• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

KUIDFC ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ಜುಲೈ 21; ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 29/7/2021 ಕೊನೆಯ ದಿನವಾಗಿದೆ.

ಕೆಯುಐಡಿಎಫ್‌ಸಿ 10 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಖುದ್ದಾಗಿ, ಅಂಚೆ ಅಥವ ಕೊರಿಯರ್ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ.

ನಬಾರ್ಡ್ ನೇಮಕಾತಿ; ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆಗಳು ನಬಾರ್ಡ್ ನೇಮಕಾತಿ; ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್‌ ಹುದ್ದೆಗಳು

ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ದಾಖಲಾತಿಗಳನ್ನು ಅಪ್‌ಲೋಡ್ ಮಾಡದಿದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ.

ನೈಋತ್ಯ ರೈಲ್ವೆ ನೇಮಕಾತಿ; ಹುಬ್ಬಳ್ಳಿಯಲ್ಲಿ ಕೆಲಸ ನೈಋತ್ಯ ರೈಲ್ವೆ ನೇಮಕಾತಿ; ಹುಬ್ಬಳ್ಳಿಯಲ್ಲಿ ಕೆಲಸ

ಹುದ್ದೆಗಳ ವಿವರ; ಸಹಾಯಕ ಪ್ರಧಾನ ವ್ಯವಸ್ಥಾಪಕರು (ಎಡಿಬಿ) ಯೋಜನಾ ಹಣಕಾಸು ವಿಭಾಗ 1, ಉಪ ಪ್ರಧಾನ ವ್ಯವಸ್ಥಾಪಕರು/ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಟ್ರಸ್ಟ್) 1, ವ್ಯವಸ್ಥಾಪಕರು (ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ) 1, ಸಹಾಯಕ ವ್ಯವಸ್ಥಾಪಕ (ಮೆಗಾಸಿಟಿ) ಹಣಕಾಸು & ಲೆಕ್ಕಪತ್ರ ವಿಭಾಗ 1, ಸಹಾಯಕ ವ್ಯವಸ್ಥಾಪಕ (ಮಾನವ ಸಂಪನ್ಮೂಲ) ಆಡಳಿತ ವಿಭಾಗ 1, ಶೀಘ್ರಲಿಪಿಗಾರರು 3, ಕಿರಿಯ ಕಾರ್ಯ ನಿರ್ವಾಹಕ ಸಹಾಯಕರು, ಆಡಳಿತ ವಿಭಾಗ 2 ಹುದ್ದೆಗಳು.

ಕೆನರಾ ಬ್ಯಾಂಕ್ ನೇಮಕಾತಿ; ಜುಲೈ 31ರೊಳಗೆ ಅರ್ಜಿ ಹಾಕಿ ಕೆನರಾ ಬ್ಯಾಂಕ್ ನೇಮಕಾತಿ; ಜುಲೈ 31ರೊಳಗೆ ಅರ್ಜಿ ಹಾಕಿ

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ, ಭಾವಚಿತ್ರ ಸಹಿಯೊಂದಿಗೆ, ವಯೋಮಿತಿ, ವಿದ್ಯಾರ್ಹತೆ, ಅನುಭವ, ಮೀಸಲಾತಿ, ಕನ್ನಡ ಭಾಷಾ ಜ್ಞಾನ ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಸ್ಪಷ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂಸಿಬೇಕು. ಪದವಿ/ ಸ್ನಾತಕೋತ್ತರ/ ಇಂಜಿನಿಯರಿಂಗ್ ಇತ್ಯಾದಿ ವಿದ್ಯಾಭ್ಯಾಸಗಳಿಗೆ ಸಂಬಂಧಿಸಿದ ಅಂಕಪಟ್ಟಿ/ ಪದವಿ ನೈಜತೆಯ ಪರಿಶೀಲನೆಗಾಗಿ ಸಂಬಂಧಿಸಿದ ವಿಶ್ವವಿದ್ಯಾಲಯಗಳಿಗೆ ಕಳಿಸಲಾಗುತ್ತದೆ.

   BS Yediyurappa Resignition | ರಾಜಿನಾಮೆ ವಲಸಿಗರಿಗೆ ದೊಡ್ಡ ತಲೆನೋವು! | Oneindia Kannada

   ಅರ್ಜಿ ಸಲ್ಲಿಕೆ, ನೇಮಕಾತಿ ವಿವರಗಳಿಗಾಗಿ ಕ್ಲಿಕ್ ಮಾಡಿ

   English summary
   Karnataka Urban Infrastructure Development and Finance Corporation invited applications for various post. Candidates can submit applications till 29/7/2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X