜಿ ಹಾಕಿ ಎಚ್‌ಎಎಲ್ ಅಪ್ರೆಂಟಿಶಿಪ್ ತರಬೇತಿ; ಆಸಕ್ತರು ಅರ್ಜಿ ಹಾಕಿ

ತಾಲೂಕು ಐ. ಇ. ಸಿ ಸಂಯೋಜಕರ ಹುದ್ದೆಗೆ ಮಾಸ್ ಕಮ್ಯುನಿಕೇಶನ್/ ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು. ವಯೋಮಿತಿ ಕನಿಷ್ಠ 21, ಗರಿಷ್ಠ 35 ವರ್ಷಗಳು. 2 ವರ್ಷಗಳ ಅನುಭವ ಹೊಂದಿರಬೇಕು. ಮಾಸಿಕ ಸಂಭಾವನೆ 18 ಸಾವಿರ ಮತ್ತು ಪ್ರಯಾಣ ಭತ್ಯ ಇದೆ.

ತಾಂತ್ರಿಕ ಸಂಯೋಜನಕ ಹುದ್ದೆಗೆ ಬಿಇ (ಸಿವಿಲ್) ವ್ಯಾಸಂಗ ಮಾಡಿರಬೇಕು. ವಯೋಮಿತಿ ಕನಿಷ್ಠ 21, ಗರಿಷ್ಠ 35 ವರ್ಷಗಳು. ಮಾಸಿಕ ಸಂಭಾವನೆ 27,000 ಮತ್ತು ಪ್ರಯಾಣ ಭತ್ಯೆ.

ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ವಿಳಾಸ

English summary
Chamarajanagar zilla panchayat invited applications for various post under MGNREGA scheme. Candidates can submit applications online till 20/10/2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X