ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಟೂರ್ ಆಫ್ ಡ್ಯೂಟಿ': ಸೇನಾ ನೇಮಕಾತಿಯಲ್ಲಿ ಹೊಸ ನಿಯಮ

|
Google Oneindia Kannada News

ನವದೆಹಲಿ, ಜೂನ್ 8: ಭಾರತೀಯ ಸೇನೆ ಅಥವಾ ಸಶಸ್ತ್ರ ಪಡೆಗಳಲ್ಲಿ ಕೆಲಸಕ್ಕಾಗಿ ಎದುರು ನೋಡುತ್ತಿರುವವರಿಗೆ ಕೇಂದ್ರ ಸರ್ಕಾರ ಶುಭಸುದ್ದಿ ನೀಡಿದೆ. ಬುಧವಾರ ಹೊಸ ನೇಮಕಾತಿ ಪ್ರಕ್ರಿಯೆ ಪ್ರಕಟಿಸಲು ಸಜ್ಜಾಗಿದೆ.

ಹೊಸ ನೇಮಕಾತಿ ಮಾದರಿಯನ್ನು 'ಟೂರ್ ಆಫ್ ಡ್ಯೂಟಿ' ಎಂದು ಕರೆಯಲಾಗಿದೆ. ಇದರಲ್ಲಿ ಸೈನ್ಯಕ್ಕೆ ಸೇರುವವರ ಸೇವಾವಧಿ ನಾಲ್ಕು ವರ್ಷಗಳಷ್ಟೆ ಆಗಿರುತ್ತದೆ. ಆಯ್ಕೆಯಾದವರು ಸಶಸ್ತ್ರ ಪಡೆಯ ಮೂರು ಸೇವೆಗಳಿಗೆ ನೇಮಿಸಿಕೊಳ್ಳಬಹುದು. ನೂತನ ನೇಮಕಾತಿ ಯೋಜನೆಗೆ "ಅಗ್ನಿಪಥ್" ಎಂದು ಹೆಸರಿಡಲಾಗಿದೆ. ನೇಮಕಗೊಂಡ ಸೈನಿಕರು "ಅಗ್ನಿವೀರ್ಸ್" ಎಂದು ಕರೆಯಲಾಗುವುದು.

ಸರ್ಕಾರದ ಅಧಿಸೂಚನೆ: ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಿಗೆ ಏನೆಲ್ಲ ಅರ್ಹತೆ ಬೇಕು?ಸರ್ಕಾರದ ಅಧಿಸೂಚನೆ: ಭಾರತದ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಿಗೆ ಏನೆಲ್ಲ ಅರ್ಹತೆ ಬೇಕು?

ಟೂರ್ ಆಫ್ ಡ್ಯೂಟಿ ಮಾದರಿಯಲ್ಲಿ ಪ್ರತಿ ವರ್ಷ ಮೂರು ಸೇವೆಗಳಲ್ಲಿ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ 45,000-50,000 ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಗುರಿ ಹೊಂದಲಾಗಿದೆ.

Armed Forces Recruitment: Here You May Know About Tour of Duty

ಟೂರ್ ಆಫ್ ಡ್ಯೂಟಿ ಯೋಜನೆಯಡಿಯಲ್ಲಿ ನೇಮಕಗೊಂಡವರು ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಉಳಿದ ಅವಧಿಗೆ ಅಂದರೆ ಮೂರುವರೆ ವರ್ಷ ಸೈನಿಕರಾಗಿ ಸೇವೆ ಸಲ್ಲಿಸುತ್ತಾರೆ. ಪ್ರಸ್ತುತ, ಭಾರತೀಯ ಸಶಸ್ತ್ರ ಪಡೆಗಳ ಸೈನಿಕರು ಸುಮಾರು 17-20 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಅಧಿಕಾರಾವಧಿಯ ಕೊನೆಯಲ್ಲಿ, ಈ ನೇಮಕಾತಿಯ ಶೇಕಡಾ 25ರಷ್ಟು ಅಭ್ಯರ್ಥಿಗಳು ಮತ್ತೆ ಸೇನೆಯಲ್ಲಿ ಮುಂದುವರೆಸಲಾಗುತ್ತದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಕಲಬುರಗಿ; ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 10ರಂದು ನೇರ ಸಂದರ್ಶನಕಲಬುರಗಿ; ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 10ರಂದು ನೇರ ಸಂದರ್ಶನ

ನೇಮಕಾತಿ ವಿವರ

ನೇಮಕಾತಿ ವಯಸ್ಸು: 17 ವರ್ಷ ಆರು ತಿಂಗಳಿನಿಂದ 21 ವರ್ಷದೊಳಗಿರಬೇಕು.
ಹುದ್ದೆಗಳು: ಪ್ರತಿವರ್ಷ 45 ಸಾವಿರದಿಂದ 50 ಸಾವಿರ ಸಿಬ್ಬಂದಿ.
ಅಧಿಕಾರಾವಧಿ : 4 ವರ್ಷಗಳು
ತರಬೇತಿ ಅವಧಿ : 6 ತಿಂಗಳು
ವೇತನ ಶ್ರೇಣಿ: 30,000 ರುಪಾಯಿ - 40,000 ರುಪಾಯಿ
ಸೇವಾವಧಿ ಮುಗಿದ ನಂತರ ಪಾವತಿ: 10-12 ಲಕ್ಷ ರುಪಾಯಿ (ತೆರಿಗೆ ಮುಕ್ತ)

Armed Forces Recruitment: Here You May Know About Tour of Duty

ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಕೊರತೆ ನೀಗಿಸಲು ಟೂರ್ ಆಫ್ ಡ್ಯೂಟಿ ನೇಮಕಾತಿ ಮಾದರಿ ಪರಿಕಲ್ಪನೆ ಮಾಡಲಾಗಿದೆ. ಭಾರತೀಯ ಸೇನೆಯ ಸುಮಾರು 40 ಪ್ರತಿಶತದಷ್ಟು ಸಿಬ್ಬಂದಿಯನ್ನು ಈ ಮೂಲಕ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

'ಟೂರ್ ಆಫ್‌ ಡ್ಯೂಟಿ' ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡಲು ಬಯಸುವ ಲಕ್ಷಾಂತರ ಯುವಕರಿಗೆ 'ಟೂರ್ ಆಫ್ ಡ್ಯೂಟಿ' ಅವಕಾಶ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Recommended Video

CT Raviಗೆ ಹಾಸನದ ಶಾಲಾ ವಿದ್ಯಾರ್ಥಿಗಳು ಹೀಗೆ ಕೇಳಿದ್ದೇಕೆ | OneIndia Kannada

English summary
The new recruitment model will be called the Tour of Duty in which civilians can be recruited into three services of the armed forces for four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X