ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲಕೋಟೆ : 58 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜೂನ್ 18 : ಬಾಗಲಕೋಟೆ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4/7/2019 ಕೊನೆಯ ದಿನವಾಗಿದೆ.

ಕರ್ತವ್ಯಕ್ಕೆ ಹಾಜರಾಗದೇ ಖಾಲಿ ಉಳಿದಿರುವ, ವಯೋನಿವೃತ್ತಿ, ರಾಜೀನಾಮೆ, ಮುಂಬಡ್ತಿ, ವರ್ಗಾವಣೆ ಇತರ ಕಾರಣಗಳಿಂದಾಗಿ ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ. ಒಟ್ಟು 58 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹಾಸನ ಗ್ರಾಮ ಲೆಕ್ಕಿಗರ ನೇಮಕಾತಿ, 21 ಹುದ್ದೆಗೆ ಅರ್ಜಿ ಹಾಕಿಹಾಸನ ಗ್ರಾಮ ಲೆಕ್ಕಿಗರ ನೇಮಕಾತಿ, 21 ಹುದ್ದೆಗೆ ಅರ್ಜಿ ಹಾಕಿ

ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಖುದ್ದಾಗಿ ಅಥವ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿಲ್ಲ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ನೇಮಕಾತಿ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

10 ಸಾವಿರ ಹುದ್ದೆಗಳ ಭರ್ತಿಗೆ ಕರ್ನಾಟಕ ಸರ್ಕಾರದ ಸುತ್ತೋಲೆ10 ಸಾವಿರ ಹುದ್ದೆಗಳ ಭರ್ತಿಗೆ ಕರ್ನಾಟಕ ಸರ್ಕಾರದ ಸುತ್ತೋಲೆ

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಮತ್ತು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಲು 4/7/2019 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಎಸ್ಎಸ್ಎಲ್ಸಿಯಾದವರಿಗೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿವೆಎಸ್ಎಸ್ಎಲ್ಸಿಯಾದವರಿಗೆ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿವೆ

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 4/72019ರಂದು ಕೆಳಕಂಡ ವಯೋಮಿತಿ ಹೊಂದಿರತಕ್ಕದ್ದು.

ಪ.ಜಾ/ಪ.ಪಂ/ಪ್ರವರ್ಗ-1 40 ವರ್ಷಗಳು, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದವರಿಗೆ 35 ವರ್ಷಗಳು.

ವಿದ್ಯಾರ್ಹತೆಯ ವಿವರಗಳು

ವಿದ್ಯಾರ್ಹತೆಯ ವಿವರಗಳು

ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪರೀಕ್ಷೆ ಅಥವ ಸಿಬಿಎಸ್‌ಇ ಅಥವ ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1ರ ಅಭ್ಯರ್ಥಿಗಳಿಗೆ 50 ರೂ., ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಕ್ಕೆ 200 ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ ಮತ್ತು ದ್ವಿ ಪ್ರತಿ ಚಲನ್‌ ತೆಗೆದುಕೊಂಡು ಶುಲ್ಕವನ್ನು ಪಾವತಿ ಮಾಡಬೇಕಿದೆ. ಆನ್‌ಲೈನ್ ಮೂಲಕವೂ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅವಕಾಶ ನೀಡಲಾಗಿದೆ. ನೇಮಕಾತಿ ಆದೇಶದಲ್ಲಿ ವಿವರಗಳನ್ನು ನೀಡಲಾಗಿದೆ.

ವೇತನ ಶ್ರೇಣಿಯ ವಿವರಗಳು

ವೇತನ ಶ್ರೇಣಿಯ ವಿವರಗಳು

ಗ್ರಾಮ ಲೆಕ್ಕಿಗ ಹುದ್ದೆಯ ವೇತನ ಶ್ರೇಣಿಯನ್ನು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. 21400 ರಿಂದ 42000ರದ ತನಕ ವೇತನವಿದೆ.

English summary
Apply for village accountant post in Bagalkot district, Karnataka. Application invited for 58 post. Candidates can apply till 4/7/2019 through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X