ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಆಗಸ್ಟ್ 31ರೊಳಗೆ ಅರ್ಜಿ ಹಾಕಿ

|
Google Oneindia Kannada News

ಕೊಪ್ಪಳ, ಆಗಸ್ಟ್ 19; ಕೊಪ್ಪಳ ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ವಿಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಒಂದು ನಗರ ಸಭೆಯಲ್ಲಿ ಖಾಲಿಯಿರುವ ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರನ್ನು ಮಾಸಿಕ ರೂ. 6 ಸಾವಿರಗಳ ತಾತ್ಕಾಲಿಕ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಎನ್‌ಟಿಪಿಸಿ ನೇಮಕಾತಿ; 47 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ ಎನ್‌ಟಿಪಿಸಿ ನೇಮಕಾತಿ; 47 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಕೊಪ್ಪಳ ನಗರಸಭೆಯಲ್ಲಿ ಒಬ್ಬರು, ಕೊಪ್ಪಳ ತಾಲೂಕಿನ ಬಹದ್ದೂರಬಂಡಿ, ಮತ್ತೂರು, ಚಿಕ್ಕಬೊಮ್ಮನಾಳ, ಹೊಸಳ್ಳಿ, ಕಲ್‌ತಾವರಗೇರಾ ಹಾಗೂ ಇರಕಲ್‌ಗಡಾ ಗ್ರಾಮ ಪಂಚಾಯತಗಳಲ್ಲಿ, ಕುಷ್ಟಗಿ ತಾಲೂಕಿನ ಸಂಗನಾಳ, ಹೂಲಗೇರಿ, ಯಲಬುರ್ಗಾ ತಾಲೂಕಿನ ತಾಳಕೇರಿ, ವಣಗೇರಿ, ಕುಕನೂರು ತಾಲೂಕಿನ ತಳಕಲ್, ಗಂಗಾವತಿ ತಾಲೂಕಿನ ಸಂಗಾಪುರ, ಕಾರಟಗಿ ತಾಲೂಕಿನ ಬೆನ್ನೂರು ಹಾಗೂ ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ತಲಾ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಮೈಸೂರು; ಆಗಸ್ಟ್ 30ರಂದು ಉದ್ಯೋಗ ಮೇಳ, 30 ಕಂಪನಿಗಳು ಭಾಗಿಮೈಸೂರು; ಆಗಸ್ಟ್ 30ರಂದು ಉದ್ಯೋಗ ಮೇಳ, 30 ಕಂಪನಿಗಳು ಭಾಗಿ

Apply For Village And City Rehabilitation Workers At Koppal

ಅರ್ಜಿದಾರರು 18 ರಿಂದ 45 ವರ್ಷ ಒಳಗಿನ ನಿರುದ್ಯೋಗಿ ಅಂಗವಿಕಲರಾಗಿರಬೇಕು. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣ/ ಅನುತ್ತೀರ್ಣ ಹೊಂದಿರಬೇಕು. ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ವಿಶೇಷ ಗುರುತಿನ ಚೀಟಿ)ಯನ್ನು ಹೊಂದಿರಬೇಕು ಮತ್ತು ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರಬೇಕು.

ಎಸ್‌ಬಿಐ ನೇಮಕಾತಿ; 46 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿ ಎಸ್‌ಬಿಐ ನೇಮಕಾತಿ; 46 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಿ

ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗೆ ಅರ್ಜಿ ಸಲ್ಲಿಸುವವರು ನಗರ ಪ್ರದೇಶದ ನಿವಾಸಿಯಾಗಿರಬೇಕು. ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಮತ್ತು ವಾಸಸ್ಥಳ ಪ್ರಮಾಣ ಪತ್ರವನ್ನು ಅರ್ಜಿ ಜೊತೆ ಲಗತ್ತಿಸಬೇಕು. ವಿಕಲಚೇತನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಅನುಭವವಿದ್ದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಬೇಕು. ವಿಕಲಚೇತನ ಮಹಿಳೆಯರಿಗೂ ಆದ್ಯತೆ ಇದೆ.

ಈ ಹುದ್ದೆಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಹಾಗೂ ಇದು ತಾತ್ಕಾಲಿಕ ಹುದ್ದೆಯಾಗಿರುತ್ತದೆ. ಅರ್ಹ ವಿಕಲಚೇತನರು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಆಗಸ್ಟ್‌ 31ರೊಳಗೆ ಕಚೇರಿ ಅವಧಿಯಲ್ಲಿ ಸಲ್ಲಿಕೆ ಮಾಡಬೇಕು.

ಅರ್ಜಿಗಳು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಲಭ್ಯವಿದೆ. ತಡವಾಗಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recommended Video

ಜಾಮೀನಿನ ಮೇಲೆ ಶಾಸಕ ವಿನಯ್ ಕುಲಕರ್ಣಿ ರಿಲೀಸ್! | Oneindia Kannada

English summary
Applications invited for the Village and city rehabilitation workers post in 14 gram panchayat of Koppal district. Candidates can submit applications till August 31, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X