ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಆಫ್​ ಬರೋಡದಲ್ಲಿ ಉದ್ಯೋಗವಕಾಶ: ಈ ಅಭ್ಯರ್ಥಿಗಳು ಅರ್ಜಿ ಹಾಕಿ

|
Google Oneindia Kannada News

ಭಾರತ, ನವೆಂಬರ್ 17: ಬ್ಯಾಂಕ್ ಆಫ್​ ಬರೋಡದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 15 ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಪದವಿ, ಬಿಇ, ಬಿ. ಟೆಕ್, ಎಂ. ಟೆಕ್, ಎಂಇ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 16ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 6ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್​ ಆಫ್​ ಬರೋಡದ ಅಧಿಕೃತ ವೆಬ್​ಸೈಟ್​​ www.bankofbaroda.inಗೆ ಭೇಟಿ ನೀಡಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯವಾಗಿದ್ದು, ಈ ಎಲ್ಲದರ ಕುರಿತ ಇಲ್ಲಿದೆ ಮಾಹಿತಿ.

Bank of Baroda Recruitment 2021: Apply For Data Scientist And Data Engineer Posts

ಸಂಸ್ಥೆ: ಬ್ಯಾಂಕ್ ಆಫ್​ ಬರೋಡಾ

ಹುದ್ದೆಯ ಹೆಸರು: ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್

ಒಟ್ಟು ಹುದ್ದೆಗಳು: 15 ಹುದ್ದೆಗಳು

ವಿದ್ಯಾರ್ಹತೆ: ಪದವಿ, ಬಿಇ, ಬಿ. ಟೆಕ್, ಎಂ. ಟೆಕ್, ಎಂಇ

ಉದ್ಯೋಗದ ಸ್ಥಳ: ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ನಿರ್ವಹಿಸಬೇಕಾಗುತ್ತದೆ

ವೇತನ: ಮಾಸಿಕ 48,170 ರೂ.ನಿಂದ 89,890 ರೂ.

ಅರ್ಜಿ ಸಲ್ಲಿಸುವ ವಿಧಾನ: ಆನ್​ಲೈನ್​​

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/11/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06/12/2021

ಅರ್ಜಿ ಶುಲ್ಕ:
ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳು 600 ರೂಪಾಯಿ ಅರ್ಜಿ ಶುಲ್ಕ ಕಟ್ಟಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/PWD ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಯ ಮಾಹಿತಿ:
ಡಾಟಾ ಸೈಂಟಿಸ್ಟ್ ಹುದ್ದೆಗಳು: 09
ಡಾಟಾ ಎಂಜಿನಿಯರ್ ಹುದ್ದೆಗಳು: 06

ವಿದ್ಯಾರ್ಹತೆ
ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​​ನಿಂದ ಯಾವುದೇ ಪದವಿ/ ಬಿಇ/ ಬಿ ಟೆಕ್/ ಎಂ ಟೆಕ್/ ಎಂಇ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25ರಿಂದ 40 ವರ್ಷದೊಳಗಿರಬೇಕು.

ವೇತನ:
ಡಾಟಾ ಸೈಂಟಿಸ್ಟ್​​​, ಡಾಟಾ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 48,170-89,890 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ ನಡೆಸಲಾಗುವುದು.

Recommended Video

ಮೂಲೆಗುಂಪಾದವರ ಆಟ ನೋಡಿ ಶಾಕ್ ಆದ ಐಪಿಎಲ್ ಫ್ರಾಂಚೈಸಿಗಳು | Oneindia Kannada

English summary
Applications are invited from qualified candidates to fill vacancies in Bank of Baroda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X