• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಪ್ಪಳ : ಟೊಯೋಟಾದಿಂದ ಜುಲೈ 5ಕ್ಕೆ ಕ್ಯಾಂಪಸ್ ಸಂದರ್ಶನ

|

ಕೊಪ್ಪಳ, ಜುಲೈ 01 : ಕಿರ್ಲೋಸ್ಕರ್‌ ಟೊಯೋಟಾ ಟೆಕ್ಸ್‌‌ಟೈಲ್ ಮಷಿನರಿ ಪ್ರೈವೇಟ್‌ ಲಿಮಿಟೆಡ್ ಜುಲೈ 5ರಂದು ಕೊಪ್ಪಳದಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಿದೆ.‌‌‌‌‌‌‌‌‌‌‌‌‌ ಐಟಿಐ ಪಾಸಾದ ಮತ್ತು ಅಂತಿಮ ಸೆಮಿಸ್ಟರ್‌ನಲ್ಲಿ ತರಬೇತಿ ಪಡೆಯುತ್ತಿರುವವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗುದ್ನೆಪ್ಪನ ಮಠ, ಕುಕನೂರು, ಯಲಬುರ್ಗಾ ತಾಲೂಕು ಇಲ್ಲಿ ಜುಲೈ 5ರಂದು ಬೆಳಗ್ಗೆ 10 ಗಂಟೆಗೆ ಕ್ಯಾಂಪಸ್ ಸಂದರ್ಶನ ನಡೆಯಲಿದೆ. 18 ರಿಂದ 21 ವರ್ಷದೊಳಗಿನ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಬಹುದು. [ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ ವಿವರ]

ಐಟಿಐ ಫಿಟ್ಟರ್, ಟರ್ನರ್, ವೆಲ್ಡರ್, ಮತ್ತು ಮಷಿನಿಸ್ಡ್ ವೃತ್ತಿಯಲ್ಲಿ ಉತ್ತೀರ್ಣರಾದ ಅಥವಾ ಈ ವೃತ್ತಿಗಳಲ್ಲಿ ಅಂತಿಮ ಸೆಮಿಸ್ಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. [KPSC ನೇಮಕಾತಿ ವಿವರಗಳು]

ಸಂದರ್ಶನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ ವಿವರದ ಬಯೋಡಾಟಾ, ಪಾಸ್‍ಪೋರ್ಟ್ ಅಳತೆಯ ಕಲರ್ ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕು. [ಬಿಎಂಆರ್ ಸಿಎಲ್ ನೇಮಕಾತಿ ವಿವರ]

ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9480715898 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Kirloskar Toyota Textile Machinery pvt. Ltd(KTTM) organized campus interview for ITI students on July 5, 2016 at Kuknoor ITI college, Yelburga, Koppal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X