• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಮಕೂರು ಕೋರ್ಟ್‌ನಲ್ಲಿ ಕೆಲಸ ಖಾಲಿ ಇದೆ

|

ತುಮಕೂರು, ಫೆಬ್ರವರಿ 19; ತುಮಕೂರು ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಸಲು 24/3/2021 ಕೊನೆಯ ದಿನವಾಗಿದೆ.

ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ಜಾರಿ ಪೇದೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು, ಈಗ ಪುನಃ ನೇಮಕಾತಿ ಆರಂಭಿಸಲಾಗಿದೆ.

ಚಿಕ್ಕಬಳ್ಳಾಪುರ; ಕೆಲಸ ಖಾಲಿ ಇದೆ, ಫೆ. 28ರೊಳಗೆ ಅರ್ಜಿ ಹಾಕಿ

ಬೆರಳಚ್ಚುಗಾರ 7, ಬೆರಳಚ್ಚು ನಕಲುಗಾರ 3, ಜಾರಿ ಪೇದೆ 11 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. 23/2/2021ರಿಂದ 24/3/2021ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಹಾಸನದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ; ಅರ್ಜಿ ಹಾಕಿ

ಈಗಾಗಲೇ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ, ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿಲ್ಲ. ಮೊದಲು ಸಲ್ಲಿಸಿರುವ ಅರ್ಜಿ, ಶುಲ್ಕವನ್ನು ಪರಿಗಣಿಸಲಾಗುತ್ತದೆ.

ಯಾದಗಿರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರಗಳು

ವೇತನದ ವಿವರ; ಬೆರಳಚ್ಚುಗಾರ, ಬೆರಳಚ್ಚು-ನಕಲುಗಾರ ಹುದ್ದೆಗಳಿಗೆ 21,000 ದಿಂದ 42,000 ರೂ. ವೇತನ ಮತ್ತು ಜಾರಿ ಪೇದೆ ಹುದ್ದೆಗೆ 19,950 ರಿಂದ 37,900 ರೂ. ತನಕ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆ ಪ್ರೌಢ ದರ್ಜೆಯ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಜಾರಿ ಪೇದೆ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆ ನಿಗದಿ ಮಾಡಿರಬೇಕು. ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ 35 ವರ್ಷ ದಾಟಿರಬಾರದು. ಜಾತಿವಾರು ಮೀಸಲಾತಿ ಅನ್ವಯವಾಗುತ್ತದೆ.

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 200 ರೂ., ಪ.ಜಾತಿ/ ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಲು ಏಪ್ರಿಲ್ 18 ಕೊನೆಯ ದಿನ. ಚಲನ್ ಮೂಲಕ ಪಾವತಿಸಲು ಏಪ್ರಿಲ್ 21 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ https://districts.ecourts.gov.in/tumkur-onlinerecruitment#

English summary
Apply for various post in Tumakuru district court. Candidates can apply till 24/3/2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X