ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಇಎಲ್‌ನಲ್ಲಿ ಎಂಜಿನಿಯರ್ ಹುದ್ದೆ: ಅರ್ಜಿ ಸಲ್ಲಿಸಲು ಫೆ. 18 ಕೊನೆಯ ದಿನ

|
Google Oneindia Kannada News

ನವದೆಹಲಿ, ಜನವರಿ 27: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಎಂಜಿನಿಯರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 26 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬಿಇಎಲ್ ಇಂಡಿಯಾ.ಇನ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 18.

ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಚ್‌ಆರ್), ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಐ.ಇ. ನಚರಮ್, ಹೈದರಾಬಾದ್-500076, ತೆಲಂಗಾಣ ಈ ವಿಳಾಸಕ್ಕೆ ಫೆ.18ರ ಒಳಗೆ ಕಳುಹಿಸಬೇಕು.

RBI ನೇಮಕಾತಿ 2021: 241 ಹುದ್ದೆಗಳಿಗೆ ಅರ್ಜಿ ಆಹ್ವಾನRBI ನೇಮಕಾತಿ 2021: 241 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅಂಕಗಳು ಹಾಗೂ ಅನುಭವದ ಆಧಾರದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಒಟ್ಟು ಮಾನದಂಡದಲ್ಲಿ ಶೇ 75ರಷ್ಟು ಪ್ರಾಮುಖ್ಯವನ್ನು ಪದವಿ ಅಂಕಗಳಿಗೆ ನೀಡಲಾಗುತ್ತದೆ. ಇನ್ನು ಹತ್ತು ಅಂಕ ಅಥವಾ 10 ಶೇಕಡಾವಾರನ್ನು ಸಂಬಂಧಿತ ಅನುಭವಕ್ಕೆ ನೀಡಲಾಗುತ್ತದೆ. ಉಳಿದ 15 ಅಂಕಗಳನ್ನು ಅಭ್ಯರ್ಥಿಗಳಿಗೆ ನಡೆಸುವ ವಿಡಿಯೋ ಆಧಾರಿತ ಸಂದರ್ಶನದ ಮೂಲಕ ನಿರ್ಧರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇ-ಮೇಲ್ ಮೂಲಕ ತಾತ್ಕಾಲಿಕ ನೇಮಕಾತಿ ಆದೇಶವನ್ನು ರವಾನಿಸಲಾಗುತ್ತದೆ.

BEL Invites Applications For The Post Of Engineers, February 18 Last Date To Submit Form

ಶಿಕ್ಷಣ: ಅಭ್ಯರ್ಥಿಗಳು ಕನಿಷ್ಠ ಪದವಿಮಟ್ಟದ ಎಂಜಿನಿಯರಿಂಗ್ ಅಥವಾ ತತ್ಸಮಾನ ಕ್ಷೇತ್ರದ ಪದವಿ ಹೊಂದಿರಬೇಕು.

ಕೆಲಸದ ಅನುಭವ: ಪ್ರಾಜೆಕ್ಟ್ ಎಂಜಿನಿಯರ್-1 ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಸಂಬಂಧಿತ ಉದ್ಯಮದಲ್ಲಿ ಕನಿಷ್ಠ ಎರಡು ವರ್ಷ ಅನುಭವ ಹೊಂದಿರುವುದು ಕಡ್ಡಾಯ.

ಶುಲ್ಕ: ಅರ್ಜಿದಾರರು 500 ರೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪಿಡಬ್ಲ್ಯೂಡಿ, ಎಸ್‌ಸಿ ಮತ್ತು ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇರುತ್ತದೆ.

KSMHA ನೇಮಕಾತಿ 2021: 15 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನKSMHA ನೇಮಕಾತಿ 2021: 15 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ: ಅಭ್ಯರ್ಥಿಗಳನ್ನು ಆರಂಭದಲ್ಲಿ ಎರಡು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯನ್ನು ಗರಿಷ್ಠ ನಾಲ್ಕು ವರ್ಷಗಳಿಗೆ ವಿಸ್ತರಿಸಬಹುದಾಗಿದೆ. ಅಭ್ಯರ್ಥಿಗಳಿಗೆ ಏಕೀಕೃತ ಸಂಭಾವನೆ ನೀಡಲಾಗುತ್ತದೆ. ಮೊದಲ ವರ್ಷದಿಂದ ಒಪ್ಪಂದ ವರ್ಷಗಳಂತೆ ಕ್ರಮವಾಗಿ 35,000 ರೂ., 40,000 ರೂ, 45,000 ರೂ ಮತ್ತು 50,000 ರೂ ಮಾಸಿಕ ವೇತನ ನೀಡಲಾಗುತ್ತದೆ. ಜತೆಗೆ ವೈದ್ಯಕೀಯ ವಿಮಾ ಪ್ರೀಮಿಯಂ, ಉಡುಪು ಭತ್ಯೆ, ಹೊಲಿಗೆ ಭತ್ಯೆ, ಪಾದರಕ್ಷೆ ಭತ್ಯೆ ಇತ್ಯಾದಿ ಸೇರಿದಂತೆ ಇತರೆ ವೆಚ್ಚಗಳಿಗೆ ವರ್ಷಕ್ಕೆ 10,000 ರೂ ಭತ್ಯೆ ನೀಡಲಾಗುತ್ತದೆ.

English summary
BEL has invited applications for 26 posts of engineers, the last date to submit application form is Feb 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X