• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ನೇಮಕಾತಿ; ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03; ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 20/10/2022 ಕೊನೆಯ ದಿನವಾಗಿದೆ.

ಗ್ರಾಮ ಪಂಚಾಯಿತಿ ನೇಮಕಾತಿ ಸೇವಾ ನಿಯಮಗಳನ್ವಯ ನೇರ ನೇಮಕಾತಿ ಮಾಡುವ ಸಲುವಾಗಿ ಆಯ್ಕೆ ಸಮಿತಿಯನ್ನು ರಚಿಸಿದ್ದು, ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 4 ತಾಲೂಕುಗಳ ಪ್ರತಿ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ.

ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು ಕರ್ನಾಟಕ; ವಿವಿಧ ಇಲಾಖೆಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳು

ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇರೆಗೆ ಹಾಗೂ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ಜರುಗಿಸಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಸಶಸ್ತ್ರ ಸೀಮಾ ಬಲ ನೇಮಕಾತಿ 2022: 399 ಕಾನ್ಸ್‌ಟೇಬಲ್ ಹುದ್ದೆ ಸಶಸ್ತ್ರ ಸೀಮಾ ಬಲ ನೇಮಕಾತಿ 2022: 399 ಕಾನ್ಸ್‌ಟೇಬಲ್ ಹುದ್ದೆ

ಕರವಸೂಲಿಗಾರರು 4, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು 4, ಅಟೆಂಡೆಂಟ್ 8, ಕ್ಲೀನರ್ (ಸ್ವಚ್ಛತಾಗಾರ) 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆಯ್ಕೆ ಪಟ್ಟಿಯಲ್ಲಿನ ನೇಮಕ ಮಾಡಲಾಗುವ ನಿಬಂಧನೆಗೊಳಪಟ್ಟಿರುತ್ತದೆ.

ಕರ್ನಾಟಕ; ಒಟ್ಟು ಮಂಜೂರಾಗಿರುವ, ಖಾಲಿ ಇರುವ ಹುದ್ದೆಗಳ ವಿವರ ಕರ್ನಾಟಕ; ಒಟ್ಟು ಮಂಜೂರಾಗಿರುವ, ಖಾಲಿ ಇರುವ ಹುದ್ದೆಗಳ ವಿವರ

ಕರವಸೂಲಿಗಾರರ ಹುದ್ದೆಗಳು

ಕರವಸೂಲಿಗಾರರ ಹುದ್ದೆಗಳು

ಕನ್ನಡವನ್ನು ಒಂದು ವಿಷಯವನ್ನಾಗಿ ಪಿಯುಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಮೂರು ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ 1 40 ವರ್ಷಗಳು. 2ಎ/ 2ಬಿ/ 3ಎ/ 3ಬಿ 38 ವರ್ಷಗಳು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು. ಅಭ್ಯರ್ಥಿಗಳನ್ನು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು

ಕನ್ನಡವನ್ನು ಒಂದು ವಿಷಯವನ್ನಾಗಿ ಪಿಯುಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ 6 ತಿಂಗಳ ತರಬೇತಿ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು.

ಆಯ್ಕೆ ಸಮಿತಿಯು ನಡೆಸುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಹತಾ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕಗಳನ್ನು ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಡೆದ ಶೇ 50 ಅಂಕಗಳನ್ನು ಒಳಗೊಂಡಿರುವ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಅಟೆಂಡೆಂಟ್ (ಜವಾನ) ಹುದ್ದೆಗಳು

ಅಟೆಂಡೆಂಟ್ (ಜವಾನ) ಹುದ್ದೆಗಳು

ಕನ್ನಡವನ್ನು ಒಂದು ವಿಷಯವನ್ನಾಗಿ ಎಸ್‌ಎಲ್‌ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ. ಜಾತಿ/ ಪ. ಪಂ/ ಹಿಂದುಳಿದ 1 40 ವರ್ಷಗಳು. 2ಎ/ 2ಬಿ/ 3ಎ/ 3ಬಿ 38 ವರ್ಷಗಳು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು.

ಹುದ್ದೆಗಳು ಕಾರಹಳ್ಳಿ, ವಿಶ್ವನಾಥಪುರ, ಚನ್ನಾದೇವಿ ಆಗ್ರಹಾರ, ಹೆತ್ತಕ್ಕಿ, ಕಣ್ಣೇಗೌಡನಹಳ್ಳಿ, ಹಾದ್ರಿಪುರ, ಗೊಲ್ಲಹಳ್ಳಿ, ಅಣ್ಣೇಶ್ವರ, ಬಿಜ್ಜವಾರ, ಮುಗಬಾಳದಲ್ಲಿ ಹುದ್ದೆಗಳು ಖಾಲಿ ಇವೆ.

ಕ್ಲೀನರ್ (ಸ್ವಚ್ಛತಾಗಾರ) ಹುದ್ದೆಗಳು

ಕ್ಲೀನರ್ (ಸ್ವಚ್ಛತಾಗಾರ) ಹುದ್ದೆಗಳು

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನ್ನಡವನ್ನು ಒಂದು ವಿಷಯವನ್ನಾಗಿ ಎಸ್‌ಎಲ್‌ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ. ಜಾತಿ/ ಪ. ಪಂ/ ಹಿಂದುಳಿದ 1 40 ವರ್ಷಗಳು. 2ಎ/ 2ಬಿ/ 3ಎ/ 3ಬಿ 38 ವರ್ಷಗಳು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 300 ರೂ., ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 200 ರೂ., ಪ. ಜಾತಿ/ ಪ. ಪಂಗಡ ಅಭ್ಯರ್ಥಿಗಳಿಗೆ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ವಿಳಾಸ bangalorerural.nic.in

English summary
Apply for 65 bill collector, data entry operator, attendant and cleaner vacancies in Bangalore Rural district gram panchayat. Candidates can apply online till 20/10/2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X