ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಮೇ 27 : ಕಲಬುರಗಿ ಜಿಲ್ಲೆಯಲ್ಲಿ ಅರೆಕಾಲಿಕ ಬೋಧಕ, ಬೋಧಕೇತರ ಹಾಗೂ ಅರೆಕಾಲಿಕ ವೈದ್ಯರ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜೂನ್ 4ರ ಸಂಜೆ 5.30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Recommended Video

ದೇವಸ್ಥಾನಕ್ಕೆ ಹೋಗ್ಬೆಕಾಗಿಲ್ಲ ಇನ್ಮುಂದೆ ದೇವ್ರೇ ನಿಮ್ಮ ಮನೆಗೆ ಬರ್ತಾನೆ | Oneindia Kannada

ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಬರುವ ಸರ್ಕಾರಿ ಪಾಲನಾ ಸಂಸ್ಥೆಗಳಲ್ಲಿ ಖಾಲಿಯಿರುವ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 26 ಹುದ್ದೆಗಳು ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; 26 ಹುದ್ದೆಗಳು

ಅರೆಕಾಲಿಕ ಆಂಗ್ಲ ಬೋಧಕರು 2, ವಿಜ್ಞಾನ ಮತ್ತು ಗಣಿತ ಬೋಧಕರು 2 ಹುದ್ದೆಗಳಿವೆ. ಬಿ. ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅನುಭವ ಹೊಂದಿರಬೇಕು. ಯೋಗಾ, ದೈಹಿಕ ಶಿಕ್ಷಕರು 3 ಹುದ್ದೆಗಳಿಗೆ ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ ಉತ್ತೀರ್ಣರಾದವರು ಅರ್ಜಿ ಹಾಕಬಹುದು.

ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ

 Apply For Teaching And Non Teaching Staff Kalaburagi

ಸಂಗೀತ/ಕ್ರಾಫ್ಟ್ ಶಿಕ್ಷಕರು 2 ಹುದ್ದೆಗಳಿಗೆ ಸಂಗೀತ, ವಾದ್ಯ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟೀಫೈಡ್ ಕೋರ್ಸ್ ಉತ್ತೀರ್ಣರಾದವರು ಅರ್ಜಿ ಹಾಕಬಹುದು. ಎಜ್ಯುಕೇಟರ್ 3 ಹುದ್ದೆಗಳಿಗೆ ಡಿ.ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹಗಳಲ್ಲಿ ಮಕ್ಕಳ ಶಿಕ್ಷಣ ನೀಡಲು ಅರ್ಹರಾಗಿರಬೇಕಲ್ಲದೇ ಅನುಭವ ಹೊಂದಿರಬೇಕು. ಅರೇಕಾಲಿಕ ವೈದ್ಯರ 3 ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ಪಾಸಾಗಿರುವವರು ಅರ್ಜಿ ಹಾಕಬಹುದು.

ಹಾಸನದಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿ ಹಾಸನದಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿ

ಎಲ್ಲಾ ಹುದ್ದೆಗಳು ತಾತ್ಕಾಲಿಕವಾಗಿದ್ದು ಒಂದು ವರ್ಷಕ್ಕೆ ಅನ್ವಯವಾಗುವಂತೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಖಾಯಂಗೊಳಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ವಿಳಾಸ : ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷರ್ಣಾಲಯ, ಮೊದಲನೇ ಮಹಡಿ, ಚಂದ್ರಶೇಖರ ಕ್ರೀಡಾಂಗಣದ ಎದುರಿಗೆ ಕಲಬುರಗಿ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-243219ಗೆ ಸಂಪರ್ಕಿಸಿ.

English summary
Apply for teaching and non-teaching staff post at Kalaburagi, Karnataka. Candidates can submit applications till June 4, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X