• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಪ್ಪಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

|
Google Oneindia Kannada News

ಕೊಪ್ಪಳ, ಮೇ 17; ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಸರ್ಕಾರಿ ಮಕ್ಕಳ ಪಾಲನಾ ಸಂಸ್ಥೆಗಳಾದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರಗಳಿಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಬಾಲಕಿಯರ ಬಾಲ ಮಂದಿರದಲ್ಲಿ ಖಾಲಿ ಇರುವ ಗಣಿತ/ವಿಜ್ಞಾನ ಶಿಕ್ಷಕರು (ಬಿಎಸ್ಸಿ, ಬಿಇಡಿ) ಹಾಗೂ ಇಂಗ್ಲೀಷ್ ಭಾಷಾ ಶಿಕ್ಷಕರು (ಬಿಎ, ಬಿ.ಇಡಿ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಕರ್ನಾಟಕದ ಬ್ಯಾಂಕ್ ನೇಮಕಾತಿ: ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಬಾಲಕರ ಬಾಲಮಂದಿರದಲ್ಲಿ ಖಾಲಿ ಇರುವ ಕಲೆ, ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರು (ಸಂಗೀತ/ ವಾದ್ಯ, ಸಂಗೀತ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟಿಫಿಕೇಟ್ ಕೋರ್ಸು) ಹಾಗೂ ಯೋಗ/ ದೈಹಿಕ ಶಿಕ್ಷಕರ (ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ) ತಲಾ ಒಂದು ಹುದ್ದೆಯನ್ನು ತಾತ್ಕಾಲಿಕವಾಗಿ ತುಂಬಲಾಗುತ್ತದೆ.

ದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 38 ವರ್ಷದೊಳಗಿರಬೇಕು, ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 4000 ಗೌರವಧನವನ್ನಾಗಿ ನೀಡಲಾಗುತ್ತದೆ.

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿ

ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಹಾಗೂ ವಿಶ್ವವಿದ್ಯಾಲಯದಿಂದ ಸಂಬಂಧಿಸಿದಂತೆ ತರಬೇತಿ/ ಪದವಿ ಪಡೆದಿರಬೇಕು. ಬಾಲಕಿಯರ ಬಾಲಮಂದಿರದ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ಗೌರವಧನದ ಆಧಾರದ ಮೇಲೆ 2022-23ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅರೆಕಾಲಿಕ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಯು ಅರೆಕಾಲಿಕ ಹಾಗೂ ತಾತ್ಕಾಲಿಕ ಆಧಾರದ ಹುದ್ದೆಯಾಗಿದ್ದು ಯಾವುದೇ ಕಾರಣಕ್ಕೂ ಸಕ್ರಮಗೊಳಿಸುವುದಿಲ್ಲ, ನೇಮಕಗೊಂಡ ಸಿಬ್ಬಂದಿಗಳ ಸೇವೆಯು ಸರ್ಕಾರದ ಅನುದಾನದ ಲಭ್ಯತೆಯ ಆಧಾರದ ಮೇಲಿರುತ್ತದೆ.

ಸ್ಥಳೀಯ ಅಭ್ಯರ್ಥಿಗಳಿಗೆ ಹಾಗೂ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದವರಿಗೆ ಆದ್ಯತೆ ಇರುತ್ತದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ.

ಆಸಕ್ತರು ಮೇ 30ರೊಳಗೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸ್ವವಿವರವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಕಚೇರಿಗೆ ಸಲ್ಲಿಸಬೇಕು.

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಆಕ್ಷೇಪಣೆ; ಕೊಪ್ಪಳ ಜಿಲ್ಲಾ ಕಂದಾಯ ಇಲಾಖೆಯ 2019ನೇ ಸಾಲಿನ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಹಾಗೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲೆಯ ಕಂದಾಯ ಇಲಾಖೆಯ 2019ನೇ ಸಾಲಿನ ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಬಾಕಿ ಉಳಿದಿರುವ 14 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಪೈಕಿ 13 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಪೈಕಿ 12 ಅಭ್ಯರ್ಥಿಗಳು ಗೈರು ಹಾಜರಿಯಾಗಿರುವುದರಿಂದ ಈ ಅಭ್ಯರ್ಥಿಗಳ ಹೆಸರನ್ನು ನೇರ ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡಲಾದ ಪಟ್ಟಿ ಹಾಗೂ 9 ಹುದ್ದೆಗಳಿಗೆ ಹೊಸದಾಗಿ ರೋಸ್ಟರ್ ಕಂ. ಮೆರಿಟ್ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಹಾಗೂ 5 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಕೊಪ್ಪಳ ಜಿಲ್ಲಾ ವೆಬ್‌ಸೈಟ್ www.koppal.nic.in ನಲ್ಲಿ ಹಾಕಲಾಗಿದೆ. ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತಂತೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ, ಮೇ 21 ರೊಳಗಾಗಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

English summary
Apply for various post in Koppal. Post vacant under women and child development department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X