ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜನವರಿ 15: ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಲ್ಲಿ ಮಾಸಿಕ ಗೌರವಧನದ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 31ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಪಿ. ಎನ್. ರವೀಂದ್ರ ಅವರು ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಗೌರವಧನದ ಆಧಾರದ ಮೇಲೆ ಹುದ್ದೆಗಳ ಭರ್ತಿ ನಡೆಯಲಿದೆ.
ಕಲಬುರಗಿ: ಜನವರಿ 21 ರಂದು ಉದ್ಯೋಗ ಮೇಳ, ನೇರ ನೇಮಕಾತಿ
ಡಾಟಾ ಎಂಟ್ರಿ ಆಪರೇಟರ್ (1) ಹುದ್ದೆ ಹಾಗೂ ವಾಹನ ಚಾಲಕರ (1) ಹುದ್ದೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಸ್ವ-ವಿವರವುಳ್ಳ ಅರ್ಜಿಯನ್ನು ಭಾವಚಿತ್ರ ಮತ್ತು ನಿಗದಿತ ದಾಖಲೆಗಳೊಂದಿಗೆ 2021ರ ಜನವರಿ 31ರೊಳಗೆ ಸಲ್ಲಿಸಬೇಕು.
ಬೆಳಗಾವಿಯಲ್ಲಿ ಸೇನಾ ನೇಮಕಾತಿ ರ್ಯಾಲಿ; ನೋಂದಣಿ ಮಾಡಿಸಿ
ಮಾಸಿಕ ಗೌರವಧನ ಹಾಗೂ ಸಾರಿಗೆ ವೆಚ್ಚ ಒಳಗೊಂಡಂತೆ 11 ತಿಂಗಳ ಅವಧಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಮಾಸಿಕ 13,050 ರೂ. ಹಾಗೂ ವಾಹನ ಚಾಲಕ ಹುದ್ದೆಗೆ ಮಾಸಿಕ 10,800 ರೂ. ನೀಡಲಾಗುತ್ತದೆ.
ಅಂಚೆ ಇಲಾಖೆ ನೇಮಕಾತಿ; ನಂಜನಗೂಡು ವಿಭಾಗದಲ್ಲಿ 78 ಹುದ್ದೆ ಭರ್ತಿ
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ ಮತ್ತು ಅನುಭವ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೊಠಡಿ ಸಂಖ್ಯೆ-102, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು ಇಲ್ಲಿ ಸಂಪರ್ಕಿಸಬಹುದು.