• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೈಬರ್ ಸೆಕ್ಯೂರಿಟಿ ಕೋರ್ಸ್‌ಗೆ ಆಸಕ್ತರಿಂದ ಅರ್ಜಿ ಆಹ್ವಾನ

|
Google Oneindia Kannada News

ಹೈದರಾಬಾದ್, ಮೇ 25; ಎನ್‌ಎಸಿಎಸ್ ಹೈದರಾಬಾದ್ ಆನ್‌ಲೈನ್ ಸೈಬರ್ ಸೆಕ್ಯೂರಿಟಿ ಕೋರ್ಸ್‌ಗಾಗಿ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಭಾರತದ ಯಾವುದೇ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

10+2, ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ

ಸೈಬರ್ ಸೆಕ್ಯೂರಿಟಿ ಅಫೀಸರ್, ಡಿಪ್ಲೊಮಾ ಇನ್ ಸೈಬರ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್, ಸೈಬರ್ ಸೆಕ್ಯೂರಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ, ಸೈಬರ್ ಸೆಕ್ಯೂರಿಟಿ ಪ್ರಮಾಣ ಪತ್ರ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ

ಎನ್‌ಎಸಿಎಸ್ ಎಸ್‌ಸಿ, ಎಸ್‌ಟಿ, ಬಿಸಿ, ಓಬಿಸಿ, ಇಬಿಸಿ, ಹಿಂದುಳಿದ ವರ್ಗ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳು, ನಿವೃತ್ತ ಯೋಧರು ಮುಂತಾದವರಿಗೆ ಶುಲ್ಕದಲ್ಲಿ ಶೇ 60ರಷ್ಟು ರಿಯಾಯಿತಿ ಇದೆ.

91 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಸಿಎಸ್‌ಜಿ 91 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಸಿಎಸ್‌ಜಿ

ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸೈಬರ್ ಸೆಕ್ಯೂರಿಟಿ ಆಫೀಸರ್, ಇನ್‌ಫರ್‌ಮೇಶನ್ ಆಫೀಸರ್, ಇನ್‌ಫರ್‌ಮೇಶನ್ ಅನಾಲಿಸ್ಟ್, ಐಟಿ ಸೆಕ್ಯೂರಿಟಿ ಇಂಜಿನಿಯರ್, ಸಿಸ್ಟಮ್ ಸೆಕ್ಯೂರಿಟಿ ಅಡೈಸ್ವರ್, ಇನ್‌ಫರ್‌ಮೇಶನ್ ರಿಸ್ಕ್ ಆಡಿಟರ್, ಸೆಕ್ಯೂರಿಟಿ ಅನಾಲಿಸ್ಟ್ ಮುಂತಾದ ಹುದ್ದೆಗಳಲ್ಲಿ ಕೆಲಸ ನಿರ್ವಹಣೆ ಮಾಡಬಹುದು.

ಆಸಕ್ತರು ಅರ್ಜಿಗಳನ್ನು www.nacsindia.org ವೆಬ್‌ಸೈಟ್ ಮೂಲಕ 27/6/2021ರ ತನಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7893141797.

English summary
National Academy of Cyber Security, Hyderabad invites applications online for various courses. Candidates can apply till 27/06/2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X