ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಾವಕಾಶ ಹೆಚ್ಚಳ, ಅಪ್ರೆಂಟಿಸ್ ಶಿಪ್ ಕಾಯ್ದೆ ಪರಿಷ್ಕರಣೆ

|
Google Oneindia Kannada News

ನವದೆಹಲಿ, ಫೆಬ್ರವರಿ 2: ಯುವಜನರಿಗೆ ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಅಪ್ರೆಂಟಿಸ್‌ಶಿಪ್ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಕೇಂದ್ರ ಬಜೆಟ್ 2021-22 ಮಂಡನೆಯಲ್ಲಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಪ್ರಸ್ತಾಪಿಸಿದರು.

ಶಿಕ್ಷಣದ ನಂತರದ ಅಪ್ರೆಂಟಿಸ್‌ಶಿಪ್, ಇಂಜಿನಿಯರಿಂಗ್‌ನಲ್ಲಿ ಪದವೀಧರರು ಮತ್ತು ಡಿಪ್ಲೊಮಾ ಪಡೆದಿರುವವರಿಗೆ ತರಬೇತಿ ನೀಡಲು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (ನ್ಯಾಟ್ಸ್) ಯೋಜನೆಯನ್ನು ರೂ .3,000 ಕೋಟಿಗೂ ಅಧಿಕ ಮೊತ್ತದೊಂದಿಗೆ ಪರಿಷ್ಕರಿಸಲಾಗುವುದು ಎಂದು ಹಣಕಾಸು ಸಚಿವೆ ಹೇಳಿದರು.

ಕುಶಲಕರ್ಮಿಗಳ ಸದ್ಬಳಕೆ ಭಾರತ ಮತ್ತು ಜಪಾನ್ ನಡುವೆ ಒಪ್ಪಂದಕುಶಲಕರ್ಮಿಗಳ ಸದ್ಬಳಕೆ ಭಾರತ ಮತ್ತು ಜಪಾನ್ ನಡುವೆ ಒಪ್ಪಂದ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸಹಭಾಗಿತ್ವದಲ್ಲಿ, ಕೌಶಲ್ಯ ಅರ್ಹತೆಗಳು, ಮೌಲ್ಯಮಾಪನ ಮತ್ತು ಪ್ರಮಾಣೀಕರಣವನ್ನು ಮಾನದಂಡವಾಗಿಟ್ಟುಕೊಳ್ಳುವ ಉಪಕ್ರಮವು ಪ್ರಮಾಣೀಕೃತ ಕಾರ್ಯಪಡೆಯ ನಿಯೋಜನೆಯೊಂದಿಗೆ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Budget 2021: Apprenticeship act to be amended for Enhancing Employment Opportunities

ಜಪಾನಿನ ಕೈಗಾರಿಕಾ ಮತ್ತು ವೃತ್ತಿಪರ ಕೌಶಲ್ಯ, ತಂತ್ರ ಮತ್ತು ಜ್ಞಾನದ ವರ್ಗಾವಣೆಗೆ ಅನುಕೂಲವಾಗುವಂತೆ ಭಾರತ ಮತ್ತು ಜಪಾನ್ ನಡುವೆ ಸಹಕಾರಿ ತರಬೇತಿ ಅಂತರ ತರಬೇತಿ ಕಾರ್ಯಕ್ರಮ (ಟಿಐಟಿಪಿ)ವು ಇದೆ. ಇಂತಹ ಉಪಕ್ರಮಗಳನ್ನು ಇನ್ನೂ ಹಲವು ದೇಶಗಳೊಂದಿಗೆ ಮುಂದುವರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

English summary
Budget 2021: The Government proposes to amend the Apprenticeship Act with a view to further enhancing apprenticeship opportunities for the youth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X