ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ; ಅಕ್ಟೋಬರ್ 26ರಂದು ಕ್ಯಾಂಪಸ್ ಸಂದರ್ಶನ

|
Google Oneindia Kannada News

ಕಲಬುರಗಿ, ಅಕ್ಟೋಬರ್ 24; ಬೆಂಗಳೂರಿನ ಎಂ.ಎಸ್. ಟೊಯೋಟಾ ಇಂಡಸ್ಟ್ರೀಸ್ ಇಂಜೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಕ್ಟೋಬರ್ 26 ರಂದು ಕಲಬುರಗಿಯಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಿದ್ದಾರೆ.

ಐ. ಟಿ. ಐ. ವೃತ್ತಿಯ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಂ. ಎಂ. ವಿ. ಆಂಡ್ ಡಿಸೇಲ್ ಮೆಕ್ಯಾನಿಕ್ ವೃತ್ತಿಗಳಲ್ಲಿ 2019, 2020 ಪಾಸಾದ ಹಾಗೂ 2021ರಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ ಬಿಎಂಆರ್‌ಸಿಎಲ್ ನೇಮಕಾತಿ; 37 ಹುದ್ದೆಗಳಿಗೆ ಅರ್ಜಿ ಹಾಕಿ

ಬೆಳಗ್ಗೆ 9 ಗಂಟೆಗೆ ಕಲಬುರಗಿ (ಪುರುಷ) ಕೈಗಾರಿಕಾ ತರಬೇತಿ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳುವವರಿಗೆ ವಯೋಮಿತಿ 18 ರಿಂದ 23 ವರ್ಷಗಳು.

ರಾಯಚೂರು; ಬೋಧಕರ ಹುದ್ದೆಗೆ ನವೆಂಬರ್ 4ರ ತನಕ ಅರ್ಜಿ ಹಾಕಿರಾಯಚೂರು; ಬೋಧಕರ ಹುದ್ದೆಗೆ ನವೆಂಬರ್ 4ರ ತನಕ ಅರ್ಜಿ ಹಾಕಿ

Campus Interview In Kalaburagi On October 26

ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕಾಗಿ ಹಾಜರಾಗಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೈಗಾರಿಕಾ ತರಬೇತಿ ತರಬೇತಿ ಸಂಸ್ಥೆಯ ಸೂಚನಾ ಫಲಕದಲ್ಲಿನ ವಿವರವನ್ನು ನೋಡಬಹುದಾಗಿದೆ ಎಂದು ಪ್ರಾಚಾರ್ಯರಾದ ನಾಗುಬಾಯಿ ಸೂರ್ಯವಂಶಿ ಹೇಳಿದ್ದಾರೆ.

ದಾವಣಗೆರೆ; ಕೆಲಸ ಖಾಲಿ ಇದೆ, ಅ.30ರೊಳಗೆ ಅರ್ಜಿ ಹಾಕಿ ದಾವಣಗೆರೆ; ಕೆಲಸ ಖಾಲಿ ಇದೆ, ಅ.30ರೊಳಗೆ ಅರ್ಜಿ ಹಾಕಿ

ವಿಶೇಷ ಕೋರ್ಸ್‌ಗೆ ಅರ್ಜಿ ಆಹ್ವಾನ; ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ ನಂತರ ಉದ್ಯೋಗ ಆಧಾರಿತ ವಿಶೇಷ ಶಿಕ್ಷಣದಲ್ಲಿ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಡಿ. ಇಡಿ. ವಿಶೇಷ ಶಿಕ್ಷಣ (ಐಡಿಡಿ), ಡಿ.ಇಡಿ.ವಿಶೇಷ ಶಿಕ್ಷಣ (ಹೆಚ್‍ಐ) ತರಬೇತಿ ಕೋರ್ಸ್ ಆಗಿದ್ದು, 2 ವರ್ಷ (ಪೂರ್ಣ ಸಮಯ) ತರಬೇತಿಯ ಅವಧಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು ಅಥವಾ ಯಾವುದೇ ಕೇಂದ್ರ ಮತ್ತು ರಾಜ್ಯ ಪರೀಕ್ಷಾ ಮಂಡಳಿಯಿಂದ ಮಾನ್ಯತೆ ಪಡೆದ ಸ್ಟ್ರೀಮ್‍ನಲ್ಲಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು.

ಆಸಕ್ತರು ಅರ್ಜಿಯನ್ನು https://rciapproval.org/rci admission/ ವೆಬ್‍ಸೈಟ್‍ ಮೂಲಕ ಸಲ್ಲಿಸಬಹುದು. ಆನ್‍ಲೈನ್ ನೊಂದಾಣಿಗಾಗಿ ನ.11 ಕೊನೆಯ ದಿನಾಂಕವಾಗಿರುತ್ತದೆ. ಪ್ರವೇಶ ಪ್ರಕ್ರಿಯೆ ನ.16 ರಿಂದ ಆರಂಭವಾಗಲಿದೆ. ಸಂಯುಕ್ತ ಪ್ರಾದೇಶಿಕ ಕೇಂದ್ರ, ದಾವಣಗೆರೆಯ ಕೇಂದ್ರದ ಕೋಡ್ ಕೆಕೆ044 ಆಗಿದೆ.

ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 500 ಆಗಿದೆ. ಒಬಿಸಿ (ಸೀಲ್), ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇಡಬ್ಲ್ಯೂಎಸ್ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ರೂ 350 ನಿಗದಿಪಡಿಸಲಾಗಿದೆ. ವಿವಿಧ ಪೇ ಆ್ಯಪ್ ಗಳ ಯುಪಿಐ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08192-233464/ 465, 8746043062, 8610660894 ಮತ್ತು 9490020080 ಅಥವಾ ಇ-ಮೇಲ್- [email protected], ವೆಬ್‍ಸೈಟ್ https://crcdvg.nic.in ಗೆ ಸಂಪರ್ಕಿಸಬಹುದು.

ತರಬೇತಿ ಕಾರ್ಯಕ್ರಮ; ಶಿವಮೊಗ್ಗದ ಸಿಡಾಕ್ ಕೇಂದ್ರದ ವತಿಯಿಂದ ಸ್ವಂತ ಉದ್ಯಮ ಸ್ಥಾಪಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ ಹತ್ತು ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾಯಕ್ರಮವನ್ನು ನವೆಂಬರ್ ತಿಂಗಳ 2ನೇ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಮಜಲುಗಳು, ಸರ್ಕಾರದ ನಿಯಮಗಳು ಮತ್ತು ನಿಯಂತ್ರಣಗಳು, ಸ್ಥಳೀಯ ಸಂಪನ್ಮೂಲಗಳ ಬಳಕೆ, ವ್ಯವಹಾರ ನೋಂದಣಿ ಮಾಡುವ ವಿಧಾನ, ತೆರಿಗೆ ನಿಯಮಗಳು, ಬ್ಯಾಂಕ್ ಸಾಲ ಯೋಜನೆಗಳು, ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಸರ್ಕಾರದ ಯೋಜನೆಗಳು, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ ಹಾಗೂ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.

ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅವಿನಾಶ್, ತರಬೇತುದಾರರು, ಸೀಡಾಕ್, ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9164811887.

English summary
Campus interview in Kalaburagi on October 26, 2021. Candidates 18 to 23 years can attend the campus interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X