ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Job Alert: 10 ಲಕ್ಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 14: ಕೇಂದ್ರ ಸರ್ಕಾರದಿಂದ ವಿವಿಧ ಇಲಾಖೆ ಹಾಗೂ ಸಚಿವಾಲಯಗಳ ಸಿಬ್ಬಂದಿ ನೇಮಕಾತಿ ಬಗ್ಗೆ ಪ್ರಧಾನಿ ಸಚಿವಾಲಯ ಪರಿಶೀಲನೆ ನಡೆಸಿದ್ದು, ಮುಂದಿನ ಒಂದೂವರೆ ವರ್ಷದೊಳಗೆ ಸುಮಾರು 10 ಲಕ್ಷಕ್ಕೂ ಅಧಿಕ ನೇಮಕಾತಿ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಯಾವ ಇಲಾಖೆಯಲ್ಲಿ ಎಷ್ಟು ಮಂದಿ ನೇಮಕವಾಗಬಹುದು ಎಂಬ ವಿವರ ಸದ್ಯಕ್ಕೆ ಲಭ್ಯವಿಲ್ಲ.

ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲಗಳ ಸ್ಥಿತಿಯನ್ನುಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ ಮತ್ತು ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಜನರನ್ನು "ಮಿಷನ್ ಮೋಡ್" ಮೂಲಕ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಟ್ವೀಟ್‌ನಲ್ಲಿ ತಿಳಿಸಿದೆ.

ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಪದೇ ಪದೇ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬಂದಿದೆ. ವಿವಿಧ ಸರ್ಕಾರಿ ವಲಯಗಳಲ್ಲಿ ಬಾಕಿ ಉಳಿದಿರುವ ಹುದ್ದೆಗಳನ್ನು ಮೊದಲಿಗೆ ಭರ್ತಿ ಮಾಡಲು ಸೂಚನೆ ನೀಡಲಾಗುತ್ತದೆ.

Central government to recruit 10 lakh people over next 1.5 years

ಮುಖ್ಯವಾಗಿ ರಕ್ಷಣಾ ಪಡೆಗಳಿಗೆ ನಾಲ್ಕು ವರ್ಷಗಳ ಅವಧಿಯ ಯೋಜನೆಯನ್ನು ಜಾರಿಗೆ ತರಲು ಭಾರತ ಸರ್ಕಾರವು ಪರಿಗಣಿಸುತ್ತಿದೆ ವಿವಿಧ ಮಾಧ್ಯಮಗಳಲ್ಲಿ ವರದಿ ಬಂದಿದೆ. ಅಗ್ನಿಪಥ್ ನೇಮಕಾತಿ ಯೋಜನೆಯಡಿ ನೇಮಕಗೊಂಡ ಅಭ್ಯರ್ಥಿಗಳು ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಬೇಕಾಗುತ್ತದೆ.

ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ

ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ

''ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಯುವಕರನ್ನು ನೇಮಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯು ಯುವಜನರಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರು ಸೇರಿದಂತೆ ಅನೇಕ ಬಿಜೆಪಿ ಬೆಂಬಲಿಗರು ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಎಂದಿದ್ದಾರೆ.

ಅಗ್ನಿಪಥ್ ಸೇನಾ ನೇಮಕಾತಿ

ಮೂರು ಸೇವಾ ಮುಖ್ಯಸ್ಥರು ಸುದ್ದಿಗೋಷ್ಠಿ ಅಗ್ನಿಪಥ್ ಸೇನಾ ನೇಮಕಾತಿ ಆರಂಭದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಸೇನೆಯಲ್ಲಿ ನೇಮಕಾತಿ ಅಗತ್ಯ, ಅಗ್ನಿಪಥ್ ನೇಮಕಾತಿ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಕಳೆದ ವಾರವೇ ಮಾಹಿತಿ ನೀಡಿ, ವಿವರಿಸಲಾಗಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ಜನರಲ್ ಮನೋಜ್ ಪಾಂಡೆ, ಏರ್ ಛೀಫ್ ಮಾರ್ಷಲ್ ವಿಆರ್ ಚೌಧರಿ, ಅಡ್ಮರಲ್ ಆರ್ ರವಿ ಕುಮಾರ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೆ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಅಗ್ನಿಪಥ್ ನೇಮಕಾತಿ ಯೋಜನೆ ಬಗ್ಗೆ ವಿವರಿಸಿದರು.
ಸೇನಾ ವ್ಯವಹಾರಗಳ ಇಲಾಖೆ

ಸೇನಾ ವ್ಯವಹಾರಗಳ ಇಲಾಖೆ

ಅಗ್ನಿಪಥ್ ನೇಮಕಾತಿ ಯೋಜನೆಯು ಕಡಿಮೆ ಅವಧಿಗೆ ಹೆಚ್ಚಿನ ಪಡೆಗಳನ್ನು ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸೇನಾ ವ್ಯವಹಾರಗಳ ಇಲಾಖೆ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ.

ಅಭ್ಯರ್ಥಿಗಳು ರಕ್ಷಣಾ ಪಡೆಗಳಿಗೆ ಸೇರುತ್ತಾರೆ ಮತ್ತು ವ್ಯವಸ್ಥೆಯ ಅಡಿಯಲ್ಲಿ ಗರಿಷ್ಠ ನಾಲ್ಕು ವರ್ಷಗಳವರೆಗೆ ಸೇವೆ ಸಲ್ಲಿಸುತ್ತಾರೆ.

ಉದ್ಯೋಗ ಸಂಸ್ಥೆ ಮೈಕೆಲ್ ಪೇಜ್‌ನ ಸಮೀಕ್ಷೆಯ ಪ್ರಕಾರ, 2022ರಲ್ಲಿ ಭಾರತದಲ್ಲಿ ರಾಜೀನಾಮೆ ಸರಣಿ ಮುಂದುವರಿಯುವ ಸಾಧ್ಯತೆಯಿದೆ, ಮುಂದಿನ ಆರು ತಿಂಗಳಲ್ಲಿ 86 ಪ್ರತಿಶತದಷ್ಟು ಉದ್ಯೋಗಿಗಳು ರಾಜೀನಾಮೆ ನೀಡುವ ನಿರೀಕ್ಷೆಯಿದೆ.
ಉದ್ಯೋಗ ಸಂಸ್ಥೆ ಸಮೀಕ್ಷೆಯ ಪ್ರಕಾರ

ಉದ್ಯೋಗ ಸಂಸ್ಥೆ ಸಮೀಕ್ಷೆಯ ಪ್ರಕಾರ

ಸಮೀಕ್ಷೆಯ ಪ್ರಕಾರ, ಸರಿಸುಮಾರು ಶೇ 61ರಷ್ಟು ಭಾರತೀಯ ಉದ್ಯೋಗಿಗಳು ಉತ್ತಮ ಕೆಲಸ-ಜೀವನ ಸಮತೋಲನ, ಸಾಮಾನ್ಯ ಯೋಗಕ್ಷೇಮ ಮತ್ತು ಸಂತೋಷದ ಮೇಲೆ ಕೇಂದ್ರೀಕರಿಸಲು ಮುಂದಾಗಿದ್ದಾರೆ. ಕಡಿಮೆ ವೇತನವನ್ನು ಸ್ವೀಕರಿಸಲು ಅಥವಾ ವೇತನ ಹೆಚ್ಚಳ ಮತ್ತು/ಅಥವಾ ಬಡ್ತಿಯನ್ನು ತ್ಯಜಿಸಲು ಸಿದ್ಧರಿದ್ದಾರೆ.

ಉದ್ಯೋಗಿಗಳ ರಾಜೀನಾಮೆಗೆ ಪ್ರಮುಖ ಕಾರಣ

ಉದ್ಯೋಗಿಗಳ ರಾಜೀನಾಮೆಗೆ ಪ್ರಮುಖ ಕಾರಣ

ಸಮೀಕ್ಷೆಯ ಪ್ರಕಾರ, ಮಾರುಕಟ್ಟೆಗಳು, ಕೈಗಾರಿಕೆಗಳು, ಹಿರಿತನದ ಮಟ್ಟಗಳು ಮತ್ತು ವಯಸ್ಸಿನ ಗುಂಪು ಎನ್ನದೇ ಈ ಪ್ರವೃತ್ತಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

"ಮುಂದಿನ ಕೆಲವು ತಿಂಗಳುಗಳಲ್ಲಿ ಗಮನಾರ್ಹವಾದ ಪ್ರತಿಭೆ ವಲಸೆಯ ಘಟನೆಯು ನಮ್ಮ ಮೇಲೆ ಇದೆ ಎಂದು ಸ್ಪಷ್ಟವಾದ ಬಹುಮತದಿಂದ ಹೇಳಬಹುದು.

ಉದ್ಯೋಗದ ಪ್ರಗತಿ, ವೃತ್ತಿಜೀವನದ ಪಾತ್ರ ಅಥವಾ ಉದ್ಯಮದಲ್ಲಿನ ಬದಲಾವಣೆ, ಸಂಬಳದ ಬಗ್ಗೆ ಅಸಮಾಧಾನ ಮತ್ತು ಕಂಪನಿಯ ಕಾರ್ಯತಂತ್ರ ಅಥವಾ ನಿರ್ದೇಶನದ ಬಗ್ಗೆ ಅಸಮಾಧಾನವು ಉದ್ಯೋಗಿಗಳ ರಾಜೀನಾಮೆಗೆ ಪ್ರಮುಖ ಕಾರಣಗಳಾಗಿವೆ.

English summary
The PMO has announced that the recruitment of 10 lakh people will be done by the Centre over the course of the next 1.5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X