ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ, ವಿವಿಧ ಜಿಲ್ಲೆಗಳ ಉದ್ಯೋಗ ಮಾಹಿತಿ

|
Google Oneindia Kannada News

ಕೊಪ್ಪಳ, ಏಪ್ರಿಲ್ 13; ಗ್ರಾಮ ವಿಕಾಸ, ಬೆಂಗಳೂರು ವತಿಯಿಂದ ಐಟಿಐ ಪಾಸಾದ ಅಭ್ಯರ್ಥಿಗಳಿಗಾಗಿ ಏಪ್ರಿಲ್ 16 ರಂದು ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಲಾಗಿದೆ.

ಬೆಳಗ್ಗೆ 10 ಗಂಟೆಗೆ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಆರಂಭವಾಗಲಿದೆ. 18 ರಿಂದ 25 ವರ್ಷದೊಳಗಿನ ಐಟಿಐನ ಯಾವುದೇ ವೃತ್ತಿಯಲ್ಲಿ ಉತ್ತೀರ್ಣರಾದ/ ಪರೀಕ್ಷಾ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಂತಿಮ ವರ್ಷದ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಗ್ರಾಮ ಲೆಕ್ಕಿಗರ ನೇಮಕಾತಿ; 102 ಹುದ್ದೆಗಳಿಗೆ ಅರ್ಜಿ ಹಾಕಿ ಗ್ರಾಮ ಲೆಕ್ಕಿಗರ ನೇಮಕಾತಿ; 102 ಹುದ್ದೆಗಳಿಗೆ ಅರ್ಜಿ ಹಾಕಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ಸ್ಟೈಫಂಡ್ ಸೌಲಭ್ಯಗಳಿರುತ್ತವೆ. ಅಭ್ಯರ್ಥಿಗಳು 10ನೇ ತರಗತಿ ಅಂಕಪಟ್ಟಿ, ಐಟಿಐ ಪಾಸಾದ ಅಂಕಪಟ್ಟಿ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಕಾರ್ಡ್, ಡಿಎಲ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ 6 ಫೋಟೋ ಮತ್ತು ವ್ಯಾಕ್ಷಿನೇಶನ್ ಪ್ರಮಾಣಪತ್ರ ತರುವುದು ಕಡ್ಡಾಯ.

KSEEB Recruitment 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೇಮಕಾತಿ KSEEB Recruitment 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೇಮಕಾತಿ

Campus Interview For Apprenticeship At Koppal

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆ ಅಥವಾ ದೂರವಾಣಿ ಸಂಖ್ಯೆ 08534-299944ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನೈಋತ್ಯ ರೈಲ್ವೆ ನೇಮಕಾತಿ; 147 ಹುದ್ದೆ, ಹುಬ್ಬಳ್ಳಿಯಲ್ಲಿ ಕೆಲಸ ನೈಋತ್ಯ ರೈಲ್ವೆ ನೇಮಕಾತಿ; 147 ಹುದ್ದೆ, ಹುಬ್ಬಳ್ಳಿಯಲ್ಲಿ ಕೆಲಸ

ತರಬೇತಿಗೆ ಅರ್ಜಿ ಹಾಕಿ; ಸಮಾಜ ಕಲ್ಯಾಣ ಇಲಾಖೆಯು 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ವಿಶೇಷ ಕೇಂದ್ರೀಯ ಸಹಾಯಧನ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕ, ಯುವತಿಯರಿಗೆ ಪ್ಲಾಸ್ಟಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ 3 ತಿಂಗಳ ಮೆಷಿನ್ ಆಪರೇಟರ್ ಅಸಿಸ್ಟೆಂಟ್-ಇಂಜೆಕ್ಷನ್ ಮೋಲ್ಡಿಂಗ್ ಮತ್ತು ಮೆಷಿನ್ ಆಪರೇಟರ್ ಅಸಿಸ್ಟೆಂಟ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ವೃತ್ತಿಪರ ತರಬೇತಿ ನೀಡಲಿದೆ.

ತರಬೇತಿಯನ್ನು ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಉಚಿತ ಊಟ, ವಸತಿ ಮತ್ತು 2000 ರೂ. ಗಳ ಶಿಷ್ಯವೇತನದೊಂದಿಗೆ ನೀಡಲಾಗುತ್ತದೆ. ಪರಿಶಿಷ್ಟಜಾತಿಗೆ ಸೇರಿದ 8ನೇ ತರಗತಿ/ ಎಸ್‍ಎಸ್‍ಎಲ್‍ಸಿ/ ಪಿಯುಸಿ/ಡಿಗ್ರಿ/ ಐಟಿಐ ಉತ್ತೀರ್ಣರಾಗಿರುವವರು ನೇರ ಸಂದರ್ಶನಕ್ಕೆ ಆಗಮಿಸಬಹುದು.

ವಯೋಮಿತಿ 18 ರಿಂದ 35 ವರ್ಷಗಳು. ಯುವಕ/ ಯುವತಿಯರು ತಮ್ಮ ವಿದ್ಯಾರ್ಹತೆ, ಜನನ ಪ್ರಮಾಣ ಪತ್ರ, ಗುರುತಿನ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಈ ಎಲ್ಲಾ ಮೂಲ ದಾಖಲೆಗಳೊಂದಿಗೆ ಒಂದು ಸೆಟ್ ಜೇರಾಕ್ಸ್ ಪ್ರತಿಗಳ ಜೊತೆ 6 ಪಾಸ್‍ಪೋರ್ಟ್ ಪೋಟೋಗಳೊಂದಿಗೆ ಆಯ್ಕೆ ಸಂದರ್ಶನಕ್ಕೆ ಭಾಗವಹಿಸುವಂತೆ ಕೋರಲಾಗಿದೆ.

ಸಂದರ್ಶನ ಹಾಗೂ ತರಬೇತಿಯು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಭಾರತ ಸರ್ಕಾರ (CIPET-CSTS) ನಂ.47/ಎ, ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾ, ಮೈಸೂರು-16 ಇಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ [email protected]. ದೂರವಾಣಿ ಸಂಖ್ಯೆ 9380756024/ 9066648466/ 9845873498/ 0821-2510619.

ವಿಕಲಚೇತನರಿಗೆ ಉಚಿತ ತರಬೇತಿ; ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸ್ವ-ಉದ್ಯೋಗವನ್ನು ಆರಂಭಿಸಿ ಯಶಸ್ವಿ ಉದ್ಯಮಶೀಲ ವ್ಯಕ್ತಿಗಳಾಗುವ ನಿರೀಕ್ಷೆಯಲ್ಲಿರುವ ವಿಕಲಚೇತನರಿಗೆ ತರಬೇತಿಯನ್ನು ನಡೆಸಲಾಗುತ್ತಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ಇಲ್ಲಿ ಗ್ರಾಮೀಣ ಮಟ್ಟದ ಬಡತನ ರೇಖೆಗಿಂತ ಕೆಳಗಿರುವ 18 ರಿಂದ 45 ವರ್ಷ ವಯೋಮಾನದ ನಿರುದ್ಯೋಗಿ ಯುವಕ/ ಯುವತಿಯರು ತರಬೇತಿ ಪಡೆಯಲು ಅರ್ಹರು.

ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಊಟ ಮತ್ತು ವಸತಿ ಸಹಿತವಾಗಿರುತ್ತದೆ. ಏಪ್ರಿಲ 5 ರಂದು ತರಬೇತಿ ಪ್ರಾರಂಭವಾಗಿದ್ದು, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಣಿ ಮಾಡಿಸಬಹುದಾಗಿದೆ. ತರಬೇತಿಯ ಕಾರ್ಯಕ್ರಮ-ಡಿ.ಟಿ.ಪಿ (ಡೆಸ್ಕ್‌ಟಾಪ್ ಪಬ್ಲಿಷಿಂಗ್). 45 ದಿನಗಳು ತರಬೇತಿ ನಡೆಸಲಾಗುತ್ತದೆ.

Recommended Video

ಗಾಬರಿಯಲ್ಲಿ ಮೊಬೈಲ್ ಹಿಡ್ಕೊಂಡು ಓಡಾಡುತ್ತಿರುವ ಈಶ್ವರಪ್ಪ! | Oneindia Kannada

ಆಸಕ್ತ ವಿಕಲಚೇತನರು ತರಬೇತಿಯಲ್ಲಿ ಭಾಗವಹಿಸಿ ಸ್ವ-ಉದ್ಯೋಗ ತರಬೇತಿಯ ಸದುಪಯೋಗ ಪಡೆಯಬಹುದು. ನೋಂದಣಿಗಾಗಿ 7975139332, 7019980484, 9964111314, 9538395817 ಸಂಖ್ಯೆಯನ್ನು ಸಂಪರ್ಕಿಸಬದು.

English summary
Campus interview for apprenticeship at Koppal on April 16th. Job news of Koppal and other district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X