ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ನ.23: ಕೆನರಾ ಬ್ಯಾಂಕಿನ 2020ನೇ ಸಾಲಿನ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕೋರಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 12, 2020 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕೆನರಾ ಬ್ಯಾಂಕ್ 220 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.
ಸಂಸ್ಥೆ ಹೆಸರು: ಕೆನರಾ ಬ್ಯಾಂಕ್
ಹುದ್ದೆ ಹೆಸರು: Specialist Officers
ಒಟ್ಟು ಹುದ್ದೆ: 220
ಉದ್ಯೋಗ ತಾಣ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 15, 2020.

ವಿದ್ಯಾರ್ಹತೆ ವಿವರ
ಕೆನರಾ ಬ್ಯಾಂಕ್ Specialist Officers ಹುದ್ದೆಗೆ ಅರ್ಜಿ ಸಲ್ಲಿಸುವವರು ಶೇ 60ರಷ್ಟು ಅಂಕಗಳೊಂದಿಗೆ ಬಿಇ, ಬಿ.ಟೆಕ್/ ಎಂ.ಇ/ ಎಂ.ಟೆಕ್, ಎಂಸಿಎ ಪದವಿ ಪೂರ್ಣಗೊಳಿಸಿರಬೇಕು. (ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 55 ಅಂಕ). ಅಥವ ಕೇಂದ್ರ ಅಥವ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಸಂಸ್ಥೆಯಿಂದ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ ವಿವರ
Specialist Officers ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 22 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1 ಅಕ್ಟೋಬರ್ 2020ಕ್ಕೆ ಅನ್ವಯವಾಗುವಂತೆ 22ರಿಂದ 35 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ ರಿಯಾಯಿತಿ:
ಒಬಿಸಿ ಅಭ್ಯರ್ಥಿ: 3 ವರ್ಷ
ಎಸ್ ಸಿ/ ಎಸ್ಟಿ: 5 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

ಅರ್ಜಿ ಶುಲ್ಕದ ವಿವರ
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿ ಮಾಡಬೇಕು. ನವೆಂಬರ್ 25, 2020 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅವಕಾಶವಿದೆ. ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕ(ಪ್ಲಸ್ ಜಿಎಸ್ಟಿ), ಎಸ್ಟಿ/ಎಸ್ಸಿ/ನಿವೃತ್ತಯೋಧರಿಗೆ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಪ್ರಮುಖ ದಿನಾಂಕಗಳು
ನೇಮಕಾತಿ ವಿವರ: ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸಮೂಹ ಚರ್ಚಾಕೂಟ, ವೈಯಕ್ತಿಕ ಸಂದರ್ಶನದಲ್ಲಿ ಪಾಸಾದ ಬಳಿಕ ನೇಮಕಾತಿಗೆ ಪರಿಗಣಿಸಲಾಗುವುದು.
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 25/11/2020.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/12/2020.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗಾಗಿ ಕ್ಲಿಕ್ ಮಾಡಿ