ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದಲ್ಲಿ ಕೆಲಸ ಖಾಲಿ ಇದೆ; ಫೆಬ್ರವರಿ 17ರ ತನಕ ಅರ್ಜಿ ಹಾಕಿ

|
Google Oneindia Kannada News

ಮಂಡ್ಯ, ಫೆಬ್ರವರಿ 06; ಮಂಡ್ಯ ಜಿಲ್ಲಾ ಪಂಚಾಯಿತಿ ಕಾರ್ಯಾಲಯ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಫೆಬ್ರವರಿ 17 ಕೊನೆಯ ದಿನವಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಭೌತಿಕವಾಗಿ ಸ್ವೀಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿಕೆಪಿಟಿಸಿಎಲ್ ನೇಮಕಾತಿ ವಿವರಗಳು; 1492 ಹುದ್ದೆಗಳಿಗೆ ಅರ್ಜಿ ಹಾಕಿ

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳನ್ನು ಮಾತ್ರ ಮೂಲ ದಾಖಲಾತಿಗಳ ಪರಿಶೀಲನೆಗೆ ಆಹ್ವಾನಿಸಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಧಾರವಾಡ; ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಧಾರವಾಡ; ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

Apply For Various Post At Mandya Till February 17

ಅಡ್ಮಿನೆಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಹಾಗೂ ಇಂಗ್ಲಿಶ್ ಟೈಪಿಂಗ್ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ.

ಕಲಬುರಗಿ ಕೆಲಸ ಖಾಲಿ ಇದೆ; ಫೆ.28ರೊಳಗೆ ಅರ್ಜಿ ಹಾಕಿ ಕಲಬುರಗಿ ಕೆಲಸ ಖಾಲಿ ಇದೆ; ಫೆ.28ರೊಳಗೆ ಅರ್ಜಿ ಹಾಕಿ

ಹುದ್ದೆಗಳ ವಿವರಗಳು; ತಾಂತ್ರಿಕ ಸಹಾಯಕರು (ಅರಣ್ಯ) 3 ಹುದ್ದೆಗಳು. ಬಿಎಸ್‌ಸಿ ಫಾರೆಸ್ಟರಿ ವಿದ್ಯಾರ್ಹತೆ. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಯೋಮಿತಿ ಕನಿಷ್ಠ 21 ವರ್ಷ. 1/9/2021ಕ್ಕೆ ಅನ್ವಯವಾಗುವಂತೆ 40 ವರ್ಷ ಮೀರಿರಬಾರದು. ವೇತನ 24,000 ರೂ. ಮತ್ತು ಪ್ರಯಾಣ ಭತ್ಯೆ 2 ಸಾವಿರ ರೂ.ಗಳು.

ತಾಂತ್ರಿಕ ಸಹಾಯಕ (ತೋಟಗಾರಿಕೆ) 1 ಹುದ್ದೆ. ವಿದ್ಯಾರ್ಹತೆ ಬಿಎಸ್‌ಸಿ ಹಾರ್ಟಿ ಕಲ್ಚರ್. ಕಂಪ್ಯೂಟರ ಜ್ಞಾನ ಹೊಂದಿರಬೇಕು. ವಯೋಮಿತಿ ಕನಿಷ್ಠ 21 ವರ್ಷ, 1/9/2021ಕ್ಕೆ ಅನ್ವಯವಾಗುವಂತೆ 40 ವರ್ಷ ಮೀರಿರಬಾರದು. ವೇತನ 24,000 ರೂ. ಮತ್ತು ಪ್ರಯಾಣ ಭತ್ಯೆ 2 ಸಾವಿರ.

ತಾಲೂಕು ಐ. ಸಿ. ಸಿ ಸಂಯೋಜಕರು 2 ಹುದ್ದೆಗಳು. ಮಾಸ್ ಕಮ್ಯುನಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಅಥವ ಮಾಸ್ ಕಮ್ಯುನಿಕೇಶನ್‌ನಲ್ಲಿ ಡಿಪ್ಲೊಮಾ. ಪೋಟೋಗ್ರಫಿ, ವಿಡಿಯೋ ಗ್ರಫಿ, ಪೋಟೋ ಎಡಿಟಿಂಗ್. ವಯೋಮಿತಿ ಕನಿಷ್ಠ 21 ವರ್ಷ, 1/9/2021ಕ್ಕೆ ಅನ್ವಯವಾಗುವಂತೆ 40 ವರ್ಷ ಮೀರಿರಬಾರದು. ವೇತನ 24,000 ಮಾಸಿಕ ಮತ್ತು 2 ಸಾವಿರ ಪ್ರ್ಯಾಣ ಭತ್ಯೆ.

ಅಡ್ಮಿನಿಸ್ಟೇಟಿವ್ ಅಸಿಸ್ಟೆಂಟ್ 7 ಹುದ್ದೆಗಳು. ವಿದ್ಯಾರ್ಹತೆ ಬಿ. ಕಾಂ. ಕನ್ನಡ, ಇಂಗ್ಲಿಶ್ ಟೈಪಿಂಗ್ ಪರಿಣಿತಿ ಇರಬೇಕು. ಎಂ. ಎಸ್. ಅಫೀಸ್ ಸೇರಿದಂತೆ ಉತ್ತಮ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ವಯೋಮಿತಿ 21 ವರ್ಷ, 1/9/2021ಕ್ಕೆ ಅನ್ವಯವಾಗುವಂತೆ 35 ವರ್ಷ ಮೀರಿರಬಾರದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು http://zpmandya.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಅಪ್ರೆಂಟಿಸ್ ಹುದ್ದೆಗೆ ಕ್ಯಾಂಪಸ್ ಸಂದರ್ಶನ; ಕೊಪ್ಪಳ ತಾಲ್ಲೂಕಿನ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ಪ್ರೈ ಲಿ. ವತಿಯಿಂದ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆಬ್ರವರಿ 7 ರಂದು ಒಂದು ವರ್ಷದ ಅವಧಿಯ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಸಂದರ್ಶನ ಆರಂಭವಾಗಲಿದ್ದು 18 ರಿಂದ 24 ವರ್ಷ ವಯೋಮಿತಿಯ ಐಟಿಐ ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್ ಮತ್ತು ವೆಲ್ಡರ್ ವೃತ್ತಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಡಿಸೆಂಬರ್ 2021ರಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ ಪ್ರತಿ ತಿಂಗಳು 10 ರೂ. ಶಿಷ್ಯ ವೇತನ, ಕ್ಯಾಂಟೀನ್, ಸಾರಿಗೆ ಮತ್ತು ಯುನಿಫಾರ್ಮ್ ಸೌಲಭ್ಯಗಳನ್ನು ಕಂಪನಿಯಿಂದ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಂಕಪಟ್ಟಿ, ಐಟಿಐ ಪಾಸಾದ ಅಂಕಪಟ್ಟಿಗಳು, ಆಧಾರ್‌ ಕಾರ್ಡ್, ಜಾತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

Recommended Video

Rohit Sharma ಪ್ರಕಾರ ತಂಡದವರ ಈ ಒಂದರ ಕಡೆ ಗಮನ ಹರಿಸಬೇಕು | Oneindia Kannada

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480715898, 9449517426, 9964247098, 8618952961 ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

English summary
Mandya zilla panchayat invited applications for various post. Candidates can apply till February 17, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X