• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಕೆಲಸ ಖಾಲಿ ಇದೆ

|

ಬೆಂಗಳೂರು, ಸೆಪ್ಟೆಂಬರ್ 16 : ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಮಂಜೂರಾಗಿ ತೆರವಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 21/9/2020 ರೊಳಗೆ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ತಿಳಿಸಿದ್ದಾರೆ.

ಗ್ರಾ. ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 37 ಹುದ್ದೆಗಳು

ಕಾರ್ಯ ನಿರ್ವಾಹಕ ಅಭಿಯಂತರ, ಸಹಾಯಕ ಹಣಕಾಸು ನಿಯಂತ್ರಕರು, ಲೆಕ್ಕಾಧೀಕ್ಷಕರು, ಪ್ರಥಮ ದರ್ಜೆ ಲೆಕ್ಕ ಸಹಾಯಕರು, ಉಪ ನಿರ್ದೇಶಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸೆ. 21ರ ತನಕ ಅರ್ಜಿಗಳನ್ನು ಸಲ್ಲಿಸಬಹುದು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ

ಆಸಕ್ತ ಅಭ್ಯರ್ಥಿಗಳು ಅರ್ಹತಾ ವಿವರಗಳನ್ನು ಮಂಡಳಿಯ www.hkrdb.kar.nic.in ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಆಸಕ್ತರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.

ಕರ್ನಾಟಕ ಆರೋಗ್ಯ ಇಲಾಖೆ ನೇಮಕಾತಿ; ವಿವರಗಳು

ಹುದ್ದೆಗಳ ವಿವರ

ಹುದ್ದೆಗಳ ವಿವರ

ಕಾರ್ಯ ನಿರ್ವಾಹಕ ಅಭಿಯಂತರ 2, ಸಹಾಯಕ ಹಣಕಾಸು ನಿಯಂತ್ರಕರು 1, ಲೆಕ್ಕಾಧೀಕ್ಷಕರು 1, ಪ್ರಥಮ ದರ್ಜೆ ಲೆಕ್ಕ ಸಹಾಯಕರು 2, ಉಪ ನಿರ್ದೇಶಕರು 1, ಸಹಾಯಕ ಸಾಂಖ್ಯಿಕ ಅಧಿಕಾರಿ 1, ಸಾಂಖ್ಯಿಕ ನಿರೀಕ್ಷಕರು 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ನಿವೃತ್ತ ಅಧಿಕಾರಿ/ಸಿಬ್ಬಂದಿ

ನಿವೃತ್ತ ಅಧಿಕಾರಿ/ಸಿಬ್ಬಂದಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಆಸಕ್ತರು ಸೂಕ್ತ ದಾಖಲೆಗಳ ಜೊತೆ ಕಾರ್ಯಾಲಯದಲ್ಲಿ ಸೆ.21ರ ಸಂಜೆ 5.30ರ ತನಕ ಅರ್ಜಿ ಸಲ್ಲಿಸಬಹುದು.

ಅರ್ಹತಾ ಷರತ್ತುಗಳು

ಅರ್ಹತಾ ಷರತ್ತುಗಳು

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು 65 ವರ್ಷ ಮೀರಿರಬಾರದು. ನಿವೃತ್ತ ಅಧಿಕಾರಿ/ ಸಿಬ್ಬಂದಿ ತಮ್ಮ ಪಿಂಚಣಿ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಹುದ್ದೆಗಳನ್ನು ಗರಿಷ್ಠ ಒಂದು ವರ್ಷದ ಗುತ್ತಿಗೆ ಅವಧಿಯ ಮೇಲೆ ಮಾತ್ರ ನೇಮಕ ಮಾಡಲಾಗುತ್ತದೆ.

ನೇಮಕಾತಿ ಆದೇಶ

ನೇಮಕಾತಿ ಆದೇಶ

ಸದರಿ ಹುದ್ದೆಗಳು ಭರ್ತಿಯಾಗುವ ತನಕ ಮಾತ್ರ ನೇಮಕಾತಿ ಆದೇಶ ಜಾರಿಯಲ್ಲಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನೀಡುವ ಸೇವೆಯ ಆಧಾರದ ಮೇಲೆ ಸೇವೆಯನ್ನು ಮುಂದುವರೆಸುವ ಅಥವ ಕಾರ್ಯಕ್ಷಮತೆ ಸರಿ ಇಲ್ಲದಿದ್ದರೆ ಸೇವೆ ರದ್ದುಪಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇದೆ.

English summary
Applications invited from interested candidates to fill the various post in Kalyana Karnataka Region Development Board, Gulbarga. Candidates can submit applications till September 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X